ಅಮಿತ್ ಶಾ ಆಗಸ್ಟ್ 12ರಿಂದ ರಾಜ್ಯ ಪ್ರವಾಸ
ಬೆಂಗಳೂರು, ಆಗಸ್ಟ್ 6: ಆಗಸ್ಟ್ 12ರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಮಾಡಲಿದ್ದಾರೆ. ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಕರ್ನಾಟಕಕ್ಕೆ ಬರುತ್ತಿದ್ದಾರೆ.
ಪ್ರವಾಸದ ವೇಳೆ ಮೊದಲ ದಿನ ಚಿಂತಕರು ಮತ್ತು ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. ಎರಡನೇ ದಿನ ಎಸ್.ಸಿ ಎಸ್.ಟಿ ಮತ್ತು ಒಬಿಸಿ ಸಂಘಟನೆಗಳು ಮತ್ತು ನಾಯಕರ ಜತೆ ವಿಶೇಷ ಸಭೆ ನಡೆಸಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಗ್ರಂಥಾಲಯ ಉದ್ಘಾಟನೆ, ಬೂತ್ ಸಮಿತಿ ಸಭೆ, ದಲಿತರ ಮನೆಯಲ್ಲಿ ಉಪಹಾರ ಸೇವನೆ, ಹೀಗೆ ಹಲವು ಕಾರ್ಯಕ್ರಮಗಳು ನಿಗದಿಯಾಗಿವೆ.

ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಆಗಸ್ಟ್ 13 ರಂದು ಅಮಿತ್ ಶಾ ಭೇಟಿಯಾಗಲಿದ್ದಾರೆ. ಬಿಜೆಪಿ ನಾಯಕರು, ಪದಾಧಿಕಾರಿಗಳ ಜತೆಯೂ ಹಲವು ಸಭೆಗಳನ್ನು, ಸಂವಾದಗಳನ್ನು ಶಾ ನಡೆಸಲಿದ್ದಾರೆ.












Click it and Unblock the Notifications