ದೇವೇಗೌಡರ ಕುಟುಂಬದ ವಿರುದ್ದ ಕಿಡಿ; ಹಾಸನ ಏನ್ ಇವರಪ್ಪನ ಆಸ್ತಿನಾ ? ಎ.ಟಿ ರಾಮಸ್ವಾಮಿ ವಾಗ್ದಾಳಿ
ಹಾಸನ, ಏಪ್ರಿಲ್6: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇತ್ತ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ತೊರೆದು ಹಲವು ಜನ ಜೆಡಿಎಸ್ ನಾಯಕರು ಅನ್ಯ ಪಕ್ಷಗಳತ್ತ ಮುಖ ಮಾಡಿದ್ದು, ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅರಕಲಗೂಡು ಶಾಸಕರಾಗಿದ್ದ ಎಂ.ಟಿ ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸೇರ್ಪಡೆಯಾಗಿದ್ದು, ಹಾಸನ ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿದ್ದಾರೆ.

ಹಾಸನ ಸಿಂಹಾಸನ ಎಂದರೇ ಇವರ ಮನೆ ಆಸ್ತಿನಾ, ಇವರು ಒಂದು ಕ್ಷೇತ್ರದ ಸಮಸ್ಯೆ ಬಗೆಹರಿಸಲು ಆಗದವರು ಇನ್ನು ರಾಜ್ಯದ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ? ಎಂದು ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹೆಚ್.ಡಿ.ಸಿ.ಸಿ. ಬ್ಯಾಂಕ್ ನಲ್ಲಿ ರೈತರ ಹೆಸರಿನ ಮೇಲೆ ನಕಲಿ ಸಾಲ ಮಾಡಿಸಿರುವುದು ಸತ್ಯ. ಸತ್ಯಾಂಶ ಹೇಳಲು ಹೊರಟ್ರೆ ಇವರಿಗೆ ಸಿಟ್ಟು ಬರುತ್ತೆ. ಹಾಸನ ಸಿಂಹಾಸನ ಎಂದ್ರೆ ಇವ್ರ ಮನೆ ಆಸ್ತಿ ಅನ್ಕೊಂಡಿದ್ದಾರಾ..? ಇವರು ಈ ಒಂದು ಕ್ಷೇತ್ರದ ಸಮಸ್ಯೆ ಬಗೆಹರಿಸಲು ಆಗದವರು ಇನ್ನು ಇವರು ರಾಜ್ಯದ ಸಮಸ್ಯೆ ಬಗೆಹರಿಸ್ತಾರಾ? ಎಂಬುದು ಅನುಮಾನ ಎಂದು ವ್ಯಂಗ್ಯವಾಡಿದ್ದಾರೆ.

