'ಅನುಪಮಾ ಫೇಸ್‌ಬುಕ್ ಖಾತೆ ಹ್ಯಾಕ್‌ ಆಗಿರಬಹುದು'

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಡುಪಿ, ಜೂನ್ 08 : 'ಅನುಪಮಾ ಶೆಣೈ ನಮಗೂ ಮಂಗಳವಾರ ಮಧ್ಯಾಹ್ನದಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಆಕೆಯ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿರುವ ಸಾಧ್ಯತೆಗಳಿವೆ' ಎಂದು ಅನುಪಮಾ ಅವರ ಸಹೋದರ ಅಚ್ಯುತ್‌ ಶೆಣೈ ಹೇಳಿದರು.

ಉಡುಪಿಯ ಉಚ್ಚಿಲದಲ್ಲಿರುವ ನಿವಾಸದಲ್ಲಿ ಒನ್ ಇಂಡಿಯಾದೊಂದಿಗೆ ಮಾತನಾಡಿದ ಅಚ್ಯುತ್ ಶೆಣೈ ಅವರು, 'ಅನುಪಮಾ ಅವರನ್ನು ಹುಡುಕಿತ್ತಿರುವ ಪೊಲೀಸರು ನಮ್ಮನ್ನು ಇದುವರೆಗೆ ಸಂಪರ್ಕಿಸಿಲ್ಲ. ಅನುಪಮಾ ಇಂದು ಸಂಜೆ ಅಥವಾ ನಾಳೆ ಬಳ್ಳಾರಿಗೆ ಹೋಗಬಹುದು. ಬೇರೆಲ್ಲಾ ವಿಚಾರಗಳ ಬಗ್ಗೆ ಅವರೇ ಮಾತನಾಡುತ್ತಾರೆ' ಎಂದು ಸ್ಪಷ್ಟಪಡಿಸಿದರು. [ಅನುಪಮಾ ಅವರ 5 ಸ್ಟೇಟಸ್ ಗಳು]

anupama shenoy

ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ : 'ಅನುಪಮಾ ಶೆಣೈ ಅವರು ವೈಯಕ್ತಿಕವಾಗಿ ನನಗೆ ಗೊತ್ತು. ಅನುಪಮಾ ಉಡುಪಿಯವರು ಅವರನ್ನು ಭೇಟಿ ಮಾಡಿ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮನವೊಲಿಸುತ್ತೇನೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಒನ್ ಇಂಡಿಯಾಕ್ಕೆ ತಿಳಿಸಿದರು. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

ಅನುಪಮಾ ಮನೆಗೆ ಪೊಲೀಸರು : ಅನುಪಮಾ ಅವರನ್ನು ಹುಡುಕಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಬಳ್ಳಾರಿ, ಬೆಂಗಳೂರು ಮತ್ತು ಉಡುಪಿಯಲ್ಲಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. [ಈಸಬೇಕು ಇದ್ದು ಜಯಿಸಬೇಕು ಅನುಪಮಾ ಶೆಣೈ ಮೇಡಂ]

ಬಳ್ಳಾರಿ ಪೊಲೀಸರ ತಂಡ ಬುಧವಾರ ಸಂಜೆ ಉಡುಪಿಗೆ ಆಗಮಿಸಿದ್ದು, ಅನುಪಮಾ ಅವರ ನಿವಾಸದಲ್ಲಿ ಅನುಪಮಾ ಅವರ ತಂದೆ ಮತ್ತು ಸಹೋದರ ಅಚ್ಯುತ್ ಶೆಣೈ ಅವರಿಂದ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. ಆದರೆ, ಅನುಪಮಾ ಅವರು ಉಡುಪಿಯ ನಿವಾಸದಲ್ಲಿಲ್ಲ.

'ಅನುಪಮಾ ಅವರ ರಾಜೀನಾಮೆಯನ್ನು ಅಂಗೀಕರಿಸುವುದು ಬೇಡ ಅವರ ಮನವೊಲಿಸಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ. ಆದರೆ, ಅನುಪಮಾ ಅವರು ಹಿರಿಯ ಅಧಿಕಾರಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ದರಿಂದ, ಅವರನ್ನು ಹುಡುಕಲು ಪೊಲೀಸರ ತಂಡ ರಚನೆ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DySP Anupama Shenoy facebook account may haked said her brother Achuth Shenoy. Anupama Shenoy resigned for DySP post on June 4, 2016. But she active in FB page and posting statuses against Ballari district in-charge Minister P.T. Parameshwar Naik.
Please Wait while comments are loading...