ಕರ್ನಾಟಕದ ಈ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ ಟಾಟಾ-ಏರ್‌ಬಸ್ ಹೆಲಿಕಾಪ್ಟರ್ ಉತ್ಪಾದನಾ ಘಟಕ
ಬೆಂಗಳೂರು, ಮೇ 27: ನಾಗರಿಕರಿಗೆ ಏರ್‌ಬಸ್ ಸೌಲಭ್ಯ ನೀಡುವ H125 ಹೆಲಿಕಾಪ್ಟರ್‌ಗಳ ಉತ್ಪಾದನೆಯು ಭಾರತದ ಕರ್ನಾಟಕದಲ್ಲಿ ನಡೆಯಲಿದೆ. ಈ ಸಂಬಂಧ ಹೊಸ ಉತ್ಪಾದನಾ ಘಟಕ ನಿರ್ಮಿಸಲಾಗುತ್ತದೆ. ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈ ವಿಚಾರದಲ್ಲಿ ಕರ್ನಾಟಕ ಹೊಸ ಘಟಕ ಸ್ಥಾಪಿಸಲು ಎಲ್ಲ ಸಂಪನ್ಮೂಲ ಹೊಂದಿದೆ. ಪ್ರಮುಖ ಏರ್‌ಬಸ್ ಮತ್ತು ಟಾಟಾ ಸಮೂಹದ ಏರೋಸ್ಪೇಸ್ ಅಂಗವಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (TASL) ಈ ಘಟಕ ಸ್ಥಾಪಿಸಲು ಮುಂದೆ ಬಂದಿದೆ.
ಕರ್ನಾಟಕದ ಕೋಲಾರದಲ್ಲಿ H125 ಹೆಲಿಕಾಪ್ಟರ್‌ಗಳಿಗಾಗಿ ಫೈನಲ್ ಅಸೆಂಬ್ಲಿ ಲೈನ್ (FAL) ಉತ್ಪಾದಿಸಲು ಘಟಕ ಸ್ಥಾಪಿಸಲಾಗುತ್ತದೆ. ಈ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲಾಗುತ್ತದೆ. ನಾಗರಿಕರಿಗೆ ಸೇವೆ ಒದಗಿಸುವ ಏರ್‌ಬಸ್ ಹೆಲಿಕಾಪ್ಟರ್‌ಗಳು ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ತಯಾರಾಗುತ್ತವೆ ಎಂಬುದು ಹೆಮ್ಮೆಯ ಸಂಗತಿ.

ಈ ಹೊಸ ಘಟಕವು ಭಾರತದ ಮೊದಲ ಖಾಸಗಿ ನೇತೃತ್ವದೊಂದಿಗೆ ನಿರ್ಮಿಸಲಾಗುತ್ತಿರುವ ಹೆಲಿಕಾಪ್ಟರ್ ಅಸೆಂಬ್ಲಿ ಸೌಲಭ್ಯ ಎನ್ನಲಾಗಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವೇ ಆಗಿದೆ. ಈ ಮೂಲಕ ಭಾರತ ಏರೋಸ್ಪೇಸ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದಂತಾಗುತ್ತದೆ.
ವರ್ಷಕ್ಕೆ 10 ಹೆಲಿಕಾಪ್ಟರ್ ತಯಾರಿಕೆ
ಟಾಟಾ ಒಡೆತನದ ಕಂಪನಿಯು ನಾಗರಿಕ ಸ್ನೇಹಿ ಏರ್‌ಬಸ್‌ನ ಅತ್ಯುತ್ತಮ ಮಾರಾಟವಾದ H125 ಹೆಲಿಕಾಪ್ಟರ್ ತಯಾರಿಸುತ್ತದೆ. ಅವುಗಳನ್ನು ಭಾರತ ಮತ್ತು ನೆರೆಯ ದೇಶಗಳಿಗೆ ಒದಗಿಸುತ್ತದೆ. ವರ್ಷಕ್ಕೆ 10 ಹೆಲಿಕಾಪ್ಟರ್‌ಗಳನ್ನು ಇಲ್ಲಿ ಉತ್ಪಾದಿಸಲಬಹುದಾಗಿದೆ. ಮುಂದಿನ ಎರಡ ದಶಕಗಳಲ್ಲಿ ಏರೋಸ್ಪೇಸ್ ಉತ್ಪಾದನಾ ವಲಯದಲ್ಲಿ ದಕ್ಷಿಣ ಏಷ್ಯಾದಲ್ಲಿ H125 ವರ್ಗದ 500 ಲಘು ಹೆಲಿಕಾಪ್ಟರ್ ಉತ್ಪಾದಿಸಲಿದೆ.
ಕೋಲಾರ ಜಿಲ್ಲೆಯ ವೆಮೆಗಲ್ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕೆ ಸ್ಥಾಪನೆ ಆಗಲಿದೆ. ಉಪಗ್ರಹ ಉತ್ಪಾದನಾ ಘಟಕ ಸೇರಿದಂತೆ TASL ನ ಇತರ ಸೌಲಭ್ಯಗಳು ಇವೆ. ಬೆಂಗಳೂರಿನಿಂದ ಎರಡು ಗಂಟೆ ಕ್ರಮಿಸಿದರೆ ತಲುಪುವಷ್ಟು ಸಮೀಪದಲ್ಲಿದೆ. ಈ ಕುರಿತು ಬಂಡವಾಳ ಹೂಡಿಕೆ, ಜಾಗ ಇನ್ನಷ್ಟು ವಿಚಾರಗಳು ಗೌಪ್ಯವಾಗಿರುವ ಕಾರಣ TASL ವಕ್ತಾರರು ಹೆಚ್ಚು ಮಾಹಿತಿ ನೀಡಿಲ್ಲ. ಇತ್ತ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ ಆಯುಕ್ತ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕ ಗುಂಜನ್ ಕೃಷ್ಣ ಅವರು ಪ್ರಶ್ನೆಗಳಿಗೆ ಉತ್ತರಿಸಿಲ್ಲ.
