ಸಾಗರದಿಂದ ಗೋಪಾಲಕೃಷ್ಣ, ಕುತೂಹಲಕಾರಿ ಬಿಜೆಪಿ 2ನೇ ಪಟ್ಟಿ
ಬೆಂಗಳೂರು, ಏಪ್ರಿಲ್ 15: ಕರ್ನಾಟಕ ವಿಧಾನಸಭೆ ಚುನಾವಣೆ 2018ಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಮೊದಲ ಪಟ್ಟಿ ಪ್ರಕಟಿಸಿ, ಸುಧಾರಿಸಿಕೊಳ್ಳುವಷ್ಟರಲ್ಲೇ ಎರಡನೇ ಪಟ್ಟಿ ಪ್ರಕಟಿಸುವ ಸಮಯ ಬಂದೊದಗಿದೆ.
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿಯಲ್ಲಿ ಬಿ.ಎಸ್ ಯಡಿಯೂರಪ್ಪ, ಪ್ರಕಾಶ್ ಜಾವಡೇಕರ್, ಮುರಳಿಧರ್ ರಾವ್ ಸೇರಿದಂತೆ ಅನೇಕ ನಾಯಕರು, ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅಭ್ಯರ್ಥಿಗಳ ಮೊದಲ ಪಟ್ಟಿ (72 ಅಭ್ಯರ್ಥಿಗಳು) ಬಿಡುಗಡೆಯಾದ ಬೆನ್ನಲ್ಲೇ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದೆ. ಹೀಗಾಗಿ, ಎರಡನೇ ಪಟ್ಟಿಯನ್ನು ಸಾಕಷ್ಟು ಅಳೆದು ತೂಗಿ ತಯಾರಿಸಲಾಗುತ್ತಿದೆ. ಜಾತ್ಯಾತೀತ ಜನತಾ ದಳ ಮಾತ್ರ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ.

ಬಿಜೆಪಿ ಎರಡನೇ ಪಟ್ಟಿಯಲ್ಲಿ 80 ಹೆಸರು
ಎರಡನೇ ಪಟ್ಟಿಯಲ್ಲಿ 80 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ವರುಣಾ ಕ್ಷೇತ್ರದಲ್ಲಿ ಬಿ.ಎಸ್.ವೈ. ಪುತ್ರ ವಿಜಯೇಂದ್ರ ಅವರ ಹೆಸರು 2 ನೇ ಪಟ್ಟಿಯಲ್ಲಿ ಮೊದಲಿಗೆ ಪ್ರಕಟವಾಗುವ ನಿರೀಕ್ಷೆಯಿದೆ.
ಸಾಗರ ಕ್ಷೇತ್ರಕ್ಕೆ ಹರತಾಳು ಹಾಲಪ್ಪ ಇಲ್ಲವೇ ಬೇಳೂರು ಗೋಪಾಲಕೃಷ್ಣ ಅವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದ್ದು, ಬಹುತೇಕ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಖಚಿತವಾಗಿದೆ.
