"ಅಂಬೇಡ್ಕರ್ ಸಂವಿಧಾನ ಜಾರಿಗೆ ಬರದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ" ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 14: ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ. ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತ ಮತ್ತು ಪ್ರಪಂಚದಾದ್ಯಂತ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಭಾರತ ಸರ್ಕಾರವು 31ನೇ ಮಾರ್ಚ್, 2021 ರಂದು ಡಾ. ಅಂಬೇಡ್ಕರ್ ಅವರ ಜನ್ಮದಿನದ ನಿಮಿತ್ತ ಏಪ್ರಿಲ್ 14 ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ.
ಹಲವು ಗಣ್ಯರು ಇಂದು ಸಂವಿಧಾನ ಶಿಲ್ಪಿಯನ್ನು ನೆನಪಿಸಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅರಿವಿನ ಗುರುವಿಗೆ ನಮನ ಎಂದಿದ್ದಾರೆ. "ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು. ಮಹಾಗುರುವಿಗೆ ನಮನಗಳು" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

"ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯ ಪ್ರತಿರೂಪವಾಗಿರುವ ಸಂವಿಧಾನಕ್ಕೆ ಎದುರಾಗಿರುವ ಬೆದರಿಕೆಯ ವಿರುದ್ಧ ಹೋರಾಡುವುದೇ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವ. ಈ ಹೋರಾಟಕ್ಕೆ ಬಾಬಾಸಾಹೇಬರ ಚಿಂತನೆಗಳು ನಮ್ಮ ಆಯುಧವಾಗಲಿ. ಅರಿವಿನ ಗುರುವಿಗೆ ಗೌರವದ ನಮನಗಳು" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಬಿ.ಆರ್.ಅಂಬೇಡ್ಕರ್ ಎಚ್ಚರಿಕೆಯ ಸಂದೇಶವನ್ನು ನಾನು ಮಂಡಿಸಿರುವ ಹದಿಮೂರು ಬಜೆಟ್ ಗಳಲ್ಲಿ ಪಾಲಿಸಿದ್ದೇನೆ. ಇದು ನಾನು ಬಾಬಾ ಸಾಹೇಬರಿಗೆ ಸಲ್ಲಿಸಿದ ಗೌರವವೂ ಹೌದು" ಎಂದು ತಾವು ಬಜೆಟ್ ಮಂಡನೆಗಳಲ್ಲಿ ಅಂಬೇಡ್ಕರ್ ಅವರ ಸಂದೇಶಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
"ನಿರ್ಲಕ್ಷ್ಯ, ತುಚ್ಛೀಕರಣ, ದೈವೀಕರಣದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದಮನಿಸಲು ಪ್ರಯತ್ನಿಸಿ ವಿಫಲರಾದ ಕೋಮುವಾದಿ ಶಕ್ತಿಗಳು ಈಗ ಬಾಬಾಸಾಹೇಬರನ್ನು ಆಪೋಶನ ತೆಗೆದುಕೊಂಡು ತಮ್ಮವರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಹುನ್ನಾರದ ಬಗ್ಗೆ ನಾವು ಎಚ್ಚರವಾಗಿರಬೇಕು" ಎಂದು ಕೋಮು ಶಕ್ತಿಗಳ ವಿಜೃಂಭಣೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ.
— Siddaramaiah (@siddaramaiah) April 14, 2023
ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು. ಮಹಾಗುರುವಿಗೆ ನಮನಗಳು.
4/4#AmbedkarJayanti2023 pic.twitter.com/9gDsT30Dzs
"ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ. ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು. ಮಹಾಗುರುವಿಗೆ ನಮನಗಳು" ಎಮದು ಹೇಳುವ ಮೂಲಕ ಡಾ.ಬಿ. ಆರ್ ಅಂಬೇಡ್ಕರ್ ಅವರ ಸಂವಿಧಾನ ಆಶಯವನ್ನು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಇ ಎಚ್.ಡಿ ಕುಮಾರಸ್ವಾಮಿ ಕೂಡ ಮಹಾ ಮಾನವತಾವಾದಿ ಬಿ. ಅರ್. ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡಿದ್ದು, "ಸಮ ಸಮಾಜದ ಕನಸು ಕಂಡು, ಅದನ್ನು ಸಾಕಾರ ಮಾಡಲು ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟ ಮಹಾನ್ ಮಾನವತಾವಾದಿ, ಭಾರತಮಾತೆಯ ಹೆಮ್ಮೆಯ ಪುತ್ರರು, ಸಂವಿಧಾನ ಶಿಲ್ಪಿಗಳಾದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಈ ಪುಣ್ಯದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು" ಎಂದಿದ್ದಾರೆ.
ಸಮ ಸಮಾಜದ ಕನಸು ಕಂಡು, ಅದನ್ನು ಸಾಕಾರ ಮಾಡಲು ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟ ಮಹಾನ್ ಮಾನವತಾವಾದಿ, ಭಾರತಮಾತೆಯ ಹೆಮ್ಮೆಯ ಪುತ್ರರು, ಸಂವಿಧಾನ ಶಿಲ್ಪಿಗಳಾದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಈ ಪುಣ್ಯದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು. 1/2#ಅಂಬೇಡ್ಕರ್ #AmbedkarJayanti2023 pic.twitter.com/lbPzRndTFQ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 14, 2023
ಮುಂದುವರಿದು, "ದೊಡ್ಡ ಪ್ರಯತ್ನಗಳನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ" ಎನ್ನುವ ಬಾಬಾ ಸಾಹೇಬರ ಮಾತು ನನಗೆ ಪ್ರೇರಣೆ. ಆ ನಿಟ್ಟಿನಲ್ಲಿ ಸರ್ವರ ಶ್ರೇಯೋಭಿವೃದ್ಧಿಗಾಗಿ ನಾನು ರೂಪಿಸಿರುವ ʼಪಂಚರತ್ನ ಯೋಜನೆʼಗಳು ಸಂವಿಧಾನದ ನೈಜ ಆಶಯವನ್ನು ಎತ್ತಿಹಿಡಿಯುತ್ತವೆ ಎನ್ನುವುದನ್ನು ನಾನು ವಿನಮ್ರನಾಗಿ ಹೇಳಬಯಸುತ್ತೇನೆ" ಎಂದು ಅಂಬೇಡ್ಕರ್ ಅವರ ಆಸಯಗಳನ್ನು ತಾವು ಪಂಚರತ್ನ ಯೋಜನೆಗಳಲ್ಲಿ ಅಳವಡಿಸಿಕೊಂಡಿದ್ದೇವೆ ಎಂದಿದ್ದಾರೆ.












Click it and Unblock the Notifications