ದೇವೇಗೌಡರನ್ನೇ ಹಾಸನದಿಂದ ಹೊರದಬ್ಬಿದರು ಇನ್ನೂ ನನ್ನ ಬಿಡ್ತಾರಾ: ಎ.ಟಿ. ರಾಮಸ್ವಾಮಿ ಹೇಳಿದ್ದೇನು.?
ಒಬ್ಬರ ಸ್ವಾರ್ಥಕ್ಕಾಗಿ ರಾಜಕೀಯ ಮಾಡುವವರ ಜೊತೆ ನಿಲ್ಲುವುದಕ್ಕಿಂತ ನಿಮ್ಮ ಜೊತೆ ನಿಮ್ಮ ಕಷ್ಟಗಳಿಗೆ ಭಾಗ್ಯ ಆಗುವ ಜನರನ್ನ ಆಯ್ಕೆ ಮಾಡಿ ಅಂತ ಜನರಲ್ಲಿ ಮನವಿ ಮಾಡಿದ ಎ ಟಿ ರಾಮಸ್ವಾಮಿ.
ಹಾಸನ,ಫೆಬ್ರವರಿ18: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಪಕ್ಷವನ್ನ ಬಿಟ್ಟು ಅನ್ಯ ಪಕ್ಷಗಳಿಗೆ ಹಲವು ಜೆಡಿಎಸ್ ನಾಯಕರು ಹೋಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಶಿವಲಿಂಗೇಗೌಡ ಬಳಿಕ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಪಕ್ಷ ತೊರೆಯಲು ಸಜ್ಜಾಗಿದ್ದಾರೆ.
ಈ ಕುರಿತು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನವರಿ 22ರಂದು ನಾನು ಕಾರ್ಯಕ್ರಮ ಆಯೋಜನೆ ಮಾಡಿದ್ದೆ, ಆ ಕಾರ್ಯಕ್ರಮಕ್ಕೆ ದೇವೇಗೌಡರನ್ನ ಆಹ್ವಾನ ಮಾಡಲು ಬೆಂಗಳೂರು ಹೋಗಿದ್ದೆ, ಆರೋಗ್ಯ ಕಾಪಾಡಿಕೊಳ್ಳಿ ಇನ್ನೊಂದು ದಿನ ಮಾತಾಡೋಣ ಅಂತ ಹೇಳಿದೆ.ಆದರೆ ಅವರು ರಾಜಕೀಯ ಮಾತಾಡೋಕೆ ಶುರು ಮಾಡಿದ್ರು. ನನ್ನ ಕೈ ಹಿಡ್ಕೊಂಡ್ರು ನಿನಗೆ ಏನು ಕಿರುಕುಳ ಕೊಡುತ್ತಿದ್ದಾರೆ ಏನು ಅನ್ಯಾಯ ಆಗ್ತಿದೆ ನನಗೆ ಗೊತ್ತು, ನಾನು ಬದುಕಿರೋ ತನಕ ಅನ್ಯಾಯ ಆಗುವುದಕ್ಕೆ ಬಿಡಲ್ಲ ಅಂದಿದ್ರು. ಅಂತಹ ಮುತ್ಸದ್ದಿ ರಾಜಕಾರಣಿಯನ್ನ ಮೂಲೆಗುಂಪು ಮಾಡಿದ್ದು ನನಗೆ ತುಂಬಾ ನೋವಾಗಿದೆ. ಅಂತಹ ಮಹಾನ್ ನಾಯಕನನ್ನೇ ಜಿಲ್ಲೆಯಿಂದ ಹೊರದಬ್ಬಿದವರು ನನ್ನನ್ನು ಬಿಡ್ತಾರಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇವರ ಸ್ವಾರ್ಥಕ್ಕಾಗಿ ನನ್ನನ್ನ ಬಲಿ ಕೊಡಕ್ಕೆ ಹೊರಟಿಲ್ಲ. ನಮ್ಮ ಜನರನ್ನ ಮತ್ತು ನಮ್ಮ ರೈತರನ್ನ ಬಲಿ ಕೊಡೋಕೆ ಹೊರಟಿದ್ದಾರೆ ನಾನು ಕೆಟ್ಟವನು ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ರು ಆದರೆ, ನಾನು ಅವರ ಹಾಗೆ ಮೈಕ್ ಹಾಕಿಕೊಂಡು ಮನೆ ಮುಂದೆ ಗಲಾಟೆ ಮಾಡಲು ಆಗುತ್ತಾದಾ ಎನ್ನುವ ಮೂಲಕ ಮಾಜಿ ಸಚಿವ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರರ ವಿರುದ್ಧ ಎಟಿ ರಾಮಸ್ವಾಮಿ ಗುಡುಗಿದ್ದಾರೆ.