- ಸೊರಬ: ಕುಮಾರ್ ಬಂಗಾರಪ್ಪ
- ಹೊನ್ನಾಳಿ: ಎಂ.ಪಿ.ರೇಣುಕಾಚಾರ್ಯ
- ತೀರ್ಥಹಳ್ಳಿ: ಆರಗ ಜ್ಞಾನೇಂದ್ರ
- ಉಡುಪಿ- ರಘುಪತಿಭಟ್
- ಕಾಪು- ಲಾಲ್‍ಜಿಮೆಂಡನ್
- ಸರ್ವಜ್ಞನಗರ : ಎಂ.ಎನ್.ರೆಡ್ಡಿ
- ಶಾಂತಿನಗರ : ವಾಸುದೇವಮೂರ್ತಿ
- ಗಾಂಧಿನಗರ :ಎಲ್.ಶಿವಕುಮಾರ್
- ಮಹಾಲಕ್ಷ್ಮಿ ಲೇಔಟ್ : ಎಂ.ನಾಗರಾಜು
- ಬ್ಯಾಟರಾಯನಪುರ : ರಾಜ್‍ಗೋಪಾಲ್
- ವಿಜಯನಗರ : ಅಶ್ವತ್ಥನಾರಾಯಣ
- ನೆಲಮಂಗಲ : ನಾಗರಾಜು
- ದೊಡ್ಡಬಳ್ಳಾಪುರ: ಜೆ.ನರಸಿಂಹಸ್ವಾಮಿ
- ತರೀಕೆರೆ- ಸುರೇಶ್
- ಹರಿಹರ- ದೇವೇಂದ್ರಪ್ಪ
- ಮಾಯಕೊಂಡ- ಬಸವರಾಜನಾಯಕ್
- ದಾವಣಗೆರೆ ಉತ್ತರ- ಅರವಿಂದ್ ಜಾದವ್
- ಹರಪನಹಳ್ಳಿ- ಕರುಣಾಕರರೆಡ್ಡಿ
- ಜಗಳೂರು- ರಾಮಚಂದ್ರ
- ಚನ್ನಗಿರಿ- ಮಾಡಾಳು ವೀರೂಪಾಕ್ಷಪ್ಪ
- ಮಳವಳ್ಳಿ- ಬಿ.ಸೋಮಶೇಖರ್
- ಮದ್ದೂರು- ಶಿವಣ್ಣ
- ಚಾಮರಾಜನಗರ- ಪ್ರೊ.ಮಲ್ಲಿಕಾರ್ಜುನಪ್ಪ
- ಕೊಳ್ಳೇಗಾಲ- ನಂಜುಂಡಸ್ವಾಮಿ
- ಹನೂರು- ಪ್ರೀತಮ್‍ಗೌಡ
- ಗುಂಡ್ಲುಪೇಟೆ- ನಿರಂಜನ್‍ಕುಮಾರ್
- ಬಳ್ಳಾರಿನಗರ- ಸೋಮಶೇಖರರೆಡ್ಡಿ
- ಕನಕಗಿರಿ- ಹೇಮಾವತಿ
- ಯಲಬುರ್ಗ- ಹಾಲಪ್ಪ ಆಚಾರ್
- ಗಂಗಾವತಿ- ವೀರಣ್ಣ
- ಮಾಗಡಿ- ರಂಗದಾಮಯ್ಯ
- ರಾಮನಗರ- ತೇಜಸ್ವಿನಿ ರಮೇಶ್‍ಗೌಡ
- ಮುಳಬಾಗಿಲು- ಅಂಬರೀಶ್
- ಮಾಲೂರು- ಕೃಷ್ಣಯ್ಯಶೆಟ್ಟಿ
- ರೋಣ- ಶಂಕರ್ ಪಾಟೀಲ್ ಮುನೇನಕೊಪ್ಪ
- ಶಿರಹಟ್ಟಿ- ರಾಮಪ್ಪಲಮಾಣಿ
- ಗೌರಿಬಿದನೂರು- ಜಯಪಾಲ್‍ರೆಡ್ಡಿ
- ಬಾಗೇಪಲ್ಲಿ-ಸಂಪಗಿ
- ದೇವನಹಳ್ಳಿ- ನಾಗೇಶ
- ಶಿರಾ- ಡಿ.ಪಿ.ಗೌಡ
- ಚಿಕ್ಕನಾಯಕನಹಳ್ಳಿ- ಜೆ.ಮಾಧುಸ್ವಾಮಿ
- ಮಧುಗಿರಿ- ರಮೇಶ್‍ರೆಡ್ಡಿ
- ಕಡೂರು- ರೇಖಾ ಹುಲಿಯಪ್ಪ ಗೌಡ
- ಬೀದರ್ ಉತ್ತರ- ಸೂರ್ಯವಂಶಿ ನಾಗಮಾರಪಲ್ಲಿ
- ಗದಗ- ಅನಿಲ್‍ಮೆಣಸಿನಕಾಯಿ
- ನರಗುಂದ- ಸಿ.ಸಿ.ಪಾಟೀಲ್












Click it and Unblock the Notifications