Get Updates
Get notified of breaking news, exclusive insights, and must-see stories!

ಬೆಂಗಳೂರು ನಗರದಲ್ಲಿ ಗರಿಷ್ಠ ಸೆಂ.ಮೀ. ಮಳೆ

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು (5 ಸೆಂ.ಮೀ.) ಮಳೆ ಬಿದ್ದಿದ್ದರೆ, ಮಂಡ್ಯ, ಚಾಮರಾಜ ನಗರ ಮಂತಾದೆಡೆ ಕಡಿಮೆ (1 ಸೆಂ.ಮೀ. ) ಮಳೆ ಬಿದ್ದಿದೆ.

ಬೆಂಗಳೂರು, ಮೇ 22: ರಾಜ್ಯಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದ್ದ ಬೇಸಿಗೆ ಬಿಸಿಲಿನ ತಾಪವನ್ನು ಕೊಂಚ ಕಡಿಮೆ ಮಾಡಿದೆ.

ಈ ಬಗ್ಗೆ ಹವಾಮಾನ ಇಲಾಖೆಯು ರಾಜ್ಯದ ನಾನಾ ಭಾಗಗಳಲ್ಲಿ ನಗರಗಳಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಪ್ರಕಟಿಸಿದ್ದು, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು (5 ಸೆಂ.ಮೀ.) ಮಳೆಯಾಗಿದ್ದು, ಕೊಡಗು, ಚಾಮರಾಜ ನಗರ, ಬೆಂಗಳೂರಿನ ಎಚ್ಎಎಲ್ ನಲ್ಲಿ ಕಡಿಮೆ (1 ಸೆಂ.ಮೀ. ) ಮಳೆ ಬಿದ್ದಿರುವುದಾಗಿ ತಿಳಿಸಿದೆ.

ಹವಾಮಾನ ಇಲಾಖೆ ಪ್ರಕಟಿಸಿದ ಪ್ರಾಂತ್ಯಾವಾರು ಮಳೆ ಪ್ರಮಾಣ ಈ ರೀತಿಯಲ್ಲಿದೆ.

Avarage rainfall in Karanataka on May 21, 2017

- ಜಿಕೆವಿಕೆ (ಬೆಂಗಳೂರು ನಗರ) 5 ಸೆಂ.ಮೀ., ಸುಳ್ಯ (ದಕ್ಷಿಣ ಕನ್ನಡ), ಬೆಂಗಳೂರು ನಗರ ತಲಾ 4 ಸೆಂ.ಮೀ.

- ಭಾಗ ಮಂಡಲ, ಪೊನ್ನಂಪೇಟೆ (ಕೊಡಗು), ಸರಗೂರು (ಮೈಸೂರು), ಗೋಪಾಲ ನಗರ (ಬೆಂಗಳೂರು ನಗರ), ಚಿಂತಾಮಣಿ (ಚಿಕ್ಕಬಳ್ಳಾಪುರ) ತಲಾ 3 ಸೆಂ.ಮೀ.

- ಸೋಮವಾರ ಪೇಟೆ (ಕೊಡಗು), ನಂಜನಗೂಡು (ಮೈಸೂರು), ಬೇಗೂರು, ಕೊಳ್ಳೇಗಾಲ (ಚಾಮರಾಜ ನಗರ), ಚಿಂತಾಮಣಿ ಪಿಟಿಒ, ಶಿಡ್ಲಘಟ್ಟ (ಚಿಕ್ಕಬಳ್ಳಾಪುರ), ಮಾಗಡಿ (ರಾಮನಗರ) ತಲಾ 2 ಸೆಂ.ಮೀ

- ಬೆಳ್ತಂಗಡಿ, ಪುತ್ತೂರು (ದಕ್ಷಿಣ ಕನ್ನಡ), ನಾಪೋಕ್ಲು, ಕುಶಾಲನಗರ (ಕೊಡಗು), ಚಾಮರಾಜನ ನಗರ, ಯಳಂದೂರು (ಚಾಮರಾಜ ನಗರ ಜಿಲ್ಲೆ), ಬೆಳ್ಳೂರು, ಹೊನಾಕೆರೆ (ಮಂಡ್ಯ), ಮಂಡ್ಯ ನಗರ, ಹೆಸರು ಘಟ್ಟ, ಯಲಹಂಕ, ಬೆಂಗಳೂರು ಕಿಯಾಲ್, ಬೆಂಗಳೂರು ಎಚ್ ಎಎಲ್ ಎಪಿಗಳಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಮಳೆ ಪ್ರಮಾಣದ ಪಟ್ಟಿಯ ಜತೆಯಲ್ಲೇ, ನಾನಾ ಭಾಗಗಳಲ್ಲಿ ದಾಖಲಾದ ಉಷ್ಣಾಂಶ ಪ್ರಮಾಣವನ್ನೂ ಹವಾಮಾನ ಇಲಾಖೆ ಪ್ರಕಟಿಸಿದೆ.

- ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದರೂ ಉತ್ತರ ಒಳನಾಡಿದ ಹಲವೆಡೆ ಬಿಸಿ ಗಾಳಿಯ ಪ್ರವಾಹ ಮುಂದುವರಿದಿದೆ. ಇದರ ಜತೆಯಲ್ಲೇ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗಿಯೇ ಇತ್ತು.

- ಭಾನುವಾರ ಹಾಗೂ ಸೋಮವಾರ (ಮೇ 21 ಹಾಗೂ ಮೇ 22) ಕಲಬುರಗಿಯಲ್ಲಿ ಗರಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ಭಾನುವಾರ 42.6 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದ್ದರೆ, ಸೋಮವಾರ ಈ ಉಷ್ಣಾಂಶ ಮತ್ತಷ್ಟು ಹೆಚ್ಚಾಗಿ 43.6 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+