ಪೀಣ್ಯ: ಜಿಗುಪ್ಸೆಯಿಂದ ನಿರುದ್ಯೋಗಿ ಟೆಕ್ಕಿ ಆತ್ಮಹತ್ಯೆ

bangalore-peenya-former-intel-techie-commits-suicide
ಬೆಂಗಳೂರು, ನ.11: ಈ ಹಿಂದೆ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪೀಣ್ಯದ ಬಾಗಲಕುಂಟೆಯ ಕರೆಕಲ್ಲು ಬಳಿಯ ವಿನಾಯಕನಗರ ನಿವಾಸಿ ಕಳೆದ ವಾರ ನೇಣಿಗೆ ಶರಣಾಗಿದ್ದಾರೆ.

ಬಿಇ ಪದವೀಧರ ಶ್ರೀನಿವಾಸ ಉಪೇಂದ್ರಾಚಾರ್ (28) ಮೃತ ದುರ್ದೈವಿ. ಗಮನಾರ್ಹವೆಂದರೆ ಈತನ ಅಣ್ಣ ನಾಗಶಂಕರ ಅವರು ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಮೃತ ಶ್ರೀನಿವಾಸಗೆ ಅಪ್ಪ-ಅಮ್ಮ ಇದ್ದಾರೆ. ಶ್ರೀನಿವಾಸನ ತಾಯಿಯವರು ಇಂಗ್ಲೆಂಡ್‌ನ‌ಲ್ಲಿ ದೊಡ್ಡ ಮಗ- ಸೊಸೆ ಜತೆ ವಾಸವಾಗಿದ್ದಾರೆ.

ಶ್ರೀನಿವಾಸನ ಆತ್ಮಹತ್ಯೆ ತಿಳಿದು ಅಣ್ಣ ನಾಗಶಂಕರ ತಮ್ಮ ತಾಯಿಯೊಂದಿಗೆ ಬೆಂಗಳೂರಿಗೆ ಬರಲಿದ್ದಾರೆ ಎಂದು ಆತನ ತಂದೆ ಉಪೇಂದ್ರಾಚಾರ್ ತಿಳಿಸಿದ್ದಾರೆ. ಶ್ರೀನಿವಾಸ 2011ರಿಂದ ನಿರುದ್ಯೋಗಿಯಾಗಿದ್ದ.

ಈ ಹಿಂದೆ ತಾನು ಉದ್ಯೋಗದಲ್ಲಿದ್ದ ಇಂಟೆಲ್ ಕಂಪನಿಯಲ್ಲಿ ತನಗೆ ವಹಿಸಿದ್ದ ಪ್ರಾಜೆಕ್ಟ್ ಪೂರ್ಣಗೊಳಿಸಿದ ಬಳಿಕ ಶ್ರೀನಿವಾಸ ಉದ್ಯೋಗವಿಲ್ಲದೆ ದಿನದೂಡುತ್ತಿದ್ದ. ಈ ಮಧ್ಯೆ ಬೇರೆ ಕಡೆ ಕೆಲಸಕ್ಕೆ ಅಲೆದಾಟ ನಡೆಸಿದ್ದ. ಆದರೆ ಎಲ್ಲೂ ಒಳ್ಳೆಯ ಕೆಲಸ ಸಿಕ್ಕಿರಲಿಲ್ಲ.

ಇದರಿಂದ ಜಿಗುಪ್ಸೆಗೊಂಡು ನಾನು ಮನೆಯಿಂದ ಹೊರಗೆ ಹೋಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ಉಪೇಂದ್ರಾಚಾರ್ ಅವರು ಪೀಣ್ಯ ಪೊಲೀಸರಿಗೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+