ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಗೆ ಅನುಪಮಾ ಶೆಣೈ ದೂರು

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್, 16: ರಾಜೀನಾಮೆ ನೀಡಿ ಹೊರಹೋಗಿದ್ದ ಡಿವೈಎಸ್ ಪಿ ಅನುಪಮಾ ಶೆಣೈ ಇದೀಗ ತಮ್ಮ ದೂರವಾಣಿ ಸಂಭಾಷಣೆಗಳನ್ನು ಆಧಾರವಾಗಿ ಇಟ್ಟುಕೊಂಡು ಕೇಂದ್ರ ಗೃಹ ಸಚಿವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಕರ್ತವ್ಯಕ್ಕೆ ಸಂಬಂಧಿಸಿ ನೈತಿಕತೆ ಕುಂದಿಸಿದ ಆರೋಪದಲ್ಲಿ ಶೆಣೈ ದೂರು ಸಲ್ಲಿಕೆ ಮಾಡಿದ್ದಾರೆ.

ದೂರವಾಣಿ ಸಂಭಾಷಣೆ ಆಧಾರವಾಗಿ ಇಟ್ಟುಕೊಂಡು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಅನುಪಮಾ ಶೆಣೈ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.[ಡಿವೈಎಸ್‌ಪಿ ಅನುಪಮಾ ಶೆಣೈ ದಿಢೀರ್ ರಾಜೀನಾಮೆ]

karnataka

ದೆಹಲಿಗೆ ತೆರಳಿರುವ ಅನುಪಮಾ ಶೆಣೈ ದೂರು ಸಲ್ಲಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರ, ಸಚಿವ ಪರಮೇಶ್ವರ ನಾಯಕ್, ಡಿಜಿಪಿ ಓಂ ಪ್ರಕಾಶ್ ಮತ್ತು ಬಳ್ಳಾರಿ ಐಜಿಪಿ ಮುರುಗನ್ ವಿರುದ್ಧ ದೂರು ಸಲ್ಲಿಕೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಂ ಪ್ರಕಾಶ್ ಆಡಿಯೋದಲ್ಲಿ ಇರುವ ಧ್ವನಿ ನನ್ನದೇ ಎಂದು ಹೇಳಿದ್ದಾರೆ. ಅನುಪಮಾ ಅವರು ಯಾವ ಕಾರಣಕ್ಕೆ ಇದನ್ನು ರೆಕಾರ್ಡ್ ಮಾಡಿಕೊಂಡರು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.[ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

ದೂರಿಗೆ ಸಂಬಂಧಿಸಿ ಅನುಪಮಾ ಶೆಣೈ ಮೂರು ಸಂಭಾಷಣೆಗಳ ಆಧಾರವನ್ನು ನೀಡಿದ್ದಾರೆ.

ಆಡಿಯೋದಲ್ಲಿ ಏನಿದೆ?
ಅನುಪಮಾ-ಪರಮೇಶ್ವರ ನಾಯಕ್
ಪರಮೇಶ್ವರ ನಾಯಕ್: ಯಾಕ್ರಿ ಕರೆ ಹೋಲ್ಡ್ ಮಾಡಿದ್ರಿ?[ಪರಮೇಶಿಪ್ರೇಮ ಪ್ರಸಂಗ... ಸಿಡಿ ಬೇಕೆ, ಆಡಿಯೋ ಬೇಕೆ?]
ಅನುಪಮಾ: ಸಾರ್ ಎಸ್ ಪಿ ಯವರ ಜತೆ ಮಾತಾಡ್ತಿದ್ದೆ
ಪರಮೇಶ್ವರ ನಾಯಕ್: ನಿಮಗೆ ಎಸ್ ಪಿ ನೇ ಹೆಚ್ಚಾಗಿಬಿಟ್ರಾ, ನಾನು ಡಿಸ್ಟಿಕ್ ಇನ್ ಚಾರ್ಜ್ ಮಿನಿಸ್ಟರ್ ಮಾತಾಡಿದ್ರೆ ಕೇಳೋಕಾಗಲ್ವಾ?
ಅನುಪಮಾ: ಸರ್, ಸ್ವಲ್ಪ ಮರ್ಯಾದಿಯಿಂದ ಮಾತನಾಡಿ

