ಅಗರ್ತಲಾ-ಬೆಂಗಳೂರು ಹಮ್ಸಫರ್ ರೈಲು ವಾರದಲ್ಲಿ 2 ದಿನ, ವೇಳಾಪಟ್ಟಿ

ಬೆಂಗಳೂರು, ನವೆಂಬರ್ 04: ಧಾರವಾಡ ಜಿಲ್ಲೆಯ ನಾಗಲಾವಿಯಲ್ಲಿ ಆಯೋಜಿಸಿರುವ ಹಜರತ್ ಷರೀಫ್ ಅವರ ಉರುಸ್‌ ಭಾಗವಹಿಸುವ ಯಾತ್ರಾರ್ಥಿಗಳ ಆಗಮನ ಮತ್ತು ನಿರ್ಗಮನಕ್ಕೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆಯು ನಾಗಲಾವಿ ನಿಲ್ದಾಣದಲ್ಲಿ ನವೆಂಬರ್ 5ರಿಂದ 7ರವರೆಗೆ 8 ರೈಲುಗಳು 2 ನಿಮಿಷಗಳ ನಿಲುಗಡೆಯಾಲಿವೆ.

ಅಗರ್ತಲಾ- ಬೆಂಗಳೂರು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಬಿ)-ಅಗರ್ತಲಾ ಹಮ್ಸಾಫರ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯನ್ನು ಎರಡು ವಾರಕ್ಕೊಮ್ಮೆ (ವಾರಕ್ಕೆ ಎರಡು ಬಾರಿ) ತನ್ನ ಸಾಪ್ತಾಹಿಕ ವೇಳಾಪಟ್ಟಿಯಿಂದ ಮರುಸ್ಥಾಪಿಸಲು ಈಶಾನ್ಯ ಫ್ರಾಂಟಿಯರ್ (ಎನ್‌ಎಫ್) ರೈಲ್ವೆ ವಲಯವು ನಿರ್ಧರಿಸಿದೆ.

ರೈಲು ಸಂಖ್ಯೆ 17416 ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ - ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ 05:55ಕ್ಕೆ ನಾಗಲಾವಿ ನಿಲ್ದಾಣಕ್ಕೆ ಆಗಮಿಸುತ್ತದೆ ಮತ್ತು 05:57ಕ್ಕೆ ಗಮ್ಯಸ್ಥಾನಕ್ಕೆ ಹೊರಡಲಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.

 ಉರುಸ್‌: ನಾಗಲಾವಿಯಲ್ಲಿ 8 ರೈಲುಗಳ ನಿಮಿಷ ನಿಲುಗಡೆ

ಉರುಸ್‌: ನಾಗಲಾವಿಯಲ್ಲಿ 8 ರೈಲುಗಳ ನಿಮಿಷ ನಿಲುಗಡೆ

ರೈಲು ಸಂಖ್ಯೆ 17332 ಎಸ್‌ಎಸ್‌ಎಸ್ ಹುಬ್ಬಳ್ಳಿ - ಮೀರಜ್ ಡೈಲಿ ಎಕ್ಸ್‌ಪ್ರೆಸ್ ಈ ರೈಲು ಮಧ್ಯಾಹ್ನ 12:06ಕ್ಕೆ ನಾಗಲಾವಿ ತಲುಪುತ್ತದೆ ಮತ್ತು ಮಧ್ಯಾಹ್ನ 12:08ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 17325 ಬೆಳಗಾವಿ - ಮೈಸೂರು ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ಬೆಳಿಗ್ಗೆ 06:50ಕ್ಕೆ ನಾಗಲಾವಿಗೆ ತಲುಪುತ್ತದೆ ಮತ್ತು 06:52ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 17317 ಎಸ್‌ಎಸ್‌ಎಸ್ ಹುಬ್ಬಳ್ಳಿ - ದಾದರ್ ಡೈಲಿ ಎಕ್ಸ್‌ಪ್ರೆಸ್ ನಾಗಲಾವಿಯನ್ನು ಮುಂಜಾನೆ 04:10ಕ್ಕೆ ತಲುಪುತ್ತದೆ ಮತ್ತು 04:12ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 17318 ದಾದರ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ಈ ರೈಲು ಮುಂಜಾನೆ 10:14ಕ್ಕೆ ನಾಗಲಾವಿಯನ್ನು ತಲುಪುತ್ತದೆ ಮತ್ತು 10:16ಕ್ಕೆ ಹೊರಡುತ್ತದೆ.