ಕೆಲ ರಾಜ್ಯ ಬಿಟ್ಟು ಕರ್ನಾಟಕದಲ್ಲಿ ಸ್ಥಳ ಆಯ್ಕೆ
ಕರ್ನಾಟಕದಲ್ಲಿನ ಪರಿಸರ ಏರೋಸ್ಪೇಸ್ ಉತ್ಪಾದನೆಗೆ ಪೂರಕವಾಗಿದೆ. ಹೀಗಾಗಿಯೇ ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್‌ನ ಇತರ ಅನೇಕ ಸ್ಥಳಗಳ ಆಯ್ಕೆ ಮಧ್ಯೆಯು ಕರ್ನಾಟಕದ ಕೋಲಾರವು ಘಟಕ ಸ್ಥಾಪನೆಗೆ ಆಯ್ಕೆ ಮಾಡಲಾಗಿದೆ.
ಕಿಯಾ ಮೋಟಾರ್ಸ್‌ನ ಉತ್ಪಾದನಾ ಘಟಕ ಸ್ಥಾಪಿಸಿದ ಬಳಿಕ ಆಂಧ್ರದ ಅನಂತಪುರವು ರಾಜ್ಯಕ್ಕೆ ಪ್ರಬಲ ಸ್ಪರ್ಧೆಯೊಡ್ಡಿತ್ತು. ಇದರ ನಡುವೆ ಎಲ್ಲ ವಿಧದ ಸಂಪನ್ಮೂಲ ಇರುವ ರಾಜ್ಯದಲ್ಲಿ ಇಲ್ಲಿ ನಿರ್ಮಿಸಿದರೆ ಒಳಿತು ಎಂಬ ಕಾರಣಕ್ಕೆ ಕೋಲಾರ ಸ್ಥಳ ಅಂತಿಮಗೊಳಿಸಲಾಗಿದೆ.
ಟಾಟಾ ಒಡೆತನದ ಕಂಪನಿಯು ಇದೇ ವೆಮಗಲ್ ಕೈಗಾರಿಕಾ ಪ್ರದೇಶದಲ್ಲಿ ವಿಮಾನ ತಯಾರಿಕೆ ಮತ್ತು ಅಂತಿಮ ಜೋಡಣೆ ಇತರ ಕಾರ್ಯಕ್ಕಾಗಿ ಒಟ್ಟು 7.4 ಲಕ್ಷ ಚದರ ಅಡಿ ಜಾಗ ಸ್ವಾಧೀನ ಮಾಡಿಕೊಂಡಿದೆ. ಇದರಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ, ಪರೀಕ್ಷೆಗಳು, ಹೆಲಿಪ್ಯಾಡ್ ಸ್ಥಾಪನೆ ಎಲ್ಲವು ಸೇರಿವೆ ಎಂದು ತಿಳಿದು ಬಂದಿದೆ.
ಕರ್ನಾಟಕಕ್ಕೆ ಏನೆಲ್ಲ ಲಾಭ
ಹೊಸ ಘಟಕ ಸ್ಥಾಪನೆಯಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕರ್ನಾಟಕ, ಕೋಲಾರ ಜಾಗತಿಕವಾಗಿ ಗುರುತಿಸಿಕೊಳ್ಳುತ್ತದೆ. ಭವಿಷ್ಯದಲ್ಲಿ ಬಂವಡವಾಳ ಹೂಡಿಕೆ ಹೆಚ್ಚಾಗುತ್ತದೆ. ಇನ್ನೂ ಸ್ಥಳೀಯವಾಗಿ ಉತ್ಪಾದನಾ ಸಾಮರ್ಥ್ಯಗಳು ಬಲಗೊಳ್ಳುತ್ತವೆ. ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಯಾಗುತ್ತವೆ. ಕೈಗಾರಿಕೆಗಳ ಉತ್ತಮ ಕಾರ್ಯನಿರ್ವಹಣೆ ಸಾಧ್ಯವಾಗುತ್ತದೆ.
ಕೌಶಲ್ಯ ಅಭಿವೃದ್ಧಿ ಹೆಚ್ಚುತ್ತದೆ. ಉತ್ಪಾದನೆಗಳ ಪೂರೈಕೆ ಸರಪಳಿ ಹೂಡಿಕೆ ಸೆಳೆಯುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಜಾಗತಿಕ ಏರೋಸ್ಪೇಸ್ ಉತ್ಪಾದನೆ ವಲಯದಲ್ಲಿ ಭಾರತ ಪ್ರಬಲ ಸ್ಪರ್ಧೆ ಒಡ್ಡುತ್ತದೆ. ಜಿಲ್ಲೆ ವ್ಯಾಪ್ತಿಯಲ್ಲೂ ಒಂದಷ್ಟು ಬದಲಾವಣೆ, ಬೆಳವಣಿಗೆ, ಅಭಿವೃದ್ಧಿ ಆಗಲಿವೆ.












Click it and Unblock the Notifications