ಅನುಪಮಾ-ಓಂಪ್ರಕಾಶ್(ವರ್ಗಾವಣೆ ಮಾತುಕತೆ)
ಅನುಪಮಾ: 2012 ಬ್ಯಾಚ್ ಸರ್, ಏನೂ ಸಮಸ್ಯೆ ಇಲ್ಲ, ಅನ್‌ ಮ್ಯಾರಿಡ್, ಅಪ್ಪ ಅಮ್ಮ ಉಡುಪಿಯಲ್ಲಿ ಇದ್ದಾರೆ
ಓಂಪ್ರಕಾಶ್: ನಿಮ್ಮ ಮೇಲೆ ದೂರು ಬಂದಿದೆ,
ಅನುಪಮಾ: ಯಾಕೆ ಸರ್ ವರ್ಗಾವಣೆ, ಫನಿಶ್ ಮೆಂಟಾ?
ಓಂಪ್ರಕಾಶ್: ಇಲ್ಲ, ನಿಮ್ಮ ಒಳ್ಳೆಯದಕ್ಕೆ ಮಾಡಲಾಗಿದೆ

ಅನುಪಮಾ-ಮುರುಗನ್
ಅನುಪಮಾ: ಸರ್, ನಾನೇನು ಹೇಳಿಲ್ಲ, ಎಸ್ ಪಿ ಯವರ ಫೋನ್ ಬಂದಿತ್ತು. ಅದಕ್ಕೆ ಕರೆ ಹೋಲ್ಡ್ ಮಾಡಿದ್ದೆ. ಮರ್ಯಾದಿಯಿಂದ ಮಾತಾಡಿ ಅಂದೆ ಸರ್, ಸಾರಿ.[ಕಷ್ಟದ ಬದುಕನ್ನು ಗೆದ್ದ ಸ್ವಾವಲಂಬಿಯೇ ಅನುಪಮಾ ಶೆಣೈ]
ಮುರುಗನ್: ಇಂಥದ್ದೆಲ್ಲ ಸಾಮಾನ್ಯ ನಾವು ಸಹಿಸಿಕೊಂಡು, ಅಡ್ಜೆಸ್ಟ್ ಮಾಡಿಕೊಂಡು ಹೋಗಬೇಕು
ಅನುಪಮಾ: ಅಲ್ಲ, ಸರ್...
ಮುರುಗನ್: ನೀವು ಧೈರ್ಯ ತಗೋಬೇಕು, ಯಾರು ಏನೂ ಮಾಡಲಿಕ್ಕಾಗಲ್ಲ

ಈ ಬಗೆಯ ಸಂಭಾಷಣೆಗಳನ್ನು ಅನುಪಮಾ ದೂರಿನೊಂದಿಗೆ ಸಲ್ಲಿಕೆ ಮಾಡಿದ್ದಾರೆ. "ಕುರುಕ್ಷೇತ್ರ ಭೂಮಿಯಿಂದಲೇ ಯುದ್ಧ ಘೋಷಣೆ" ಎಂಬ ಸ್ಟೇಟಸ್ ಅನುಪಮಾ ಅವರದ್ದು ಎಂದು ಹೇಳಲಾದ ಫೇಸ್ ಬುಕ್ ಪೇಜ್ ನಿಂದ ಬಂದಿದೆ.

ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡವಳಿಕೆಯಿಂದ ಬೇಸತ್ತ ಕೂಡ್ಲಿಗಿ ಡಿವೈಎಸ್ ಪಿ ಯಾಗಿದ್ದ ಅನುಪಮಾ ಶೆಣೈ ಕಳೆದ ಜೂನ್ ತಿಂಗಳ ಆರಂಭದಲ್ಲಿ ರಾಜೀನಾಮೆ ನೀಡಿ ಕಣ್ಮರೆಯಾಗಿದ್ದರು. ನಂತರ ಕಾಣಿಸಿಕೊಂಡು ಸ್ಪಷ್ಟನೆ ನೀಡಿದ್ದರು. ಇದು ರಾಜ್ಯದಾದ್ಯಂತ ಸಂಚಲನ ಉಂಟುಮಾಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anupama Shenoy, former DySP, Kudligi subdivision, Ballari district, has reportedly lodged a complaint to Union Home Minister Rajnath singh against Parameshwar Naik, Karnataka DGP Om Prakash and Ballari IGP S Murugan. Courtesy : Public TV.
Please Wait while comments are loading...