ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕ/ ಸಿಬ್ಬಂದಿ ಗಳಿಕೆ ರಜೆ, ಮಾಹಿತಿ

ಬೆಂಗಳೂರು, ಫೆಬ್ರವರಿ 22; ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ 2021-22 & 2022-23ನೇ ಸಾಲಿನಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಶಿಕ್ಷಕ/ ಸಿಬ್ಬಂದಿಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣದ ಮಾಹಿತಿ ನೀಡಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಈ ಕುರಿತು ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ 2019-20 ರಿಂದ 2020-21ನೇ ಸಾಲಿನವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಒಟ್ಟಾರೆ 2693 ನೌಕರರುಗಳಿಗೆ ಅಗತ್ಯವಾದ ಅನುದಾನ ರೂ.9599.48 ಲಕ್ಷಗಳನ್ನು 2022-23ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಂಬಂಧಿಸಿದ ಶಿಕ್ಷಕರು/ ನೌಕರರುಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಈಗಾಗಲೇ ಬಿಡುಗಡೆ ಮಾಡಲಾಗಿರುತ್ತದೆ.

Aided Educational Institutions Earned Leave Claim Details

2021-22 ರಿಂದ 2022-23 ನೇ ಸಾಲಿನವರೆಗೆ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಶಿಕ್ಷಕರು/ ಸಿಬ್ಬಂದಿಗಳಿಗೆ 2024-25ನೇ ಸಾಲಿನಲ್ಲಿ ಅಗತ್ಯವಾದ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆ ಆಗುವ ನಿರೀಕ್ಷೆಯಲ್ಲಿದೆ. ಆರ್ಥಿಕ ಇಲಾಖೆಯಿಂದ ಬಿಡುಗಡೆ ಆದ ಅನುದಾನವನ್ನು ಸಂಬಂಧಿಸಿದ ತಾಲ್ಲೂಕು ಡಿಡಿಓಗಳಿಗೆ ಬಿಡುಗಡೆ ಮಾಡಲು ಹಾಗೂ ಸದರಿ ಡಿಡಿಓಗಳು ಜೇಷ್ಠತೆಯಂತೆ ಕೆ2 ಅಡಿ ದಿನಾಂಕ 15/03/2024ರ ಒಳಗಾಗಿ ಅನುದಾನ ವ್ಯಪಗತವಾಗದಂತೆ ಭರಿಸುವ ಸಲುವಾಗಿ ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವಂತೆ ಬಿಡುಗಡೆಗೊಳಿಸಲಾಗುವ ಅನುದಾನಕ್ಕೆ ಸಂಬಂಧಿಸಿದಂತೆ ಡಿಡಿಓಗಳಿಂದ ಮೇಲು ರುಜುಗಾಗಿ ಸಲ್ಲಿಸುವ ಖಜಾನೆ ಬಿಲ್ಲುಗಳಿಗೆ ಗರಿಷ್ಠ 02 ದಿನಗಳೊಳಗೆ ಮೇಲು ರುಜು ಪ್ರಾಧಿಕಾರಿಗಳಾದ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳು ಪರಿಶೀಲಿಸಿ ಮೇಲು ರುಜು ಮಾಡುವುದು ಎಂದು ಹೇಳಿದೆ.

ಷರತ್ತಿನ ಮೇಲೆ ಅನುದಾನ: ಅನುದಾನ ಸೆಳೆಯುವ ಸಂಬಂಧ ಮೇಲು ರುಜು ಮಾಡಲು ವಿಳಂಬವಾಗದಂತೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಆಯಾ ಡಿಡಿಓಗಳಿಗೆ ಸಕಾಲದಲ್ಲಿ ಬಿಲ್ ಸಲ್ಲಿಸುವಂತೆ ಸೂಚಿಸುವುದು ಒಂದು ವೇಳೆ ಬಿಡುಗಡೆಯಾದ ಅನುದಾನ ವ್ಯಪಗತವಾದಲ್ಲಿ ಸಂಬಂಧಿಸಿದ ಡಿಡಿಓಗಳು ಮತ್ತು ಉಪನಿರ್ದೇಶಕರುಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವ ಷರತ್ತಿನ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗುವುದು.

ಈ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು/ ಸಿಬ್ಬಂದಿಗಳ ಮಾಹಿತಿಗಳನ್ನು ಸಂಬಂಧಿಸಿದ ತಾಲ್ಲೂಕು ಕಛೇರಿಗಳಿಂದ ಪಡೆದು ಕ್ರೋಢಿಕರಿಸಿ ಕ್ರೋಢೀಕೃತ ಮಾಹಿತಿಯನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಕಛೇರಿಗೆ ಹಾಜರಾಗಲು ಸಿಬ್ಬಂದಿಯನ್ನು ನಿಯೋಜಿಸುವುದು.

ಜಿಲ್ಲಾವಾರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಆಯಾ ದಿನಾಂಕಗಳಂದು ಸಂಬಂಧಿಸಿದ ಜಿಲ್ಲೆಯ ಮಾಹಿತಿಯನ್ನು ದಾಖಲೆಗಳೊಂದಿಗೆ ಕಡ್ಡಾಯವಾಗಿ ಖುದ್ದು ಹಾಜರಾಗಿ ಸಲ್ಲಿಸಲು ತಿಳಿಸಿದೆ. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ ಎಂಬ ಅಂಶವನ್ನು ಅವಗಾಹನೆಗೆ ತರಲಾಗಿದೆ.

