ಬೆಂಗಳೂರು: ಟೆಕ್ಕಿ ಕವಿತಾ ಭಯಾನಕ ಸಾವು

Bangalore Sahakarnagar techie Kavitha falls to death in apartment
ಬೆಂಗಳೂರು, ಅ.3: ಸುಮಾರು ಹತ್ತು ವರ್ಷಗಳಿಂದ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮಹಿಳಾ ಟೆಕ್ಕಿಯೊಬ್ಬರು ಸಹಕಾರನಗರದಲ್ಲಿ ಭಯಾನಕವಾಗಿಜೀವ ಕಳೆದುಕೊಂಡಿದ್ದಾರೆ. ರಾಜಾಜಿನಗರ ನಿವಾಸಿ ಆರ್ಮುಗಂ ಅವರ ಪುತ್ರಿ ಕವಿತಾ (31) ಮೃತಪಟ್ಟವರು. ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.

ಕವಿತಾ ಕುಡಿದ ಅಮಲಿನಲ್ಲಿ ಆಯತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಶವ ಪರೀಕ್ಷೆ ವರದಿ ಬಂದ ನಂತರಷ್ಟೇ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಗಾಂಧಿಜಯಂತಿ ಸಂದರ್ಭದಲ್ಲಿ ಮದ್ಯ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗುತ್ತದೆ. ಆದರೆ ಕವಿತಾ ಪಾಲ್ಗೊಂಡಿದ್ದ ಪಾರ್ಟಿಗೆ ಮದ್ಯ ಎಲ್ಲಿಂದ ಬಂತು ಎಂಬುದು ಆಶ್ಚರ್ಯಕರವಾಗಿದೆ.

ಕವಿತಾ ತನ್ನ ಸ್ನೇಹಿತೆ ವಾಸವಾಗಿದ್ದ ಅಪಾರ್ಟ್‌ ಮೆಂಟ್ ಮನೆಯಲ್ಲಿ ಮಧ್ಯ ರಾತ್ರಿ ಪಕ್ಕದ ಮನೆಯ ಬಾಲ್ಕನಿಗೆ ಜಿಗಿಯುವ ಸಾಹಸದಲ್ಲಿ 11ನೇ ಮಹಡಿಯಿಂದ ಅಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಸಹಕಾರನಗರದ ಕೆನರಾ ಬ್ಯಾಂಕ್ ಕಾಲೋನಿ, ರಾಜೀವ್‌ ಗಾಂಧಿ ನಗರದಲ್ಲಿರುವ ಆಲ್‌ ಪೈನ್ ಪಿರಮಿಡ್ ಅಪಾರ್ಟ್‌ ಮೆಂಟ್‌ ನಲ್ಲಿರುವ ಈ ದುರ್ಘಟನೆ ನಡೆದಿದೆ.

ತಂಗಿ ಮದುವೆಗೆ ಬಂದಿದ್ದ ಕವಿತಾ: ಅಮೆರಿಕಾದಲ್ಲಿ ಸಾಫ್ಟ್‌ ವೇರ್ ಇಂಜಿನಿಯರ್ ಆಗಿ ಸೆಟ್ಲ್ ಆಗಿದ್ದ ಕವಿತಾ ತನ್ನ ತಂಗಿ ಕರೇನ್ ಮದುವೆಗಾಗಿ ಜೂನ್ ತಿಂಗಳಲ್ಲಿ ನಗರಕ್ಕೆ ಆಗಮಿಸಿದ್ದರು. ಕರೇನ್ ಮದುವೆಯಾಗುತ್ತಿದ್ದಂತೆ ಅಮೆರಿಕಾಕ್ಕೆ ತೆರಳಿದ್ದರು. ಆದರೆ ಕವಿತಾ ಬೆಂಗಳೂರಿನಲ್ಲೇ ನೆಲೆಸಲು ನಿರ್ಧರಿಸಿದ್ದರು. ಅಮೆರಿಕಾದಲ್ಲಿನ ಉದ್ಯೋಗವನ್ನು ತೊರೆದು ನಗರದಲ್ಲಿ ಕೆಲಸಕ್ಕೆ ಹುಡುಕಾಟ ನಡೆಸುತ್ತಿದ್ದರು ಎನ್ನಲಾಗಿದೆ.

ಕೆಲಸದ ನಿಮಿತ್ತ ಆರ್ಮುಗಂ ದಂಪತಿ ಮಂಗಳವಾರ ಕೇರಳಕ್ಕೆ ತೆರಳಿದ್ದರು. ಹೀಗಾಗಿ, ಮನೆಯಲ್ಲಿ ಕವಿತಾ ಒಬ್ಬರೇ ಇದ್ದರು. ಸಂಜೆ ಕವಿತಾಗೆ ಕರೆ ಮಾಡಿದ ಅವರ ವೈದ್ಯ ಸ್ನೇಹಿತ ರಾಜೀವ್‌ ಗಾಂಧಿನಗರದಲ್ಲಿ ಆಯೋಜಿಸಿದ್ದ ಪಾರ್ಟಿಗೆ ಆಹ್ವಾನಿಸಿದ್ದರು. ತಡರಾತ್ರಿವರೆಗೂ ವೈದ್ಯರಿಗೆ ಸೇರಿದ ಫ್ಲಾಟ್‌ ನಲ್ಲಿ ಪಾರ್ಟಿ ನಡೆದಿತ್ತು.

ನಂತರ ಸುಮಾರು 2.30 ರ ವೇಳೆಗೆ ಆಲ್‌ ಪೈನ್ ಪಿರಮಿಡ್ ಅಪಾರ್ಟ್‌ ಮೆಂಟ್‌ ನಲ್ಲಿರುವ ಸ್ನೇಹಿತೆ ವರ್ಮ ಅವರ ಫ್ಲಾಟ್‌ ಗೆ ಕವಿತಾ ತೆರಳಿದ್ದರು. ತಡರಾತ್ರಿಯಾಗಿದ್ದರಿಂದ ತನ್ನ ಫ್ಲಾಟ್‌ ನಲ್ಲೇ ಉಳಿಯುವಂತೆ ಸ್ನೇಹಿತೆ ತಿಳಿಸಿದ್ದರಿಂದ ಕವಿತಾ ಅಲ್ಲೇ ಉಳಿದುಕೊಂಡಿದ್ದರು.

ಮೃತ ಕವಿತಾ Mount Carmel College ಮತ್ತು Sir MV Institute of Technologyನಲ್ಲಿ ವ್ಯಾಸಂಗ ಮಾಡಿದ್ದರು. ಅಮೆರಿಕದ Bostonನಲ್ಲಿ MS ಮಾಡಿದ ಕವಿತಾ, ಅಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+