ವೇಗದ ಚಾಲನೆಯೇ ಹಾವೇರಿ ಬಸ್ ದುರಂತಕ್ಕೆ ಕಾರಣ

ಮೃತಪಟ್ಟ 6 ಜನರ ಗುರುತು ಪತ್ತೆ: ಬಸ್ ಚಾಲಕ ನಯಾಜ್ ಸೇರಿದಂತೆ ಮುಂಬೈ ಮೂಲದವರಾದ ಸಮೀರ್ ಬಾನು-ಖಲೀಂ ದಂಪತಿ ಹಾಗೂ ಮಕ್ಕಳಾದ ಕೈಫ್, ರೋಮನ್, ಅಮನ್ ಮೃತಪಟ್ಟವರು.
ಹಿಂದಿನ ಸುದ್ದಿ: ಹಾವೇರಿ ಬಳಿ ಅಪಘಾತಕ್ಕೀಡಾದ ನ್ಯಾಷನಲ್ಸ್ ಟ್ರಾವೆಲ್ಸ್ ಸಂಸ್ಥೆಯ ಸಹ ಮಾಲೀಕ ಚಾಮರಾಜಪೇಟೆಯ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ ಧನ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಹೇಳಿದ್ದಾರೆ.
ಬೆಳಗಿನ ಸುದ್ದಿ: ಚಿತೆಯಾರುವ ಮುನ್ನ ಮತ್ತೊಂದು ಘೋರ ದುರಂತ ಸಂಭವಿಸಿದೆ. ಜಬ್ಬಾರ್ ಟ್ರಾವೆಲ್ಸ್ ವೋಲ್ವೊ ಬಸ್ ಸುಟ್ಟು ಕರಕಲಾಗಿ 45 ಮಂದಿ ಅಸುನೀಗಿದ ಪ್ರಕರಣ ನಡೆದು ಇನ್ನೂ 15 ದಿನವಾಗಿಲ್ಲ. ಇಂದು ಮುಂಜಾನೆ ಮತ್ತೊಂದು ವೋಲ್ವೊ ಬಸ್ ಅಗ್ನಿಗಾಹುತಿಯಾಗಿ ಸುಮಾರು 7 ಮಂದಿ ಸಜೀವ ದಹನಗೊಂಡಿದ್ದಾರೆ. ಬಸ್ಸಿನಲ್ಲಿ 45ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು.
ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ವೋಲ್ವೋ ಸೆಮಿಲಕ್ಷುರಿ ಬಸ್ ಹಾವೇರಿ ಬಳಿ ಬಂಕಾಪುರ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿ ಕಣಿಮಳ್ಳಳ್ಳಿ ಬಳಿ ವರದಾ ನದಿ ಸೇತುವೆ ಮೇಲೆ ಇಂದು ಮುಂಜಾನೆ ಮೂರು ಗಂಟೆಯಲ್ಲಿ ಈ ದುರಂತ ಸಂಭವಿಸಿದೆ.
Same-to-same ಅನ್ನುವಂತೆ ಜಬ್ಬಾರ್ ಟ್ರಾವೆಲ್ಸ್ ಬಸ್ ದುರಂತದ ಮಾದರಿಯಲ್ಲೇ ಈ ಅವಘಡವೂ ಸಂಭವಿಸಿದೆ. ಆದರೆ ಸುಮಾರು 7 ಮಂದಿ ಸಾವನ್ನಪ್ಪಿದ್ದು, ಹೆಚ್ಚು ಪ್ರಾಣಾಪಾಯವಾಗಿಲ್ಲ. ಗಾಯಗೊಂಡ 35 ಮಂದಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಕೇವಲ 2 ತಿಂಗಳ ಹೊಚ್ಚಹೊಸ ಬಸ್ ಇದಾಗಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ತಕ್ಷಣ ವಾಹನವನ್ನು ನಿಲ್ಲಿಸಿದ್ದಾನೆ. ಆದರೆ ಆ ವೇಳೆಗೆ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಹಲವಾರು ಪ್ರಯಾಣಿಕರು ಬಸ್ಸಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕರಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.
ಬಸ್ಸಿನಲ್ಲಿ ಒಟ್ಟು 43 ಮಂದಿ ಪ್ರಯಾಣಿಸುತ್ತಿದ್ದರು. ಇಬ್ಬರು ಚಾಲಕರು, ಒಬ್ಬ ಕ್ಲೀನರ್ ಇದ್ದ. ವೋಲ್ವೋ ಬಸ್ ತಯಾರಿಕಾ ಕಂಪನಿಯೇ ಸ್ಪೀಡ್ ಗವರ್ನರ್ ಅಳವಡಿಸಿರುತ್ತದೆ. ಹಾಗಾಗಿ ಬಸ್ಸು ಹೆಚ್ಚು ವೇಗದಿಂದ ಚಲಿಸಲು ಸಾಧ್ಯವಿಲ್ಲ. ಆದರೂ ಈ ದುರಂತಗಳು ಸಂಭವಿಸಿವೆ.
ಬುಧವಾರ ರಾತ್ರಿ 8 ಗಂಟೆಗೆ ಕಲಾಸಿಪಾಳ್ಯದಿಂದ ಹೊರಟ ಬಸ್ ಇಂದು ಗುರುವಾರ ಮಧ್ಯಾಹ್ನ 1 ಗಂಟೆಗೆ ಮುಂಬೈ ತಲುಪಬೇಕಿತ್ತು. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಲಿಸುತ್ತಿತ್ತು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರಿಗೆ ಸೇರಿದ ಬಸ್ ಸಂಸ್ಥೆ ಇದಾಗಿದೆ. ದಕ್ಷಿಣ ಆಫ್ರಿಕಾ ಮೂಲದ ಬ್ರೈಟ್ ಗಾಯಗೊಂಡಿದ್ದಾರೆ. ಇವರ ಮೊಬೈಲ್, ಪಾಸ್ ಪೋರ್ಟ್ ಸುಟ್ಟುಹೋಗಿದೆ.
National Travels
326, TSP road, Kalasipalyam, Bangalore- 560002, Karnataka.
Phone: (080) 26704786, (080) 26708039
ಬಸ್ಸಿನಲ್ಲಿ ಪಯಣಿಸುವಾಗ ಅನುಸರಿಬೇಕಾದ ಸುರಕ್ಷಾ ಕ್ರಮಗಳು
ವೋಲ್ವೋ ಇಂಧನ ಟ್ಯಾಂಕ್ ಸ್ಫೋಟಗೊಳ್ಳಲು ಸಾಧ್ಯವಿಲ್ಲ?












Click it and Unblock the Notifications