ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೈಬಸ್ ಪ್ರಯಾಣ ದರ ಕಡಿತಗೊಳಿಸಿದ ಕೆಎಸ್ಆರ್ ಟಿಸಿ

|
Google Oneindia Kannada News

ಬೆಂಗಳೂರು, ಜ.17 : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೈಸೂರು ನಡುವೆ ಸಂಚರಿಸುವ ಫ್ಲೈಬಸ್ ಪ್ರಯಾಣ ದರ ದುಬಾರಿ ಎಂದು ಹೇಳುತ್ತಿದ್ದ ಜನರಿಗೆ ಸಿಹಿ ಸುದ್ದಿ. ಫ್ಲೈಬಸ್ ಪ್ರಯಾಣದರವನ್ನು ಕೆಎಸ್ಆರ್ ಟಿಸಿ ಪರಿಷ್ಕರಣೆ ಮಾಡಿದ್ದು, ದರ ಕಡಿತ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈಬಸ್ ಸೇವೆ ಕಲ್ಪಿಸುತ್ತಿದೆ. ಈ ಸೇವೆಯ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿ ಕೆಎಸ್ಆರ್ ಟಿಸಿ ಆದೇಶ ಹೊರಡಿಸಿದ್ದು, ದರವನ್ನು ಕಡಿಮೆ ಮಾಡಿದೆ. [ಫ್ಲೈಬಸ್ ಸೇವೆ ವಿಸ್ತರಣೆ]

Flybus

ಸದ್ಯ ಫ್ಲೈಬಸ್ ನಲ್ಲಿ ಬೆಂಗಳೂರು-ಮೈಸೂರು ನಡುವೆ ಪ್ರಯಾಣ ಮಾಡಲು ರೂ. 1000 ರೂ. ನಿಗದಿ ಪಡಿಸಲಾಗಿತ್ತು, ಅದನ್ನು 800 ರೂ.ಗಳಿಗೆ ಕಡಿತಗೊಳಿಸಲಾಗಿದೆ. ಮಕ್ಕಳಿಗೆ 750 ರೂ. ಪ್ರಯಾಣ ದರವಿತ್ತು ಅದನ್ನು 600 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇದರಿಂದ ಪ್ರಯಾಣ ದರ ಹೆಚ್ಚಾಯಿತು ಎಂದು ಆರೋಪಿಸುತ್ತಿದ್ದ ಪ್ರಯಾಣಿಕರಿಗೆ ಸಮಾಧಾನ ಸಿಕ್ಕಿದೆ.

ಮೈಸೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುವ ಫ್ಲೈಬಸ್ ಸೇವೆಗೆ ಸೆ.17ರಂದು ಚಾಲನೆ ನೀಡಲಾಗಿತ್ತು. ಪ್ರಯಾಣ ದರ ಹೆಚ್ಚು ಎಂಬ ಕಾರಣಕ್ಕೆ ಈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸದ್ಯ ಪ್ರಯಾಣ ದರ ಪರಿಷ್ಕರಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಕೆಎಸ್ಆರ್ ಟಿಸಿ ಸಮಾಧಾನ ತಂದಿದೆ.

ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಮೈಸೂರಿನ ನಡುವೆ ಸಂಚರಿಸುವ ಫ್ಲೈಬಸ್ ಮಾದರಿಯ ಬಸ್ ಸೌಲಭ್ಯವನ್ನು. ಏಪ್ರಿಲ್ ತಿಂಗಳಿಂದ ಮಂಗಳೂರು, ತಿರುಪತಿ, ಕೊಡಗು ಜಿಲ್ಲೆಗಳಿಗೂ ವಿಸ್ತರಿಸಲು ಕೆಎಸ್ಆರ್ ಟಿಸಿ ಚಿಂತನೆ ನಡೆಸಿದೆ. ಆದರೆ, ಈ ಕುರಿತು ಅಂತಿಮ ಆದೇಶ ಹೊರಬಿದ್ದಿಲ್ಲ. ಫ್ಲೈಬಸ್ ಆನ್ ಲೈನ್ ಬುಕ್ಕಿಂಗ್ ಮತ್ತು ವೇಳಾಪಟ್ಟಿ ಮಾಹಿತಿ ವೆಬ್ ಸೈಟ್ ನಲ್ಲಿ ಲಭ್ಯವಿದೆ. [ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್]

English summary
The Karnataka State Road Transport Corporation (KSRTC) has reduced the ticket fare for the Bangalore-Mysore Flybys service from Rs 1,000 to Rs 800 for adults and from Rs 750 to Rs 600 for children, with effect from this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X