Darshan Thoogudeepa: ದರ್ಶನ್ ಫೋಟೋ ಇಟ್ಟು ಪೂಜೆ: ಅರ್ಚಕರಿಗೆ ಶಾಕ್‌ ಕೊಟ್ಟ ಧಾರ್ಮಿಕ ದತ್ತಿ ಇಲಾಖೆ

ಬಳ್ಳಾರಿ, ಆಗಸ್ಟ್‌ 06: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್‌ ಬಿಡುಗಡೆಗಾಗಿ ಕುಟುಂಬಸ್ಥರು ಶತಪ್ರಯತ್ನ ಮಾಡುತ್ತಿದ್ದರೆ, ಅತ್ತ ಅಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದಾರೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ

ರಾಜ್ಯದ ಶಕ್ತಿ ಪೀಠಗಳು ಸೇರಿದಂತೆ ವಿವಿಧ ದೇವಾಲಯಗಳಿಗೆ ಪ್ರತಿ ದಿನ ಭೇಟಿ ನೀಡುತ್ತಿದ್ದಾರೆ. ಜೊತೆಗೆ ದರ್ಶನ್‌ ಜೈಲಿನಿಂದ ಹೊರಬರಲಿ ಎಂದು ಅಭಿಮಾನಿಗಳು ದೇವರಿಗೆ ಜಪ-ತಪ, ವ್ರತ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ.

Ballari Priest Dismissed From His Job For He Worshipped Actor Darshan Photo In Temple

ಇದೇ ರೀತಿ ನಿನ್ನೆ (ಆಗಸ್ಟ್‌ 05) ಶ್ರಾವಣ ಸೋಮವಾರ ವಿವಿಧೆಡೆ ದರ್ಶನ್‌ ಬಿಡುಗಡೆಗಾಗಿ ಪೂಜೆಗಳನ್ನು ಮಾಡಲಾಗಿದೆ. ಈ ಪೈಕಿ ಬಳ್ಳಾರಿಯಲ್ಲಿ ದೇವರ ವಿಗ್ರಹದ ಬಳಿ ದರ್ಶನ್‌ ಫೋಟೋ ಇಟ್ಟು ಪೂಜೆ ಮಾಡಲಾಗಿದ್ದು, ಇದೀಗ ಈ ಪೂಜೆ ಅರ್ಚಕರಿಗೆ ಸಂಕಷ್ಟ ತಂದಿಟ್ಟಿದೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದೊಡ್ಡಬಸವೇಶ್ವರ ದೇವರ ಪ್ರಾಣ ಮೂರ್ತಿ ಮುಂದೆ ಅರ್ಚಕರು ನಟ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ಡೆವಿಲ್‌ ಎಂದು ಬರೆದಿರುವ ಪೋಸ್ಟರ್‌ ಸೇರಿದಂತೆ ದರ್ಶನ್‌ ವಿವಿಧ ಫೋಟೋಗಳನ್ನು ದೇವರ ಮುಂದೆ ಇಡಲಾಗಿದೆ. ದರ್ಶನ್‌ ಫೋಟೋದ ಬಳಿಯೂ ಕುಂಕುಮ ಹೂ ಇಟ್ಟು ಪೂಜೆ ಮಾಡಿ ಮಂಗಳಾರತಿ ಎತ್ತಲಾಗಿದೆ.

Ballari Priest Dismissed From His Job For He Worshipped Actor Darshan Photo In Temple

ಪ್ರಾಣ ದೇವರ ದೇವರ ಮುಂದೆ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದಕ್ಕೆ ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ಪೂಜೆ ಅರ್ಚಕರಿಗೆ ಸಂಕಷ್ಟ ತಂದಿಟ್ಟಿದೆ. ದೇವರ ಮುಂದೆ ದರ್ಶನ್ ಫೋಟೋ ಇಟ್ಟಯ ಪೂಜೆ ಮಾಡಿರುವುದು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಂತೆ ಎಂದು ಅರ್ಚಕರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ಕುರುಗೋಡು ತಾಲೂಕಿನ ದೊಡ್ಡಬಸವೇಶ್ವರ ಅರ್ಚಕ ಮಲ್ಲಿ ಎನ್ನುವವರು ದೇವಸ್ಥಾನದ ಸಂಪ್ರದಾಯಕ್ಕೆ ಧಕ್ಕೆತಂದಿದ್ದಾರೆ. ಅಲ್ಲದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪರವರು ಅರ್ಚಕರನ್ನು ಅಮಾನತು ಮಾಡಿದ್ದು, ವಿಚಾರಣೆ ಮುಗಿಯುವವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದ್ದಾರೆ ಎನ್ನಲಾಗಿದೆ. ದರ್ಶನ್‌ ಅಭಿಮಾನಿಗಳು ರಾಜ್ಯದ ಎಲ್ಲೆಡೆ ಪೂಜೆ ಮಾಡಿಸುತ್ತಿದ್ದು, ಈ ಘಟನೆಯಿಂದ ಅಭಿಮಾನಿಗಳು ತಂದು ಕೊಡುವ ಫೋಟೋ ಇಟ್ಟು ಪೂಜೆ ಮಾಡುವ ಅರ್ಚಕರು ಎಚ್ಚೆತ್ತುಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+