ಎರಡು ಪಕ್ಷದ ನಾಯಕರ ಸಿಎಂ ಆಸೆಗೆ ಎಚ್ಡಿಕೆ ತಣ್ಣೀರು; ನಾನೇ ಕಿಂಗ್ ಎಂದ ಕುಮಾರಸ್ವಾಮಿ ಹೇಳಿಕೆ ಹಿಂದಿದ್ಯಾ ದೆಹಲಿ ರಹಸ್ಯ?
ಬೆಂಗಳೂರು,ಏಪ್ರಿಲ್ 4: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಈ ಬಾರಿಯ ಚುನಾವಣೆಗೆ ಹಲವು ತಂತ್ರಗಾರಿಕೆಯ ಮೂಲಕ ರಾಜ್ಯ ಪ್ರವಾಸ ನಡೆಸುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದ ರಾಜಕೀಯ ಪಕ್ಷಗಳಿಗೆ ಹಲವು ಸಮೀಕ್ಷೆಗಳಿಂದ ಆಘಾತ ಉಂಟಾಗಿದ್ದು, ಚುನಾವಣೆಗೂ ಮೊದಲೆ ಮೈತ್ರಿ ಸರ್ಕಾರ ರಚನೆಗೆ ಮೊರೆ ಹೋಗಿವೆ
ಈಗಾಗಲೇ ಎರಡು ಬಾರೀ ಕಿಂಗ್ ಮೇಕರ್ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಈ ಬಾರೀ ಚುನಾವಣಾ ಫಲಿತಾಂಶದ ನಂತರ ಮತ್ತೆ ಮುಖ್ಯಮಂತ್ರಿ ಸ್ಥಾನ ಒಲಿದುಬರಲಿ ಎಂದು ಹಲವು ಸಮೀಕ್ಷೆಗಳಲ್ಲಿ ವರದಿಯಾಗಿದೆ.

ಇನ್ನೂ ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಕಿಂಗ್ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗುವ ಆಸೆ ಇಟ್ಟುಕೊಂಡಿರುವ ನಾಯಕರ ಆಸೆಗೆ ತಣ್ಣೀರೆರಚಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ದೆಹಲಿ ನಾಯಕ ಜೊತೆಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿಕೆ ನೀಡಿದ್ದ ಹೆಚ್ ಡಿ ಕುಮಾರಸ್ವಾಮಿ ಇದೀಗ ನಾನೇ ಕಿಂಗ್ ಮೇಕರ್ ಎಂದು ಹೇಳಿಕೆ ನೀಡಿರುವುದು ಹಲವು ಕುತೂಹಲ ಸೃಷ್ಟಿಸಿದೆ. ಇತ್ತ ಚುನಾವಣಾ ಫಲಿತಾಂಶ ಅತಂತ್ರವಾದ್ರೆ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ದೆಹಲಿ ನಾಯಕ ಜೊತೆಗೆ ಚರ್ಚೆ ನಡೆಸಿದ್ದಾರಾ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನಾನು ಕಿಂಗ್ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿ ನಾವು 100-120 ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಹಾಗೂ ಬಿಜೆಪಿ 60ರಿಂದ 70 ಸ್ಥಾನ ದಾಟುವುದಿಲ್ಲ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಗಳ ಕೋಟಾ ದೊಡ್ಡದಿದೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗ್ತೀನಿ ಎಂದು ಅನ್ಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಅಂತಾ ಕೆಲವು ಕಡೆ ವರದಿ ಬರ್ತಿದೆ. ಆದರೆ, ಇದು ಸುಳ್ಳು. ಯಾವ ಕಾರಣಕ್ಕೂ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ. ನಮ್ಮ ಕುಟುಂಬದಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಎರಡು ಮೂರು ಬಾರಿ ಪಕ್ಷದ ಅಭ್ಯರ್ಥಿ ಇಲ್ಲದೇ ಇದ್ದಾಗ ನಿಲ್ಲಿಸಲಾಗಿತ್ತಷ್ಟೆ ಹೊರತು ಅವರಿಗೆ ಆಸಕ್ತಿಯಿರಲಿಲ್ಲ. ಕಾರ್ಯಕರ್ತರು ಮತ್ತು ದೇವೇಗೌಡರ ಸೂಚನೆ ಒತ್ತಡ ಮೇರೆಗೆ ಅನಿತಾ ಚುನಾವಣೆಗೆ ನಿಂತು ಗೆದ್ದರು. ಇನ್ನು ಮುಂದೆ ಅಭ್ಯರ್ಥಿಯಾಗಲು ಅವರಿಗೆ ಒಲವು ಇಲ್ಲ. ಚುನಾವಣಾ ರಾಜಕೀಯದಿಂದ ದೂರವುಳಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಅಭ್ಯರ್ಥಿ ಇಲ್ಲದಿದ್ದಾಗ ಪಕ್ಷದ ಗೌರವ ಉಳಿಸಲು ಕರೆದುಕೊಂಡು ಬಂದು ನಿಲ್ಲಿಸಿದೆವು, ನಾವೇ ಅವರನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದ್ದೇವೆ ಹೊರತು ಅವರಿಗೆ ಸ್ವಂತ ಆಸಕ್ತಿಯಿರಲಿಲ್ಲ. ಚುನಾವಣಾ ಕಣದಿಂದ ದೂರವುಳಿದು ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಬಿಟ್ಟಿದ್ದಾರೆ. ಸೊಸೆಯಂದಿರ ಜಗಳ ನಮ್ಮಲ್ಲಿ ಇಲ್ಲ. ರಾಜಕೀಯದಿಂದ ದೂರ ಉಳಿದಿದ್ದಾರೆ ಎಂದು ಹೇಳಿದರು.
ಹಾಸನದಲ್ಲಿ ಭವಾನಿ ರೇವಣ್ಣ ಟಿಕೆಟ್ ಬೇಡಿಕೆ ವಿಚಾರವಾಗಿ ಮಾತನಾಡಿ, ಹಾಸನ ಜಿಲ್ಲೆ ರಾಜಕಾರಣ ಬೇರೆ, ನನ್ನ ಹೆಂಡತಿ ರಾಜಕಾರಣ ಬೇರೆ, ಸೊಸೆಯಂದಿರ ಮಧ್ಯೆ ಹೊಡೆದಾಟ ಇಲ್ಲ, ನನ್ನ ಹೆಂಡತಿ ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ. ಹಾಗಾಗಿ ಆ ಕೆಟಗರಿಕೆ ಇಲ್ಲಿಯದನ್ನು ಸೇರಿಸಬೇಕಾಗಿಲ್ಲ. ಪಕ್ಷ ಉಳಿಸಲು ಕೆಲವು ತೀರ್ಮಾನ ಮಾಡಿದ್ದೇನೆ. ಪಕ್ಷ ಕಟ್ಟಿ ಅದನ್ನು ಉಳಿಸಲು ಪಟ್ಟಿರುವ ಕಷ್ಟ ನನಗೆ ಗೊತ್ತು. ಹಾಗಾಗಿ ನನ್ನ ಕುಟುಂಬವನ್ನು ಅನಿತಾ ಕುಮಾರಸ್ವಾಮಿಯನ್ನು ಮಧ್ಯೆ ತರಬೇಡಿ, ಅವರು ಗೌರವಯುತವಾಗಿ ಕುಟುಂಬದ ಮರ್ಯಾದೆ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಹಾಸನದ ರಾಜಕೀಯವೇ ಬೇರೆ, ಮಂಡ್ಯದ ರಾಜಕೀಯವೇ ಬೇರೆ. ಇವೆರಡನ್ನೂ ಒಟ್ಟಿಗೆ ಮಾಡಿ ನೋಡುವುದು ಬೇಡ. ನಮ್ಮ ಕುಟುಂಬದಲ್ಲಿ ಟಿಕೆಟ್ ಗಾಗಿ ಸೊಸೆ ಹೊಡೆದಾಟ ಏನೂ ಇಲ್ಲ, ಇವೆಲ್ಲಾ ಷಡ್ಯಂತ್ರ, ನನ್ನ ಹೆಂಡ್ತಿ ಪಕ್ಷ ಉಳಿಸಿಕೊಳ್ಳಲು ಚುನಾವಣೆ ನಿಂತರು ಅನ್ನೋದು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಈಗ ಇದನ್ನು ಹಾಸನ ಅಭ್ಯರ್ಥಿ ಆಯ್ಕೆಗೂ ಹೊಂದಿಸಿ ಚರ್ಚೆ ಮಾಡುವುದು ಬೇಡ ಎಂದರು.












Click it and Unblock the Notifications