ಸಹೋದರ ಹರೀಶ್ ಮೃತಪಟ್ಟಿದ್ದ ದಿನವೇ ಅಂಬರೀಶ್ ನಿಧನ

Recommended Video

      Ambareesh, Kannada Actor Demise : ಕಳೆದ ವರ್ಷ ಅಣ್ಣ ನಿಧನರಾದ ದಿನಾಂಕವೇ ಅಂಬರೀಶ್ ನಿಧನ | Oneindia Kannada

      ಬೆಂಗಳೂರು, ನವೆಂಬರ್ 25: ಕೆಲವರು ಸಾವಿನಲ್ಲಿಯೂ ಒಂದಾಗುತ್ತಾರೆ ಎಂಬ ಮಾತಿದೆ. ಇದು ಅಂಬರೀಶ್ ವಿಚಾರದಲ್ಲಿ ಸತ್ಯವಾಗಿದೆ. ಅವರು ತಮ್ಮ ಸಹೋದರನನ್ನು ಸೇರಿಕೊಂಡಿದ್ದಾರೆ. ಅದು ಸರಿಯಾಗಿ ಒಂದು ವರ್ಷದ ನಂತರ.

      ಅಂಬರೀಶ್ ಅವರ ಅಣ್ಣ ಡಾ. ಹರೀಶ್ (69) ಕಳೆದ ವರ್ಷದ ಇದೇ ನವೆಂಬರ್ 24ರಂದು ನಿಧನರಾಗಿದ್ದರು. ಸಹೋದರನನ್ನು ಕಳೆದುಕೊಂಡ ಸರಿಯಾಗಿ ಒಂದು ವರ್ಷದ ಬಳಿಕ ಅಂಬರೀಶ್ ಕೂಡ ಕೊನೆಯುಸಿರೆಳೆದಿದ್ದಾರೆ.

      ambarish elder brother Harish was died on the same day last year

      ವೃತ್ತಿಯಲ್ಲಿ ವೈದ್ಯರಾಗಿದ್ದ ಹರೀಶ್, ಕೆ.ಎಂ. ದೊಡ್ಡಿಯಲ್ಲಿ ಸ್ವಂತ ಕ್ಲಿನಿಕ್ ಹೊಂದಿದ್ದರು. 1948ರಲ್ಲಿ ಜನಿಸಿದ್ದ ಅವರು 35 ವರ್ಷಗಳಿಂದ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು.

      ರೆಬೆಲ್ ಸ್ಟಾರ್ ಅಂಬರೀಶ್ ಸಹೋದರ ಡಾ.ಹರೀಶ್ ನಿಧನ

      ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರಿನಲ್ಲಿ 2017ರ ನವೆಂಬರ್ 24ರಂದು ನಿಧನ ಹೊಂದಿದ್ದರು.

      ಕಾಕತಾಳೀಯವೆಂಬಂತೆ ಅಂಬರೀಶ್ ಕೂಡ ನವೆಂಬರ್ 24ರಂದೇ ಕೊನೆಯುಸಿರೆಳೆದಿದ್ದಾರೆ.

      ಶನಿವಾರ ನಿಧನರಾದ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು.

      ಸಂಪೂರ್ಣ ಒಂದು ದಿನ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸೋಮವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+