‘ಹಿಂದೂಗಳು ಸಾಬರಿಗೆ ಹುಟ್ಟಿದಂಗೆ ಇದ್ದಾರೆ...’ ಮಾತಿನಲ್ಲೇ ಬೆಂಕಿ ಹಚ್ಚಿದ ಯತ್ನಾಳ್ ವಿರುದ್ಧ ಎಫ್‌ಐಆರ್! Yatnal
ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ ಬಿಟ್ಟರೆ ಸಾಕು ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡುತ್ತಾರೆ, ಸಮಾಜದ ಶಾಂತಿ ಹಾಳು ಮಾಡುತ್ತಾರೆ ಅಂತಾ ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪ ಮಾಡುತ್ತಾರೆ. ಮತ್ತೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಅದೇ ರೀತಿ ಮಾತನಾಡುತ್ತಾ ಪದೇ ಪದೇ ಕಾನೂನಿನ ಕುಣಿಕೆಗೆ ಸಿಲುಕುತ್ತಿದ್ದಾರೆ. ಈಗಾಗಲೇ ಹತ್ತಾರು ಕೇಸ್‌ಗಳು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಳಿಗೆ ಕಾಯುತ್ತಿವೆ. ಇದೇ ಸಮಯದಲ್ಲಿ ಮತ್ತೊಮ್ಮೆ ಯತ್ನಾಳ್ ನೀಡಿರುವ ಹೇಳಿಕೆ ಬೆಂಕಿಯನ್ನೇ ಹಚ್ಚಿ ಬಿಟ್ಟಿದೆ!
ಹಿಂದೂಹುಲಿ.. ಹಿಂದೂಹುಲಿ.. ಅಂತಾನೇ ಕರೆಸಿಕೊಳ್ಳುವ ಬಸನಗೌಡ ಪಾಟೀಲ್ ಯತ್ನಾಳ್ 'ಬುಲ್ಡೋಜರ್' ಬಗ್ಗೆ ಮಾತನಾಡಿ ಕೆಲವು ದಿನಗಳ ಹಿಂದಷ್ಟೇ ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರು ಕಾಲು ಎಳೆದಿದ್ದರು. ಹೀಗಿದ್ದಾಗಲೇ ಸ್ವತಃ ತಮ್ಮದೇ ಬಿಜೆಪಿ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೇ ಮಾತನಾಡಿ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದಿಂದಲೇ ಉಚ್ಛಾಟನೆ ಆಗಿದ್ದಾರೆ. ಹೀಗೆ ಬಿಜೆಪಿ ಪಕ್ಷದಿಂದ ಹೊರ ಹಾಕಿಸಿಕೊಂಡ ನಂತರ ಹಿಂದೂಹುಲಿ ಯತ್ನಾಳ್ ವಿರುದ್ಧ ಮೊದಲನೇ ಪೊಲೀಸ್ ಕೇಸ್ ದಾಖಲಾಗಿದೆ.

ಹಿಂದೂಹುಲಿ ಯತ್ನಾಳ್ ಹೇಳಿದ್ದೇನು ಅಂದ್ರೆ...
ಬಸನಗೌಡ ಪಾಟೀಲ್ ಯತ್ನಾಳ್ ತಮ್ಮನ್ನು ತಾವು ಪಕ್ಕಾ ಹಿಂದೂವಾದಿ ಅಂತಾ ಎಲ್ಲಾ ಕಡೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಸ್ವತಃ ಬಿಜೆಪಿ ಪಕ್ಷದಲ್ಲಿ ಹಿಂದೂ ವಿರೋಧಿಗಳು ಇದ್ದಾರೆ ಎಂಬ ಆರೋಪ ಕೂಡ ಮಾಡಿದ್ದರು. ಹೀಗೆ ಹಿಂದೂಹುಲಿ ಯತ್ನಾಳ್ ಅವರು ರಾಜಾಹುಲಿ ಬಿ.ಎಸ್. ಯಡಿಯೂರಪ್ಪ & ಅವರ ಮಗ ಬಿ.ವೈ. ವಿಜಯೇಂದ್ರ ವಿರುದ್ಧ ಮಾತನಾಡಿ, ಮಾತನಾಡಿ ಬಿಜೆಪಿ ಪಕ್ಷದಿಂದಲೇ ಹೊರಗೆ ಹಾಕಿಸಿಕೊಂಡಿದ್ದಾರೆ. ಇಂಥ ಸಮಯದಲ್ಲೇ, 'ಹಿಂದೂಗಳು ಸಾಬರಿಗೆ ಹುಟ್ಟಿದಂಗೆ ಇದ್ದಾರೆ...' ಅಂತಾ...
ಯತ್ನಾಳ್ ಹೇಳಿಕೆ ಸೃಷ್ಟಿಸಿದೆ ಸಂಚಲನ!
ಅಂದಹಾಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆಯ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಮನವಮಿ ಕಾರ್ಯಕ್ರಮ ಭಾಷಣದಲ್ಲಿ ನಾಲಗೆ ಹರಿಬಿಟ್ಟಿರುವ ಯತ್ನಾಳ್, 'ನಮ್ಮ ಹಿಂದೂಗಳಲ್ಲಿ ಅತೀ ಹೆಚ್ಚು ಜನರು ಸಾಬರಿಗೆ ಹುಟ್ಟಿದವರ ಹಾಗೇ ಮಾಡುತ್ತಾರೆ. ಪ್ರವಾದಿ ಮೊಹಮ್ಮದ್‌ಗೆ ಹುಟ್ಟಿದ ಹಾಗೆ ಆಡುತ್ತಾರೆ' ಅಂತೆಲ್ಲಾ ಹೇಳಿಕೆ ನೀಡಿರುವುದು ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ರಾಮನವಮಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ. ಯತ್ನಾಳ್ ಭಾಷಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಇದೀಗ ದೊಡ್ಡ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications