ಮತದಾನ ಹತ್ತಿರ ಬಂತು ನೋಟಾ ಬಗ್ಗೆ ತಿಳಿದುಕೊಳ್ಳಿ

ಬೆಂಗಳೂರು, ಏ. 15 : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮಾಡಲು ಎರಡು ದಿನಗಳು ಬಾಕಿ ಉಳಿದಿವೆ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣಾ ಆಯೋಗ ನೋಟಾ ಬಳಸುವ ಅವಕಾಶವನ್ನು ಮತದಾರರಿಗೆ ಒದಗಿಸಿದೆ. ಹಾಗಾದರೆ ನೋಟಾ ಎಂದರೇನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

None Of The Above ಎಂಬುದು NOTA ಪದದ ಪೂರ್ಣ ಅರ್ಥ. ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ, ಅಂದರೆ ನನ್ ಆಫ್​ ದಿ ಅಬೌ ಎಂಬುದು ನೋಟಾದ ಪೂರ್ಣ ಅರ್ಥ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ನೋಟಾ ಬಟನ್ ಅನ್ನು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ನೀಡಲಾಗಿದೆ.

NOTA

ನೋಟಾ ಜಾರಿಗೊಳಿಸಲು ಅವಕಾಶ ಕಲ್ಪಿಸಬೇಕೆಂದು 2009ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಹಲವು ಸುತ್ತಿನ ವಿಚಾರಣೆ ಬಳಿಕ 2013 ಸೆಪ್ಟಂಬರ್ 27ರಂದು ಸುಪ್ರೀಂಕೋರ್ಟ್ 'ನೋಟಾ ' ಜಾರಿಗೊಳಿಸಲು ಚುನಾವಣಾ ಆಯೋಗ ಅವಕಾಶ ನೀಡಿತು. [ಸುಪ್ರೀಂಕೋರ್ಟ್ ಹೇಳಿದ್ದೇನು]

None of the Above ಎಂಬ ಆಯ್ಕೆಯನ್ನು ಇಂಗ್ಲಿಷ್ ಭಾಷೆಯ ಬದಲು ಆಯಾ ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಆದೇಶಿಸಿತ್ತು. ಆದ್ದರಿಂದ ಕನ್ನಡದಲ್ಲೂ ಮೇಲಿನವರಲ್ಲಿ ಯಾರಿಗೂ ಮತ ಹಾಕುವುದಿಲ್ಲ ಎಂಬ ಆಯ್ಕೆ ದೊರೆಯಲಿದೆ.

ಮತದಾನ ಮಾಡುವುದು ಹೇಗೆ : ವಿದ್ಯುನ್ಮಾನ ಮತಯಂತ್ರದಲ್ಲಿ ನಮೂದಾಗಿರುವ ಅಭ್ಯರ್ಥಿಗಳ ಸಾಲಿನ ಕೊನೆಯಲ್ಲಿ ಈ ನೋಟಾ ಬಟನ್ ಇರುತ್ತದೆ. ಪಟ್ಟಿಯಲ್ಲಿ ಯಾವ ಅಭ್ಯರ್ಥಿಗೂ ನಿಮಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ 'ನೋಟಾ' ಮೂಲಕ ನಿಮ್ಮ ಹಕ್ಕು ಚಲಾಯಿಸಬಹುದು.

ಪರಿಣಾಮವೇನು : ಒಂದು ವೇಳೆ None Of The Above Option (NOTA) ಮೂಲಕ ಮತದಾನದ ಹಕ್ಕು ಬಹುಮತದಲ್ಲಿ ಚಲಾವಣೆಯಾಗಿದ್ದರೆ ಅದಕ್ಕಾಗಿ ಮತ್ತೆ ಚುನಾವಣೆ ನಡೆಸುವ ಅಗತ್ಯವಿಲ್ಲ. ಬದಲಿಗೆ ಮತದಾರರ ತೀರ್ಪನ್ನು ಗೌರವಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. [ವಿವರ ಇಲ್ಲಿದೆ ನೋಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+