Breaking; ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಗುವಿಗೆ ನಾಮಕರಣ!
ಬೆಂಗಳೂರು, ಡಿಸೆಂಬರ್ 20; ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಮಂಡ್ಯ ತಲುಪಿದೆ. ಪಕ್ಷದ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಸಾವಿರಾರು ಜನರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಮಂಗಳವಾರ ಸಂಜೆ ಪಂಚರತ್ನ ರಥುಯಾತ್ರೆ ಮಳವಳ್ಳಿ ವಿಧಾನಸಭೆ ಕ್ಷೇತ್ರದ ಬೆಳಕವಾಡಿ ಗ್ರಾಮದಲ್ಲಿ ನಡೆಯಿತು. ಮಹಿಳೆಯರುರ ಕಳಶಗಳನ್ನು ಹೊತ್ತು ಪಂಚರತ್ನ ಯಾತ್ರೆ ವಾಹನದ ಮುಂದೆ ಸಾಗುವ ಮೂಲಕ ಎಚ್. ಡಿ. ಕುಮಾರಸ್ವಾಮಿ ಬರಮಾಡಿಕೊಂಡರು.
ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಮಳವಳ್ಳಿ ಕ್ಷೇತ್ರದ ಬಿಜಿ ಪುರದಲ್ಲಿ ನಡೆದ ಈ ಘಟನೆ ಬಗ್ಗೆ ಸ್ವತಃ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ರಾತ್ರಿ ಮಳವಳ್ಳಿ ಕ್ಷೇತ್ರದ ಬಿಜಿ ಪುರದ ರಾಣಿ ಎಂಬ ಮಹಿಳೆ ಎಚ್. ಡಿ. ಕುಮಾರಸ್ವಾಮಿ ಕೈಗೆ ಮಗುವನ್ನು ನೀಡಿ ಕುಮಾರಸ್ವಾಮಿ ಎಂದು ನಾಮಕರಣ ಮಾಡಿ ಎಂದು ಹೇಳಿದರು. ಈ ಘಟನೆಯ ವಿಡಿಯೋವನ್ನು ಕುಮಾರಸ್ವಾಮಿ ಟ್ವೀಟ್ ಮಾಡಿ, ಮಾಹಿತಿ ನೀಡಿದ್ದಾರೆ.
ಪಂಚರತ್ನ ರಥಯಾತ್ರೆಯಲ್ಲಿ ಎದುರಾದ ಈ ಅಪರೂಪದ ಸನ್ನಿವೇಶ ನನ್ನ ಹೃದಯತುಂಬಿ ಬರುವಂತೆ ಮಾಡಿತು. ಮಳವಳ್ಳಿ ಕ್ಷೇತ್ರದ ಬಿಜಿ ಪುರದ ಸಹೋದರಿ ಶ್ರೀಮತಿ ರಾಣಿ ಅವರು ತಮ್ಮ ಅಣ್ಣ ಶ್ರೀ ಮಹೇಶ್ ಅವರೊಡನೆ ಬಂದು ತನ್ನ ಕಂದನಿಗೆ 'ಕುಮಾರಸ್ವಾಮಿ' ಎಂದು ನಾಮಕರಣ ಮಾಡಿ ಎಂದಾಗ ನಾನು ಆ ಕ್ಷಣ ಮೌನಕ್ಕೆ ಶರಣಾದೆ.1/3#ಪಂಚರತ್ನ_ರಥಯಾತ್ರೆ#ಮಳವಳ್ಳಿ #ಮಂಡ್ಯ pic.twitter.com/5DtLBuG1Di
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 20, 2022
'ಪಂಚರತ್ನ ರಥಯಾತ್ರೆಯಲ್ಲಿ ಎದುರಾದ ಈ ಅಪರೂಪದ ಸನ್ನಿವೇಶ ನನ್ನ ಹೃದಯತುಂಬಿ ಬರುವಂತೆ ಮಾಡಿತು. ಮಳವಳ್ಳಿ ಕ್ಷೇತ್ರದ ಬಿಜಿ ಪುರದ ಸಹೋದರಿ ಶ್ರೀಮತಿ ರಾಣಿ ಅವರು ತಮ್ಮ ಅಣ್ಣ ಶ್ರೀ ಮಹೇಶ್ ಅವರೊಡನೆ ಬಂದು ತನ್ನ ಕಂದನಿಗೆ 'ಕುಮಾರಸ್ವಾಮಿ' ಎಂದು ನಾಮಕರಣ ಮಾಡಿ ಎಂದಾಗ ನಾನು ಆ ಕ್ಷಣ ಮೌನಕ್ಕೆ ಶರಣಾದೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರ ಕೋಟೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಸಹ ಮಂಡ್ಯ ಮೇಲೆ ಅಪಾರ ಪ್ರೀತಿ ಇದೆ. ಮಂಡ್ಯದ ಜನರು ಸಹ ಕುಮಾರಸ್ವಾಮಿ ಮೇಲೆ ಅಪಾರ ಪ್ರೀತಿ, ಅಭಿಮಾನವನ್ನು ಹೊಂದಿದ್ದಾರೆ.
2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಮಂಡ್ಯದಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಡಾ. ಕೆ. ಅನ್ನದಾನಿ, ಮದ್ದೂರು ಡಿ. ಸಿ. ತಮ್ಮಣ್ಣ, ಮೇಲುಕೋಟೆ ಸಿ. ಎಸ್. ಪುಟ್ಟರಾಜು, ಮಂಡ್ಯ ಎಂ. ಶ್ರೀನಿವಾಸ್, ಶ್ರೀರಂಗಪಟ್ಟಣಕ್ಕೆ ಡಾ. ರವೀಂದ್ರ ಶ್ರೀಕಂಠಯ್ಯ ಮತ್ತು ನಾಗಮಂಗಲಕ್ಕೆ ಸುರೇಶ್ ಗೌಡ ಅಭ್ಯರ್ಥಿಗಳಾಗಿದ್ದಾರೆ. ಇವರೆಲ್ಲರೂ ಹಾಲಿ ಶಾಸಕರು.
ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ನಾರಾಯಣ ಗೌಡ ಶಾಸಕರು. ಜೆಡಿಎಸ್ ಮುಂದಿನ ಚುನಾವಣೆಗೆ ಹೆಚ್. ಟಿ. ಮಂಜುನಾಥ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.












Click it and Unblock the Notifications