 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್

ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್

ಇನ್ನು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ಸಂಜೆ 06:26ಕ್ಕೆ ನಾಗಲಾವಿಗೆ ತಲುಪುತ್ತದೆ ಮತ್ತು ಅಂದು ಸಂಜೆ 06:28ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 17331 ಮೀರಜ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ಈ ರೈಲು ಮಧ್ಯಾಹ್ನ 12:26ಕ್ಕೆ ನಾಗಲಾವಿಗೆ ತಲುಪುತ್ತದೆ ಮತ್ತು ಮಧ್ಯಾಹ್ನ 12:28ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 17415 ತಿರುಪತಿ - ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ ಈ ರೈಲು ಮುಂಜಾನೆ 09:13ಕ್ಕೆ ನಾಗಲಾವಿ ತಲುಪುತ್ತದೆ ಬಳಿಕ 09:15ಕ್ಕೆ ಹೊರಡುತ್ತದೆ.

ಕುಣಿಗಲ್‌ನಲ್ಲಿ ತಾತ್ಕಾಲಿಕ ವಾಸ್ತವ್ಯ ಮುಂದುವರಿಯಲಿದೆ.

ಕುಣಿಗಲ್‌ನಲ್ಲಿ ತಾತ್ಕಾಲಿಕ ವಾಸ್ತವ್ಯ ಮುಂದುವರಿಯಲಿದೆ.

ರೈಲು ಸಂಖ್ಯೆ 16595 ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಕಾರವಾರ ಡೈಲಿ ಎಕ್ಸ್‌ಪ್ರೆಸ್ ಪ್ರಾಯೋಗಿಕ ಆಧಾರದ ಮೇಲೆ ಕುಣಿಗಲ್‌ನಲ್ಲಿ ಇದೇ 06 ನವೆಂಬರ್‌ನಿಂದ 05 ಏಪ್ರಿಲ್ 2023 ರವರೆಗೆ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸುತ್ತದೆ. ಈ ಸೌಲಭ್ಯವು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

 ಬೆಂಗಳೂರು-ಅಗರ್ತಲಾ ಹಮ್ಸಫರ್ ಎಕ್ಸ್‌ಪ್ರೆಸ್‌

ಬೆಂಗಳೂರು-ಅಗರ್ತಲಾ ಹಮ್ಸಫರ್ ಎಕ್ಸ್‌ಪ್ರೆಸ್‌

ನಾರ್ತ್ ಫ್ರಾಂಟಿಯರ್ ರೈಲ್ವೆ ರೈಲು ಸಂಖ್ಯೆ 12504/12503 ಅಗರ್ತಲಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಅಗರ್ತಲಾ ಹಮ್ಸಫರ್ ಎಕ್ಸ್‌ಪ್ರೆಸ್‌ನ ಆವರ್ತನವನ್ನು ಸಾಪ್ತಾಹಿಕದಿಂದ ಎರಡು ವಾರಕ್ಕೆ ಬದಲಾಯಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 12504 ಅಗರ್ತಲಾ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಹಮ್ಸಫರ್ ಎಕ್ಸ್‌ಪ್ರೆಸ್ ನವೆಂಬರ್ 08ರಿಂದ ಪ್ರತಿ ಶನಿವಾರ ಮತ್ತು ಮಂಗಳವಾರ ಅಗರ್ತಲಾದಿಂದ ಚಲಿಸುತ್ತದೆ. ರೈಲು ಸಂಖ್ಯೆ 12503 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಅಗರ್ತಲಾ ಹಮ್ಸಫರ್ ಎಕ್ಸ್‌ಪ್ರೆಸ್ ನವೆಂಬರ್ 11ರಿಂದ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+