ವಿದ್ಯಾಸಿರಿ ಯೋಜನೆ ಬಗ್ಗೆ ತಿಳಿಯಿರಿ, ಅರ್ಜಿ ಹಾಕಿ
ಬೆಂಗಳೂರು, ಅಕ್ಟೋಬರ್ 26 : ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗಾಗಿ 'ವಿದ್ಯಾಸಿರಿ' ಯೋಜನೆಯನ್ನು ಜಾರಿಗೆ ತಂದಿದೆ. ವಿದ್ಯಾಸಿರಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಅಲ್ಪಸಂಖ್ಯಾತ ಮೆಟ್ರಿಕ್ (SSLC ನಂತರ) ನಂತರದ ವಿದ್ಯಾರ್ಥಿಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಮನೆಯಿಂದ ಕಾಲೇಜಿಗೆ 5 ಕಿ.ಮೀ. ಅಥವಾ ಅದಕ್ಕಿಂತಲೂ ಹೆಚ್ಚಿನ ದೂರ ಪ್ರಯಾಣ ಮಾಡುವ ಅಲ್ಪಸಂಖ್ಯಾತರಾದ ಕಾಲೇಜು ವಿದ್ಯಾರ್ಥಿಗಳು ಯೋಜನೆಯಡಿ ಮಾಸಿಕ 1,500 ರೂ. ಪಡೆಯಬಹುದು.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ಸಮುದಾಯಕ್ಕೆ ಸೇರಿರಬೇಕು. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2015.
ಅಹ೯ತೆಗಳು
1. ಮನೆಯಿಂದ ಕಾಲೇಜಿಗೆ ಕನಿಷ್ಠ 5 ಅಥವಾ ಅದಕ್ಕಿಂತ ಹೆಚ್ಚು ಕಿ.ಮೀ. ಇರಬೇಕು
2. ಕಳೆದ ವಾಷಿ೯ಕ ಪರೀಕ್ಷೆ ಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀಣ೯ರಾಗಿರಬೇಕು
3. ಸೂಕ್ತವಾದ ಎಲ್ಲಾ ದಾಖಲೆ ಇರಬೇಕು. ಕಾಲೇಜಿನ ಪ್ರಾಂಶುಪಾಲರ ಮೂಲಕ ಅಟೆಸ್ಟೆಡ್ ಮಾಡಿಸಬೇಕು.
ಬೇಕಾದ ದಾಖಲೆಗಳು
* ಸ್ಟ್ಯಾಂಪ್ ಸೈಝ್ ಪೋಟೋ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 2 ಲಕ್ಷ ರೂ.)
* ಬ್ಯಾಂಕ್ ಅಕೌಂಟ್ ಪ್ರತಿ
* ಅಂಕಪಟ್ಟಿ
* ಎಸೆಸೆಲ್ಸಿ ಅಂಕಪಟ್ಟಿ
* ಸ್ವಂತ ಸ್ಥಳದಿಂದ ಕಾಲೇಜಿಗಿರುವ ದೂರದ ಪ್ರಮಾಣ ಪತ್ರ (ವಾಸ ಸ್ಥಳ ದೃಢೀಕರಣ ಪತ್ರ)
* ರೇಷನ್ ಕಾರ್ಡ್/ವೋಟರ್ ಐಡಿ/ ಆಧಾರ್ ಕಾರ್ಡ್ (ಇವುಗಳಲ್ಲಿ ಯಾವುದಾದರೂ ಒಂದು )
ಆಯ್ಕೆ ಹೇಗೆ? : ಪಡೆದ ಅಂಕಗಳನ್ನು ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಸರ್ಕಾರಿ/ ಅನುದಾನಿತ/ ಖಾಸಗಿ ಹಾಸ್ಟೆಲ್ ನಲ್ಲಿರುವವರು ಅರ್ಜಿ ಸಲ್ಲಿಸಲು ಅನಹ೯ರು. ಅಜಿ೯ ಹಾಗೂ ಹೆಚ್ಚಿನ ಮಾಹಿತಿಗಳನ್ನು ಎಲ್ಲಾ ಸಾಮಾಜಿಕ ಸಂಘಸಂಸ್ಥೆಗಳಿಂದ/ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಗಳಿಂದ ಪಡೆಯಬಹುದು.












Click it and Unblock the Notifications