ಬಿಜೆಪಿ ನನಗೆ ಸಚಿವ ಸ್ಥಾನ ನೀಡಲು ಮುಂದಾಗಿತ್ತು: ಬಿ.ಸಿ ಪಾಟೀಲ್
Recommended Video

ಬೆಂಗಳೂರು, ಜೂನ್ 6: ಸಚಿವ ಸ್ಥಾನದಿಂದ ವಂಚಿತರಾಗಿರುವ ಬಿ.ಸಿ. ಪಾಟೀಲ್ ತಮ್ಮ ಅಸಮಾಧಾನ ಹೊರ ಹಾಕಿದ್ದು, ಹಾವೇರಿ ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ್ ಕಾಂಗ್ರೆಸ್ ಶಾಸಕ ತಾವಾಗಿದ್ದು, ಪಕ್ಷ ಅನ್ಯಾಯ ಮಾಡಿದೆ ಎಂದರು.
ಕಾಂಗ್ರೆಸ್‌ನ ಸಂಭಾವ್ಯ ಸಚಿವರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿ ಪಾಟೀಲ್ ನನ್ನ ಬಳಿ ಹಣವಿಲ್ಲ, ನನಗೆ ಗಾಡ್ ಫಾದರ್ ಇಲ್ಲ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.
ಬಿಜೆಪಿಯವರು ಸಚಿವ ಸ್ಥಾನ, ಆಸೆ, ಆಮಿಷವೊಡ್ಡಿದ್ದರು, ಆದರೆ ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಬಹುಷಃ ನಾನು ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ ಎಂದು ಸ್ಫೋಟಕ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.

ಹಣಕ್ಕಾಗಿ, ಅಧಿಕಾರಕ್ಕಾಗಿ ಆಸೆ ಪಡುವ ವ್ಯಕ್ತಿ ನಾನಲ್ಲ, ಅಂತಹ ಭಾವನೆಗಳೂ ನನಗೆ ಇಲ್ಲ, ಆದರೆ ನನಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ, ಇದರಿಂದ ನೋವಾಗಿದೆ, ನನ್ನ ಬೆಂಬಲಿಗರಿಗೂ ನೋವಾಗಿದ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಸಂಭಾವ್ಯ ಸಚಿವರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ, ಸಚಿವ ಸ್ಥಾನ ಕೈತಪ್ಪಿದ ಆಕಾಂಕ್ಷಿಗಳ ಬೆಂಬಲಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಸಂಪುಟ ವಿಸ್ತರಣೆ ಇಂದು ಒಂದು ಹಂತಕ್ಕಷ್ಟೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಪಕ್ಷ ಇನ್ನೂ 7 ಖಾತೆಗಳನ್ನು ಖಾಲಿ ಇಟ್ಟುಕೊಂಡಿದ್ದರೆ. ಜೆಡಿಎಸ್ 4 ಸ್ಥಾನಗಳನ್ನು ಖಾಲಿ ಇಟ್ಟುಕೊಂಡಿದೆ.












Click it and Unblock the Notifications