Bank Holidays in December: ಡಿಸೆಂಬರ್‌ನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಮಾಹಿತಿ
Bank Holiday: ಡಿಸೆಂಬರ್ ತಿಂಗಳ ಪ್ರಾರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಡಿಸೆಂಬರ್ ತಿಂಗಳಲ್ಲಿ ಯಾವುದಾದರೂ ಬ್ಯಾಂಕ್ ಕೆಲಸಗಳು ಇದ್ದರೆ, ಕೂಡಲೇ ಅವುಗಳನ್ನು ಮಾಡಿಕೊಳ್ಳಿ. ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 17 ದಿನ ರಜೆ ಇರಲಿದೆ. ಹಲವು ಪ್ರಮುಖ ಹಬ್ಬ ಹಾಗೂ ವಿಶೇಷ ದಿನವಾದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ರಜೆ ಇರಲಿವೆ. ಡಿಸೆಂಬರ್‌ನಲ್ಲಿ ಯಾವ ದಿನ ಬ್ಯಾಂಕ್‌ಗಳು ರಜೆ ಇರಲಿವೆ ಹಾಗೂ ಯಾವ ದಿನ ಕಾರ್ಯ ನಿರ್ವಹಿಸಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ದೇಶದ ಎಲ್ಲಾ ಬ್ಯಾಂಕ್‌ಗಳಿಗೂ ಎಲ್ಲಾ ತಿಂಗಳಲ್ಲೂ ತಿಂಗಳ ಎಲ್ಲಾ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಅದನ್ನು ಸೇರಿಸಿ ಯಾವೆಲ್ಲ ದಿನ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎನ್ನುವ ಮಾಹಿತಿ ಇಲ್ಲಿದೆ.

2024 ಮುಗಿಯಲು ಬಂದಿದೆ. 2024ರ ಕೊನೆಯ ತಿಂಗಳು ಡಿಸೆಂಬರ್. ಈ ತಿಂಗಳಿನಲ್ಲಿ ಬ್ಯಾಂಕ್‌ಗಳಲ್ಲಿ ಎರಡನೇ, ನಾಲ್ಕನೇ ಶನಿವಾರ ಹಾಗೂ ಭಾನುವಾರ ಸಾಮಾನ್ಯವಾಗಿ ರಜೆ ಇರಲಿವೆ. ಅಲ್ಲದೇ ಕ್ರಿಸ್ಮಸ್ ಹಬ್ಬ ಸೇರಿದಂತೆ ಹಲವು ಕಾರಣಗಳಿಗೆ ಡಿಸೆಂಬರ್‌ನಲ್ಲಿ ಸಾರ್ವಜನಿಕ ರಜಾ ದಿನಗಳು ಸೇರಿ 15ಕ್ಕೂ ಹೆಚ್ಚು ದಿನಗಳ ವರೆಗೆ ಎಲ್ಲಾ ಬ್ಯಾಂಕ್‌ಗಳು ಮುಚ್ಚಲಿವೆ.
ಒಟ್ಟಾರೆ ದೇಶದ ವಿವಿಧ ಬ್ಯಾಂಕ್‌ಗಳಿಗೆ ಡಿಸೆಂಬರ್‌ನಲ್ಲಿ ಒಟ್ಟು 15 ದಿನಗಳಿಗೂ ಹೆಚ್ಚು ರಜೆ ಇರಲಿದೆ. ಆದರೆ, ದೇಶದ ವಿವಿಧ ರಾಜ್ಯಗಳ ಸ್ಥಳೀಯ ಹಬ್ಬಗಳು ಹಾಗೂ ವಿಶೇಷ ದಿನಗಳಿಗೆ ಅನುಗುಣವಾಗಿ ಈ ರಜಾಗಳು ಬದಲಾಗುತ್ತಿರುತ್ತವೆ. ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾ ದಿನಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಿಸೆಂಬರ್‌ನಲ್ಲಿ ದೇಶದಾದ್ಯಂತ ವಾರಾಂತ್ಯದ ದಿನಗಳಾದ ಡಿಸೆಂಬರ್ 1 ಹಾಗೂ 8ಕ್ಕೆ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಡಿಸೆಂಬರ್ 3ಕ್ಕೆ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬದ ಭಾಗವಾಗಿ ಗೋವಾ ರಾಜ್ಯದ ಬ್ಯಾಂಕ್‌ಗಳು ಮಾತ್ರ ಒಪನ್ ಇರಲ್ಲ. ಇನ್ನು ಪಾ-ಟೋಗನ್ ನೆಂಗ್ಮಿಂಜ ಸಂಗ್ಮಾದ ಹಿನ್ನೆಲೆಯಲ್ಲಿ ಮೇಘಾಲಯದ ಬ್ಯಾಂಕ್‌ಗಳು ಡಿಸೆಂಬರ್ 12ರಂದು ಮುಚ್ಚಿರುತ್ತವೆ.