ಹೆಚ್ ಡಿ ಸಿ ಸಿ ಬ್ಯಾಂಕ್ ನಲ್ಲಿ ರೈತರ ಹೆಸರಲ್ಲಿ ನಕಲಿ ಸಾಲ ಮಾಡಿಸಿದ್ದಾರೆ. ನಾನು ಈ ವಿಚಾರ ಕೆಡಿಪಿ ಮೀಟಿಂಗ್ ನಲ್ಲಿ ಪ್ರಶ್ನೆ ಮಾಡಲು ಹೋದರೆ ಹೇಳಲು ಬಿಡಲಿಲ್ಲ. ಇಂತ ಅಕ್ರಮ ಪ್ರಶ್ನೆ ಮಾಡಿದಕ್ಕೆ ನನ್ನ ಮೇಲೆ ಮುಗಿ ಬೀಳಲು ಕಾರಣವಾಯಿತು. ರೈತರ ಹೆಸರು ಹೇಳ್ಕೊಂಡು ರೈತರ ಅನ್ನಕ್ಕೆ ಮಣ್ಣಾಕೋ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಹೆಚ್ ಡಿಸಿಸಿ ಬ್ಯಾಂಕ್ ನಲ್ಲಿ ರೈತರ ಹೆಸರಲ್ಲಿ ನಕಲಿ ಸಾಲ ಮಾಡಿಸಿದ್ರು. ನಾನು 7 ಲಕ್ಷ ವಾಪಾಸ್ ಕಟ್ಟಿಸಿದ್ದೇನೆ. ಅವರ ಸಂಬಂಧಿಕರನ್ನ ಅರಕಲಗೂಡಿನಲ್ಲಿ ಬಿಟ್ಟು ನಾನೇ ಕ್ಯಾಂಡಿಡೇಟ್ ಅಂತ ಪ್ರಚಾರ ಮಾಸಿದ್ರಲ್ಲ. ಇದು ಅವರಿಗೆ ಗೊತ್ತಿಲ್ಲದೆ ಮಾಡಲು ಸಾಧ್ಯಾನಾ ಎಂದು ದಳಪತಿಗಳ ವಿರುದ್ದ ಅಸಮಾಧಾನ ಹೊರಹಾಕಿದರು.
40% ಪರ್ಸೇಂಟ್ ಸರ್ಕಾರ ಅಂತ ಹೇಳಿದಾಗಲೂ ಬಿಜೆಪಿಗೆ ಸೇರ್ಪಡೆ ಆಗಿದ್ದು ಯಾಕೆ ಎಂದು ವಿಚಾರ ಕುರಿತು ಮಾತನಾಡಿ, ಯಾವ ವ್ಯವಸ್ಥೆ ಸರಿ ಇದೆ ಹೇಳಿ? ಇದೇ ಕಾರಣಕ್ಕೆ ದೆಹಲಿ ವರಿಷ್ಠರು ಕೂಡು ಹೇಳಿ ಕಳಿಸಿದ್ದಾರೆ. ವ್ಯವಸ್ಥೆ ಕೊಂಚ ಕೆಟ್ಟಿದೆ ಅದನ್ನ ಸರಿ ಮಾಡಿ ಅಂತನೂ ಹೇಳಿದ್ದಾರೆ. ಹೀಗಾಗಿ ಇದನ್ನ ಸರಿ ಮಾಡಿಕೊಂಡು ಹೋಗುವ ಜವಾಬ್ದಾರಿ ಕೂಡ ಇದೆ ಎಂದರು.
ಕಾಂಗ್ರೆಸ್ ನಲ್ಲಿ ಏನೇನು ನಡಿತು ಅನ್ನೊದು ನನಗೆ ಗೊತ್ತಿದೆ. ಈಗ ಆ ಚರ್ಚೆ ಬೇಡ. ಸಮಯ ಬಂದಾಗ ಹೇಳ್ತಿನಿ ಎಂದ ಅವರು, 2008 ರಿಂದಲೂ ಅವರು ಆಹ್ವಾನ ಕೊಡುತ್ತಲೇ ಬರುತ್ತಿದ್ದಾರೆ. ಆಗಿಂದಲೂ ನಾನು ಹೋಗಲು ನನ್ನ ಮನಸ್ಸು ಅಂಜಿತ್ತು. ಒಂದೊಂದು ಚುನಾವಣೆಗೆ ಒಂದೊಂದು ಪಕ್ಷ ಸೇರ್ಪಡೆ ನನ್ನ ಮನಸ್ಸಿಗೆ ಹಿಡಿಸಿರಲಿಲ್ಲ ಎಂದರು.
ಪುನೀತ್ ಕೆರೆಹಳ್ಳಿ ವಿವಾದದ ಕುರಿತು ಮಾತನಾಡಿ, ಅದರ ಮೇಲೆ ಏನು ನಡೆದಿದೆ ಅದಕ್ಕೆ ಕ್ರಮ ಕೈಗೊಳ್ತಾರೆ. ಯಾರೋ ಇಬ್ಬರು ಮಾಡಿದನ್ನ ಬಿಜೆಪಿ ಮಾಡಿದೆ ಅಂತಿರಾ? ನೈತಿಕ ಪೊಲೀಸ್ ಗಿರಿ ಮಾಡೋದು ತಪ್ಪು. ಮುಸ್ಲಿಂ ಮೀಸಲಾತಿ ರದ್ದತಿ ವಿಚಾರ ಮಾತನಾಡುತ್ತಾ, ಸದಾಶಿವ ಆಯೋಗ ಜಾರಿ ತಂದ ಮೇಲೆ ಈಗ ಸರಿ ಅಂತ, ತಪ್ಪು ಅಂತ ಹೇಳ್ತಿಲ್ಲ.
ಮುಸ್ಲಿಂ ಮೀಸಲಾತಿ ಆರ್ಥಿಕ ವಿಶೇಷ ಮೀಸಲಾತಿ ಮಾಡಿ 10ಪರ್ಸೇಂಟ್ ಮಾಡಿದ್ದಾರೆ. ಎಲ್ಲಾ ಅದರಲ್ಲೆ ಸೇರಿಕೊಳ್ಳುತ್ತದೆ. ಬಲಿಜ, ಕೊರಮ ಇವರಿಗೆ ನಾಲ್ಕು ಪರ್ಸೆಂಟ್ ಮಾಡಿದ್ದಾರೆ. ಹಿಂದೆಷ್ಟಿತ್ತು? ಈಗ ಎಷ್ಟಿದೆ ಎಂದು ನೋಡಿ. ನಾನು ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೂ ಅರಕಲಗೂಡಿನಲ್ಲಿ ಕೆಲ ಕಾರ್ಯಕರ್ತರು ಸುಮ್ಮನೆ ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದರು.












Click it and Unblock the Notifications