ಷರತ್ತುಗಳು

* ಶಿಕ್ಷಕರು/ ಸಿಬ್ಬಂದಿಗಳ ಸೇವಾಪುಸ್ತಕದಲ್ಲಿ ದೃಢೀಕರಿಸಿರುವಂತೆ ನಿವೃತ್ತಿ ದಿನಾಂಕ್ಕಕೆ ಲಭ್ಯವಿರುವ ಆಖೈರು ಶುಲ್ಕ ಗಳಿಕೆ ರಜೆಯ ತಃಖ್ತೆಯನ್ನು ಪರಿಶೀಲಿಸಿ ನಮೂದಿಸಿರುವ ಗಳಿಕೆ ರಜೆ ವಿವರಗಳು ಕ್ರಮವಾಗಿರುವ ಬಗ್ಗೆ ಖಾತರಿಪಡಿಸಿಕೊಂಡು ಅದರಂತೆ ಗಳಿಕೆ ರಜೆ ಲೆಕ್ಕ ತಃಖ್ತೆಯಲ್ಲಿ ನಮೂದಿಸಿ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರುಗಳು ದೃಢೀಕರಿಸಿ ಸಲ್ಲಿಸತಕ್ಕದ್ದು.

* ಶಿಕ್ಷಕರು/ ಸಿಬ್ಬಂದಿಗಳ ದೃಢೀಕರಿಸಿದ ಎಲ್.ಪಿ.ಸಿ/ ಕೊನೆಯ ವೇತನ ಚೀಟಿಯ ಪ್ರತಿ.

* ಡಿಡಿಓಗಳ ಬಳಿ ನಿವೃತ್ತಿ ಹೊಂದಿದ ಶಿಕ್ಷಕರ ಗಳಿಕೆ ರಜೆ ನಗದೀಕರಣಕ್ಕೆ ಅಗತ್ಯವಾದ ಎಲ್ಲಾ ದಾಖಲಾತಿಗಳು ಲಭ್ಯವಿರುವ ಶಿಕ್ಷಕರ/ ಸಿಬ್ಬಂದಿಗಳ ಮಾಹಿತಿಯನ್ನು ಮಾತ್ರ ಸಲ್ಲಿಸುವುದು. ಮಾಹಿತಿ ಸಲ್ಲಿಸಿದ ನಂತರದಲ್ಲಿ ಶಿಕ್ಷಕರ ಸೇವಾ ಪುಸ್ತಕ ಲಭ್ಯವಿಲ್ಲ/ ಮಾನ್ಯ ಮಹಾಲೇಖಪಾಲರಿಂದ ಮಾಹಿತಿ ಬಂದಿಲ್ಲ/ ಆಡಳಿತ ಮಂಡಳಿ ಬಿಲ್ ಸಲ್ಲಿಸಿಲ್ಲ ಇತ್ಯಾದಿ ಸಬೂಬುಗಳನ್ನು ತಿಳಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಸಲ್ಲಿಸಲಾಗುವ ಮಾಹಿತಿಗೆ ಸಂಬಂಧಿಸಿದರುತೆ ಎಲ್ಲಾ ಶಿಕ್ಷಕರ/ ಸಿಬ್ಬಂದಿಗಳ ಅಗತ್ಯ ಮಾಹಿತಿ ಲಭ್ಯವಿರುವ ಬಗ್ಗೆ ಸಂಬಂಧಿಸಿದ ಡಿಡಿಓ/ ಜಿಲ್ಲಾ ಉಪನಿರ್ದೇಶಕರು ಖಾತರಿಪಡಿಸಿಕೊಳ್ಳುವುದು.

* 2021-22 ಮತ್ತು 2022-23 ನೇ ಸಾಲಿಗೆ ಜಿಲ್ಲಾ ಕಛೇರಿಯಿಂದ ಈಗಾಗಲೇ ಸಲ್ಲಿಕೆಯಾದ ಪ್ರಸ್ತಾವನೆಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಪ್ರಸ್ತುತ ನೀಡಲಾಗುವ ಸಿಬ್ಬಂದಿವಾರು ಮಾಹಿತಿಯು ಈ ಮುಂಚಿನ ಮಾಹಿತಿಗೆ ಹೊಂದಾಣಿಗೆ ಆಗುವ ಬಗ್ಗೆ ಪರಿಶೀಲಿಸಿ ದೃಢೀಕರಿಸುವುದು.

ವೇಳಾಪಟ್ಟಿ

* ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಮಧುಗಿರಿ, ರಾಮನಗರ 21/2/2024.

* ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ 22/2/2024

* ಬೆಳಗಾವಿ, ಚಿಕ್ಕೋಡಿ, ಗದಗ, ಹಾವೇರಿ, ಉತ್ತರ ಕನ್ನಡ, ಶಿರಸಿ, ಬಾಗಲಕೋಟೆ, ವಿಜಯಪುರ, ಧಾರವಾಡ 23/2/2024

* ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್, ಬಳ್ಳಾರಿ, ವಿಜಯನಗರ, ರಾಯಚೂರು 26/2/2024

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+