ಡಿಸೆಂಬರ್ 18ಕ್ಕೆ ಯು ಸೊಸೊಥಾಮ್ ಅವರ ಮರಣ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮೇಘಾಲಯದ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಗೋವಾ ವಿಮೋಚನಾ ದಿನದ ಅಂಗವಾಗಿ ಡಿಸೆಂಬರ್ 19ಕ್ಕೆ ಗೋವಾದಲ್ಲಿ ರಜೆ ಇರಲಿದ್ದು, ಅಂದು ಅಲ್ಲಿ ಎಲ್ಲಾ ಬ್ಯಾಂಕ್‌ಗಳಿಗೂ ರಜೆ ಇರಲಿದೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಡಿಸೆಂಬರ್ 24ಕ್ಕೆ ನಾಗಾಲ್ಯಾಂಡ್, ಮಿಜೋರಾಂ ಹಾಗೂ ಮೇಘಾಲಯ ರಾಜ್ಯದ ಬ್ಯಾಂಕ್‌ಗಳಲ್ಲಿ ರಜೆ ಇರಲಿದೆ.
ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಡಿಸೆಂಬರ್ 25ಕ್ಕೆ ರಜೆ ಇರಲಿದೆ. ಆ ದಿನ ಬ್ಯಾಂಕ್‌ಗಳಿಗೂ ರಜೆ ಇರಲಿದೆ. ಡಿಸೆಂಬರ್ 26 ಹಾಗೂ 27ಕ್ಕೆ ವಿಸ್ತೃತ ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್, ಮಿಜೋರಾಂ ಹಾಗೂ ಮೇಘಾಲಯ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ಈ ಭಾಗದಲ್ಲಿ ರಜೆ ಇರಲಿದೆ.
ಇನ್ನು ಡಿಸೆಂಬರ್‌ನ ಕೊನೆಯವಾರಗಳಲ್ಲಿಯೂ ಎಲ್ಲಾ ಭಾಗದಲ್ಲೂ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಅಂದರೆ, ಡಿಸೆಂಬರ್ 14ಕ್ಕೆ ಎರಡನೇ ಶನಿವಾರ ಹಾಗೂ ಡಿಸೆಂಬರ್ 28ಕ್ಕೆ ನಾಲ್ಕನೇ ಶನಿವಾರ ಇದೆ. ಈ ದಿನ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳ ಬ್ಯಾಂಕ್‌ಗಳಿಗೂ ರಜೆ ಇರಲಿದೆ. ಇನ್ನುಳಿದಂತೆ ಎಲ್ಲಾ ಬ್ಯಾಂಕ್‌ಗಳಿಗೂ ಭಾನುವಾರ ರಜೆ ಇರಲಿದೆ. ಡಿಸೆಂಬರ್ ತಿಂಗಳ ಭಾನುವಾರವಾದ 15, 22 ಹಾಗೂ 29ಕ್ಕೆ ಬ್ಯಾಂಕ್‌ಗಳ ರಜೆ ಇರಲಿದೆ.












Click it and Unblock the Notifications