ಅರ್ಕಾವತಿ ಹಗರಣ : ಎಚ್ಡಿಕೆಯಿಂದ 490 ಪುಟದ ಪುಸ್ತಕ ಬಿಡುಗಡೆ
ಬೆಂಗಳೂರು, ಫೆ.6 : ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದ ವಿರುದ್ಧ ಜೆಡಿಎಸ್ ಹೋರಾಟ ಆರಂಭಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ 'ಅರ್ಕಾವತಿ ಕರ್ಮಕಾಂಡ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಎಚ್‌ಡಿ ಕುಮಾರಸ್ವಾಮಿ 490 ಪುಟಗಳ 'ಅರ್ಕಾವತಿ ಕರ್ಮಕಾಂಡ' ಪುಸ್ತಕ ಬಿಡುಗಡೆ ಮಾಡಿದ್ದಾರೆ. 2002-03ರಿಂದ 2014ರವರೆಗೆ ನಡೆದಿರುವ ಎಲ್ಲ ಘಟನಾವಳಿಗಳು, 66 ಪ್ರಮುಖ ದಾಖಲೆ ಇರುವ ಈ ಪುಸ್ತಕ ಇದಾಗಿದೆ. [ಅರ್ಕಾವತಿ ಬಡಾವಣೆ ಫೈಟ್ ಯಾರು, ಏನು ಹೇಳಿದರು?]

ಪುಸ್ತಕದ ಪ್ರತಿಯನ್ನು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೂ ಕುಮಾರಸ್ವಾಮಿ ಸಲ್ಲಿಸಿದ್ದಾರೆ. ಪುಸ್ತಕ ಬಿಡುಗಡೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಕೆಲವರಿಗೆ ಸಿಬಿಐ ಮೇಲೆ ನಂಬಿಕೆಯಿಲ್ಲ. ಇನ್ನು ಕೆಲವರಿಗೆ ಆಯೋಗದ ಮೇಲೂ ನಂಬಿಕೆಯಿಲ್ಲ. ಆದ್ದರಿಂದ ನಾನು ಸಂಗ್ರಹಿಸಿದ ದಾಖಲೆಗಳನ್ನು ಸದನದ ಮುಂದಿಡುತ್ತೇನೆ ಎಂದರು. [ಸಚಿವ ಕೆಜೆ ಜಾರ್ಜ್ ಹೇಳಿದ ಹುಲಿ, ಇಲಿ ಕಥೆ!]
ಸರ್ಕಾರ ಸದನದಲ್ಲಿ ಹಗರಣದ ಬಗ್ಗೆ ದಾಖಲೆ ಇಟ್ಟು ಚರ್ಚೆ ಮಾಡಲಿ. ಅಂತಿಮ ತೀರ್ಮಾನವನ್ನು ಜನತಾ ನ್ಯಾಯಾಲಯ ಮುಂದೆ ಇಡೋಣ ಎಂದು ಹೇಳಿದರು. ಕೆಂಪಣ್ಣ ಆಯೋಗದ ವಿಚಾರದಲ್ಲಿ ಸರ್ಕಾರದ ನಡವಳಿಕೆ ನೋಡುತ್ತಿದ್ದರೆ ಕಾಟಾಚಾರಕ್ಕೆ ಆಯೋಗ ಮಾಡಿದಂತಿದೆ ಎಂದು ಕುಮಾರಸ್ವಾಮಿ ದೂರಿದರು.
ಕೆಲವೇ ದಿನಗಳ ಕಲಾಪ ಬಾಕಿ ಇದೆ. ಸಮಯ ಮುಂದೂಡಿ ಲಕ್ಷಾಂತರ ರೂ. ಖರ್ಚು ಮಾಡುವ ಬದಲು ಸದನದಲ್ಲೇ ಚರ್ಚೆ ಮಾಡೋಣ ಸಿಎಂ, ಸರ್ಕಾರಕ್ಕೆ ಧೈರ್ಯವಿದ್ದರೆ ಪುಸ್ತಕದಲ್ಲಿರುವ ದಾಖಲೆಗಳೊಂದಿಗೆ ಚರ್ಚಿಸಲಿ ಎಂದು ಸವಾಲು ಹಾಕಿದರು.












Click it and Unblock the Notifications