B Khata Updates: ಬಿ ಖಾತಾ ಅನಧಿಕೃತ ಬಡಾವಣೆ, ಈ ಆಸ್ತಿಗಳಿಗೆ ಗುಡ್‌ನ್ಯೂಸ್‌: ಸಚಿವ ಪ್ರಿಯಾಂಕ್‌ ಖರ್ಗೆ!

B Khata Updates: ಕರ್ನಾಟಕ ಸರ್ಕಾರವು ಅನಧಿಕೃತ ಹಾಗೂ ಯಾವುದೇ ಖಾತೆಗಳು ಇಲ್ಲದೆ ಇರುವ ಆಸ್ತಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಕಳೆದ 15 ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರವು ಬಿ ಖಾತಾ ನೀಡುವ ಅವಧಿಯನ್ನು ಬರೋಬ್ಬರಿ ಮೂರು ತಿಂಗಳ ಅವಧಿ ವಿಸ್ತರಣೆ ಮಾಡಿದೆ. ಅಲ್ಲದೇ ಬಿ ಖಾತಾ ನೋಂದಣಿ ಸಹ ಇದೇ ಜೂನ್‌ 1 ರಿಂದ ಪ್ರಾರಂಭವಾಗಲಿದೆ. ಈ ರೀತಿ ಇರುವಾಗಲೇ ರಾಜ್ಯ ಸರ್ಕಾರವು ಬಿ ಖಾತಾಗೆ ಸಂಬಂಧಿಸಿದಂತೆ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಲೇಔಟ್‌ಗಳಲ್ಲಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಭರ್ಜರಿ ಸುದ್ದಿಯನ್ನು ನೀಡಲಾಗಿದೆ. ಈ ಭಾಗದ ಆಸ್ತಿದಾರರಿಗೆ ರಾಜ್ಯ ಸರ್ಕಾರುವ ಬಿ ಖಾತಾ ವಿಚಾರದಲ್ಲಿ ನೀಡಿರುವ ಗುಡ್‌ನ್ಯೂಸ್‌ ಏನು ಅಂತ ನೋಡೋಣ.

ರಾಜ್ಯ ಸರ್ಕಾರವು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಸುದ್ದಿಯನ್ನು ನೀಡಿದೆ. ಕರ್ನಾಟಕದಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಮೋಸ ಆಗಬಾರದು ಎನ್ನುವ ಉದ್ದೇಶದಿಂದ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ತಂದಿದೆ. ಅದರಲ್ಲಿ ಇದೀಗ ಬಿ ಖಾತಾ ಸಹ ಪ್ರಮುಖವಾಗಿದೆ. ಇದೀಗ ಬಿ ಖಾತಾ ವಿಚಾರದಲ್ಲಿ ಗ್ರಾಮೀಣ ಭಾಗದ ಆಸ್ತಿದಾರರಿಗೂ ಗುಡ್‌ನ್ಯೂಸ್‌ ನೀಡುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೇಳಿದ್ದಾರೆ.

B Khata good news for unauthorized assets Minister Priyank Kharge

ಬಿ ಖಾತಾ ವಿಚಾರವಾಗಿ ಮಾತನಾಡಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಆಸ್ತಿಗಳ ಮಾಲೀಕರಿಗೆ ಒಂದು ಬಾರಿ ಪರಿಹಾರಕ್ಕಾಗಿ ರಾಜ್ಯದಲ್ಲಿ ಆಸ್ತಿದಾರರಿಂದ ಬೇಡಿಕೆ ಹೆಚ್ಚಳವಾಗಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಕಾನೂನನ್ನು ರೂಪಿಸಲಾಗುತ್ತಿದೆ. ಅನಧಿಕೃತ ಹಾಗೂ ಗ್ರಾಮೀಣ ಭಾಗದ ಆಸ್ತಿಗಳಿಗೆ ಬಿ ಖಾತಾ ನೀಡುವ ಯೋಜನೆ ನಡೆದಿದೆ. ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಗ್ರಾಮೀಣ ಭಾಗದ ಆಸ್ತಿಗಳಿಗೆ ಬಿ ಖಾತಾ ನೀಡುವ ಯೋಜನೆಯನ್ನು ಜುಲೈ ಎರಡನೇ ವಾರದಿಂದ ಪ್ರಾರಂಭಿಸಬೇಕು ಎಂದು ಯೋಜನೆ ರೂಪಿಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಬಿ ಖಾತಾ ಕಾನೂನಿಂದಾಗಿ ಬರೋಬ್ಬರಿ 95 ಲಕ್ಷಕ್ಕೂ ಹೆಚ್ಚು ಜನ ಆಸ್ತಿದಾರರಿಗೆ ಲಾಭವಾಗಲಿದೆ ಎಂದು ಹೇಳಲಾಗಿದೆ.

ಈ ನಿಯಮಗಳು ಕಡ್ಡಾಯ: ಇನ್ನು ಬಿ ಖಾತಾ ಆಸ್ತಿಯನ್ನು ನೋಂದಣಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ 30 ಲಕ್ಷಕ್ಕಿಂತ ಮೇಲ್ಪಟ್ಟ ಆಸ್ತಿ ನೋಂದಣಿಗೆ ಪ್ಯಾನ್ ಕಾರ್ಡ್ ಫಾರ್ಮ್ ಕಡ್ಡಾಯ ಮಾಡಲಾಗಿದೆ. ರಿಜಿಸ್ಟ್ರೇಷನ್‌ನೊಂದಿಗೆ ಪ್ಯಾನ್‌ ಕಾರ್ಡ್ ಸಹಿ ಮಾಡಿರುವ ಪ್ರತ್ಯೇಕವಾದ ಫಾರ್ಮ್‌ ಅನ್ನು ಸಹ ಸಲ್ಲಿಕೆ ಮಾಡಬೇಕು. ಈ ರೀತಿ ಮಾಡುವುದರಿಂದ ಆಸ್ತಿದಾರರ ಆಸ್ತಿ ಹಾಗೂ ಆದಾಯದ ವಿವರ ಏಕಕಾಲಕ್ಕೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಇನ್ನು ಹೊಸ ನಿಯಮದ ಅನುಸಾರ, ಸೈಟ್ ರಿಜಿಸ್ಟ್ರೇಷನ್ ಹೊಸ ನಿಯಮದಲ್ಲಿ ಆಧಾರ್‌ ಕಾರ್ಡ್‌ ಜೋಡಣೆಯನ್ನೂ ಮಾಡಿರಬೇಕು. ಅದರೊಂದಿಗೆ ಅಧಿಕೃತ ಮೊಬೈಲ್ ನಂಬರ್, ಬಯೋಮೆಟ್ರಿಕ್ ಆಸ್ಟ್ರೇಟ್ ಮತ್ತು ಹೆಸರು ಹೊಂದಾಣಿಕೆ ಆಗಿದೆಯೇ ಎನ್ನುವ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+