ವಿವಾಹ ನಿಶ್ಚಯವಾಗಿದ್ದ ಪೇದೆ ಗುಂಡಿಟ್ಟುಕೊಂಡು ಆತ್ಮಹತ್ಯೆ

ಅಲ್ಬರ್ಟ್ ಡಿಸೋಜಾ ಕೆಎಸ್ಆರ್ ಪಿಯ 7ನೇ ಬೆಟಾಲಿಯನ್ ಪೇದೆ. ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪ ಜಡ್ಡಿನಗದ್ದೆ ಬಳಿ ಕಾರ್ಯನಿರ್ವಹಿಸುವಾಗ ಕಾಡಿನ ಮಧ್ಯೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಡಿಸೋಜಾ ನಕ್ಸಲ್ ನಿಗ್ರಹ ಪಡೆಯ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಡಿಕೇರಿಯ ಯುವತಿ ಜತೆ ಇವರ ಮದುವೆ ನಿಶ್ಚಿತವಾಗಿತ್ತು.
ಮೃತ ಡಿಸೋಜಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯಾವುದೇ ಪತ್ರ ಬರೆದಿಟ್ಟಿಲ್ಲ. ಹಾಗಾಗಿ ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಡಿಸೋಜಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು.















Click it and Unblock the Notifications