ಪಿಎಸ್‌ಐ ಸ್ಕ್ಯಾಮ್ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಪೊಲೀಸರ ದೌರ್ಜನ್ಯ?

ರಾಜ್ಯದಲ್ಲಿ ಸಖತ್ ಸದ್ದು ಮಾಡಿ ನೂರಾರು ಜನರ ಭವಿಷ್ಯ ಹಾಳು ಮಾಡಿರುವ ಪಿಎಸ್‌ಐ ಸ್ಕ್ಯಾಮ್ ಬಗ್ಗೆ ದೇಶಾದ್ಯಂತ ಸುದ್ದಿಯಾಗ್ತಿದೆ. 2021ರಲ್ಲಿ 545 ಪಿಎಸ್ಐ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದೆ ವರ್ಷದ ಅಕ್ಟೋಬರ್‌ 3ಕ್ಕೆ ಲಿಖಿತ ಪರೀಕ್ಷೆ ನಡೆದಿತ್ತು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆ, ನೇಮಕಾತಿಗೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೊಮ್ಮೆ ಪರೀಕ್ಷೆಗೆ ದಿನಾಂಕ ಫಿಕ್ಸ್ ಆಗಿರುವಾಗಲೇ ಏನಾಯ್ತು ಗೊತ್ತಾ?

ಅಷ್ಟಕ್ಕೂ 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸುಮಾರು 54289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದ ಬಗ್ಗೆ ದೂರು ದಾಖಲಾದ ಕಾರಣ ಅಂದಿನ ಸರ್ಕಾರ ತನಿಖೆ ನಡೆಸಿತ್ತು. ಸುಮಾರು 110 ಕ್ಕೂ ಹೆಚ್ಚು ಜನರನ್ನ ಪರೀಕ್ಷಾ ಅಕ್ರಮದಡಿ ಬಂಧಿಸಲಾಗಿತ್ತು. ತನಿಖೆ ವೇಳೆ ಅಕ್ರಮ ಆಗಿರುವುದು ಬೆಳಕಿಗೆ ಬಂದ ಹಿನ್ನೆಲೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಪರೀಕ್ಷೆಗೆ ಹೊಸ ದಿನಾಂಕವು ಪ್ರಕಟವಾದ ಬೆನ್ನಲ್ಲಿ ಬಿಜೆಪಿ ಶಾಸಕ ಯತ್ನಾಳ್ ಹೊಸ ಆರೋಪದ ಬಾಂಬ್ ಸಿಡಿಸಿದ್ದಾರೆ.

Basanagouda Patil Yatnal Allegation About PSI Scam Of Karnataka

ಪಿಎಸ್‌ಐ ಸ್ಕ್ಯಾಮ್ ಬಗ್ಗೆ ಯತ್ನಾಳ್ ಆರೋಪವೇನು?

ಬಸನಗೌಡ ಪಾಟೀಲ್ ಯತ್ನಾಳ್ ಪಿಎಸ್‌ಐ ಸ್ಕ್ಯಾಮ್ ಬಗ್ಗೆ ಟ್ವೀಟ್ ಮಾಡಿದ್ದು 'ಪೋಲೀಸರ ದೌರ್ಜನ್ಯ ಸಾಮಾನ್ಯರ ಮೇಲಾ? PSI ಅಕ್ರಮಕ್ಕೆ ಕಾರಣವೇ ನಿಮ್ಮ ADGP , ಅವನನ್ನು ಒದ್ದು ಒಳಗೆ ಹಾಕಿದ್ದರೇ ಸತ್ಯ ಬಯಲಾಗುತ್ತಿತ್ತು. ಅವನಿಗೆ ರಾಜಾತಿಥ್ಯ ನೀಡಿ, ಈಗ ಜಾಮೀನು ಮೇಲೆ ಹೊರಗೆ ಬಂದಿದ್ದಾನೆ. ಈವರೆಗೂ PSI ಅಕ್ರಮಕ್ಕೆ ಕಾರಣರಾದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ, ನಿಮ್ಮ ದೌರ್ಜನ್ಯ ಪಾಪದ ಅಭ್ಯರ್ಥಿಗಳ ಮೇಲಾ?' ಎಂದು ಅರೋಪ ಮಾಡಿದ್ದಾರೆ. ಈ ಮೂಲಕ ಪೊಲೀಸರು ಕರ್ನಾಟಕದಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆಂದು ಯತ್ನಾಳ್ ಆರೋಪ ಮಾಡಿದ್ದಾರೆ.

ಸ್ವಪಕ್ಷೀಯರ ವಿರುದ್ಧವೂ ಯತ್ನಾಳ್ ಕೆಂಡ!

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತ್ರವಲ್ಲ, ಸ್ವಪಕ್ಷೀಯರ ವಿರುದ್ಧವೂ ಆಗಾಗ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸ್ತಾರೆ. ಹೀಗೆ ವಾಗ್ದಾಳಿ ನಡೆಸುವ ಮೂಲಕ, ಸಾಕಷ್ಟು ಸುದ್ದಿಯಲ್ಲಿ ಇರ್ತಾರೆ ಬಸನಗೌಡ ಪಾಟೀಲ್ ಯತ್ನಾಳ್. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ರೀತಿ ಗಂಭೀರ ಆರೋಪ ಮಾಡುತ್ತಿದ್ದಾರೆ. ಈ ಹೊತ್ತಲ್ಲಿ ಕರ್ನಾಟಕದಲ್ಲಿ ಪೊಲೀಸರ ದೌರ್ಜನ್ಯ ಎಂಬ ಆರೋಪ ಮಾಡಿದ್ದಾರೆ. ಅದ್ರಲ್ಲಿ ಪಿಎಸ್‌ಐ ಸ್ಕ್ಯಾಮ್ ವಿಚಾರವಾಗಿ ಯತ್ನಾಳ್ ಮಾತನಾಡಿರುವುದು ಕುತೂಹಲ ಕೆರಳಿಸಿದೆ. ಯತ್ನಾಳ್ ಆರೋಪಕ್ಕೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಏನು? ಅನ್ನೋದನ್ನ ಕಾದು ನೋಡಬೇಕಿದೆ.

Basanagouda Patil Yatnal Allegation About PSI Scam Of Karnataka

ಒಟ್ನಲ್ಲಿ ರಾಜ್ಯದಲ್ಲಿ ಪಿಎಸ್‌ಐ ಸ್ಕ್ಯಾಮ್ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸುತ್ತಿದೆ. ಈ ಕುರಿತು ಆಡಳಿತ ಪಕ್ಷ & ವಿಪಕ್ಷಗಳ ನಡುವೆ ದಂಗಲ್ ಕೂಡ ನಡೆದಿದೆ. ಹೀಗಿದ್ದಾಗಲೇ ಮತ್ತೊಮ್ಮೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಬಾಂಬ್ ಸಿಡಿಸಿದ್ದಾರೆ. ಹೀಗೆ ಮೊದಲೇ ಧಗಧಗಿಸುತ್ತಿದ್ದ ಪಿಎಸ್‌ಐ ಸ್ಕ್ಯಾಮ್ ಆರೋಪದ ಬೆಂಕಿಗೆ, ಬಸನಗೌಡ ಪಾಟೀಲ್ ಯತ್ನಾಳ್ ತುಪ್ಪ ಸುರಿದಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+