ಇಡೀ ರಾಜ್ಯಕ್ಕೆ ಎ ಟಿ ರಾಮಸ್ವಾಮಿ ಎಂತಹ ಮನುಷ್ಯ ಎಂಬುದು ಗೊತ್ತಿದೆ ಅವತ್ತು ನಾನು ಇಡೀ ರಾತ್ರಿ ನಿದ್ದೆ ಮಾಡಿಲ್ಲ ನನ್ನ ಕಾರ್ಯಕ್ರಮಕ್ಕೆ ದೇವೇಗೌಡರ ಟೂರ್ ಪ್ಲಾನ್ ರೆಡಿ ಆಗಿತ್ತು ಆದರೆ ಬೆಳಗ್ಗೆ ಕಾರ್ಯಕ್ರಮವೇ ರದ್ದಾಗಿದೆ ಅಂತ ಹೇಳಿ ಮೆಸೇಜ್ ಹಾಕ್ತಾರೆ. ಅಂದ್ರೆ ಅಂತಹ ದೇವೇಗೌಡರನ್ನೇ ಉತ್ಸವ ಮೂರ್ತಿಯಾಗಿ ಮಾಡಿರೋ ಅವರು ನನ್ನನ್ನ ಬಿಡ್ತಾರಾ? ನಮ್ಮ ಕಾರ್ಯಕ್ರಮಕ್ಕೆ ಹೋಗಬಾರದು ಅಂತ ಕುಟುಂಬದವರೇ ತಡೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಇನ್ನೂ ಹಾಸನ ಲೋಕಸಭಾ ಚುನಾವಣೆ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಎಲ್ಲರೂ ಪ್ರಜ್ವಲ್ ರೇವಣ್ಣ ಅಂತ ಹೇಳಿದ್ರು, ನಾನು ಹೇಳಲಿಲ್ಲ ಅಲ್ಲಿಂದಲೇ ಶುರುವಾಯಿತು ನನ್ನ ಮೇಲೆ ಹಗೆ. ತನ್ನ ದೇವೇಗೌಡರು ನಿವೃತ್ತಿ ಹಾಕ್ತೀನಿ ಅಂದಿದ್ರೆ ನಾನು ಹೆಸರು ಹೇಳ್ತಿದ್ದೆ ಅವರು ನಿಂತ್ಕೊಳ್ತೀನಿ ಅಂತಿರುವಾಗ ಜಿಲ್ಲೆಯಿಂದ ಹೊರದಬ್ಬಿದ್ರು ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನ ಬಗ್ಗೆಯೂ ಅಸಮಾಧಾನ ಹೊರಹಾಕಿದರು.
ಇನ್ನು ಸಂಸದ ಪ್ರಜ್ವಲ್ ವಿರುದ್ಧ ಆಸ್ತಿ ಘೋಷಣೆ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ ವಿವಾದ ನಡೆಯುತ್ತಿದೆ ತೀವ್ರತರವಾದ ವಿಚಾರಣೆ ನಡೆಯುತ್ತಿರುವುದರಿಂದ ಶಿಕ್ಷೆ ಆಗುತ್ತದೆ ಎಂಬ ವಿಚಾರ ಗೊತ್ತಾಗಿದೆ. ಹಾಗಾಗಿ ಕೇಸ್ ಅನ್ನ ರಾಜಿ ಮಾಡ್ಕೊಳಕ್ಕಾಗಿ ಸ್ವಾರ್ಥಕ್ಕೆ ಒಳಗಾಗಿ ಎ ಮಂಜು ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.

ಆ ಮನುಷ್ಯನಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಕೊಡಲ್ಲ ಅಂತ ಗೊತ್ತು ಹಾಗಾಗಿ ಇವರ ಸ್ವಾರ್ಥಕ್ಕಾಗಿ ಒಬ್ಬ ವ್ಯಕ್ತಿಯನ್ನು ಬಲಿ ಕೊಡಲಿಕ್ಕೆ ಹೊರಟಿಲ್ಲ ಇಡೀ ನನ್ನ ಕ್ಷೇತ್ರದ ಜನರನ್ನ ಮತ್ತು ನನ್ನ ರೈತಾಪಿ ವರ್ಗದವರನ್ನ ಹಾಗೂ ಮತದಾರರನ್ನು ಬಲಿ ಕೊಡಕ್ಕೆ ಹೊರಟಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇಂತಹ ಅನ್ಯಾಯಗಳಾದಾಗ ಬೆಂಕಿ ಉಂಡೆಗಳಾಗಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.
ಒಬ್ಬರ ಸ್ವಾರ್ಥಕ್ಕಾಗಿ ರಾಜಕೀಯ ಮಾಡುವವರ ಜೊತೆ ನಿಲ್ಲುವುದಕ್ಕಿಂತ ನಿಮ್ಮ ಜೊತೆ ನಿಮ್ಮ ಕಷ್ಟಗಳಿಗೆ ಭಾಗ್ಯ ಆಗುವ ಜನರನ್ನ ಆಯ್ಕೆ ಮಾಡಿ ಅಂತ ಜನರಲ್ಲಿ ಮನವಿ ಮಾಡಿದರು.












Click it and Unblock the Notifications