Aparna: 2 ವರ್ಷ ಕ್ಯಾನ್ಸರ್ ಜೊತೆ ಹೋರಾಡಿದ ಗಟ್ಟಿಗಿತ್ತಿ
ತನ್ನಲ್ಲಿಯೇ ನೂರಾರು ಸಮಸ್ಯೆಗಳು.. ಆಗಷ್ಟೇ ಕಾಣಿಸಿಕೊಂಡಿದ್ದ ಮಹಾಮಾರಿ ಕಾಯಿಲೆ.. ಇವುಗಳೆನ್ನೆಲ್ಲಾ ಮೆಟ್ಟಿನಿಂತ ಗಟ್ಟಿಗಿತ್ತಿ.. ತಾನು ಕಷ್ಟದಲ್ಲಿದ್ರೂ ಸಹ ಜನರನ್ನು ನಗಿಸಿ ತಾನು ಖುಷಿ ಪಟ್ಟ ಅಪ್ರತಿಮ ಸಾಧಕಿ, ಖ್ಯಾತ ನಿರೂಪಕಿ ಅಪರ್ಣಾ ಗುರುವಾರ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಅತಿಥಿಗಳು, ಅಧ್ಯಕ್ಷರು, ಚೇಂಜ್ ಆಗ್ತಾ ಇದ್ದರು. ಆದರೆ ನಿರೂಪಕಿ ಮಾತ್ರ ಅಪರ್ಣಾ ಅವರೇ ನೆರವೇರಿಸುತ್ತಿದ್ದರು. ಮೈಕ್ ಮುಂದೆ ಬಂದು ಮುಗಳ್ ನಗುತ್ತಾ, ವಚನ ಅಥವಾ ಖ್ಯಾತ ಸಾಹಿತಿಗಳ ಕವನ ವಾಚನ ಮಾಡಿ ಕಾರ್ಯಕ್ರಮ ಆರಂಭಿಸಿದರೆ ಮುಗಿತು, ಕಾರ್ಯಕ್ರಮ ಮುಗಿಯುವ ತನಕವೂ ಇವರ ಇರುವಿಕೆ ವೇದಿಕೆಯ ಮೇಲೆ ಇರುತ್ತಿತ್ತು.

ಸಾವು ಬದುಕಿನ ಹೋರಾಟ
ವೇದಿಕೆಯ ಮೇಲೆ ಫಿಟ್ ಆಗಿ ಕಾಣಿಸಿಕೊಂಡಿದ್ದ ಅಪರ್ಣಾ ಅವರಿಗೆ ಆಗಿದ್ದೇನು ಎಂಬ ಪ್ರಶ್ನೆ ಹಲವರಲ್ಲಿ ಕಾಡದೇ ಇರದು. ಅವರಿಗೆ ಎರಡು ವರ್ಷದ ಹಿಂದೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಕ್ಯಾನ್ಸರ್ ನಾಲ್ಕನೇ ಸ್ಟೇಜ್‌ನಲ್ಲಿದ್ದಾಗ ನಮಗೆಲ್ಲಾ ತಿಳಿಯಿತು ಎಂದು ಪತಿ ನಾಗರಾಜ್ ಕಣ್ಣೀರು ಇಡುತ್ತಾ ಹೇಳಿದರು.
ವೈದ್ಯರು ಹೇಳಿದ್ದೇನು?
ನಾವು ಅಪರ್ಣಾಳನ್ನು ವೈದ್ಯರಲ್ಲಿ ತೋರಿಸಲು ಹೋದಾಗ ಅವರು, ಇವರು ಬದುಕುವುದು ಕಷ್ಟ. ಹೆಚ್ಚೆಂದರೆ ಇನ್ನು ಆರು ತಿಂಗಳು ಬದುಕ ಬಹುದು ಎಂದು ತಿಳಿಸಿದ್ದರು. ಆದರೆ ಅಪರ್ಣಾ ತನ್ನ ಸಾವು ನೋವಿನ ನರಾಳಟದಲ್ಲಿ ಎರಡು ವರ್ಷ ಕಳೆದು ಬಿಟ್ಟಳು ಎಂದು ಪತಿ ಭಾವುಕರಾದರು.
ಕಳೆದ 2 ಎರಡು ವರ್ಷದಿಂದ ಅಪರ್ಣಾ ಹಾಗೂ ನಾನು ಶಾಸ್ವಕೋಶದ ಕ್ಯಾನ್ಸರ್ ವಿರುದ್ಧ ಹೋರಾಟವನ್ನೇ ನಡೆಸಿದ್ದೇವೆ. ಅವಳು ಕಾಯಿಲೆಯಿಂದ ನರಳಿ ನರಳಿ ಸಂಕಟ ಪಟ್ಟರೆ, ನಾನು ಅವಳ ಅವಸ್ಥೆಯನ್ನು ಕಂಡು ಸಂಕಟ ಪಟ್ಟಿದ್ದೇನೆ. ನಾವಿಬ್ಬರೂ ನಡೆಸಿದ ಹೋರಾಟದಲ್ಲಿ ನಮಗೆ ಸೋಲು ಎದುರಾಗಿದೆ ಎಂದು ಪತಿ ನಾಗರಾಜ್ ತಿಳಿಸಿದರು.
ಅಪರ್ಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಎಲ್ಲವೂ ಅಂತಿಮವಾದ ಬಳಿಕ ತಿಳಿಸುತ್ತೇವೆ ಎಂದು ಪತಿ ನಾಗರಾಜ್ ಹೇಳಿದರು.












Click it and Unblock the Notifications