ಶ್ರೀಮಂತ ಸಿಎಂಗಳ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?

Recommended Video

      ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯನವರಿಗೆ 6ನೇ ಸ್ಥಾನ | Oneindia Kannada

      ಬೆಂಗಳೂರು, ಫೆಬ್ರವರಿ 13 : ಎಡಿಆರ್ ಮುಖ್ಯಮಂತ್ರಿಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ವರದಿ ಪ್ರಕಾರ ಸಿದ್ದರಾಮಯ್ಯ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಮತ್ತು ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

      ದೇಶದ ಮುಖ್ಯಮಂತ್ರಿಗಳು ಎಷ್ಟು ಶ್ರೀಮಂತರು?, ಅವರು ಓದಿರುವುದೇನು?, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳೇನು? ಹಿರಿ-ಕಿರಿ ವಯಸ್ಸಿನ ಮುಖ್ಯಮಂತ್ರಿಗಳು ಯಾರು? ಎಂದು ಎಡಿಆರ್ ಸಮೀಕ್ಷೆ ನಡೆಸಿದೆ.

      ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಸಿದ್ಧಪಡಿಸಿದ ವರದಿ ಬಹಿರಂಗವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸ್ತಿ 13.61 ಕೋಟಿ ರೂ.ಗಳಾಗಿವೆ. ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಸಾಲಿನಲ್ಲಿಸಿದ್ದರಾಮಯ್ಯ ಅವರು 6ನೇ ಸ್ಥಾನದಲ್ಲಿದ್ದಾರೆ.

      ದೇಶದ 31 ಮುಖ್ಯಮಂತ್ರಿಗಳ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ವರದಿ ಸಿದ್ದಪಡಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 177 ಕೋಟಿ ಆಸ್ತಿ ಹೊಂದಿದ್ದು ಶ್ರೀಮಂತ ಸಿಎಂಗಳಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ 26 ಲಕ್ಷ ಆಸ್ತಿ ಹೊಂದಿದ್ದು ಕೊನೆಯ ಸ್ಥಾನ ಪಡೆದಿದ್ದಾರೆ.

      ಟಾಪ್ 3 ಶ್ರೀಮಂತ ಮುಖ್ಯಮಂತ್ರಿಗಳು

      ಟಾಪ್ 3 ಶ್ರೀಮಂತ ಮುಖ್ಯಮಂತ್ರಿಗಳು

      ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಒಟ್ಟು ಆಸ್ತಿ 177 ಕೋಟಿ ರೂ.ಗಳು. ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಅವರು 129 ಕೋಟಿ ಆಸ್ತಿ ಹೊಂದಿದ್ದು 2ನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಸಿಎಂ ಅಮರಿಂದರ್ ಸಿಂಗ್ 48 ಕೋಟಿ ಆಸ್ತಿ ಹೊಂದಿದ್ದು 3ನೇ ಸ್ಥಾನದಲ್ಲಿದ್ದಾರೆ.

      ಕಡಿಮೆ ಆಸ್ತಿ ಹೊಂದಿರುವ ಸಿಎಂಗಳು

      ಕಡಿಮೆ ಆಸ್ತಿ ಹೊಂದಿರುವ ಸಿಎಂಗಳು

      ದೇಶದ ಬಡ ಸಿಎಂಗಳ ಪಟ್ಟಿಯಲ್ಲಿ ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಮೊದಲಿಗರು, ಅವರ ಆಸ್ತಿ 26 ಲಕ್ಷ ರೂ.. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 30 ಲಕ್ಷ ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ 55 ಲಕ್ಷ ಆಸ್ತಿಯೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

      ಸಿದ್ದರಾಮಯ್ಯ ಅವರ ಆಸ್ತಿ ಎಷ್ಟು

      ಸಿದ್ದರಾಮಯ್ಯ ಅವರ ಆಸ್ತಿ ಎಷ್ಟು

      ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸ್ತಿ 13.61 ಕೋಟಿ ರೂ.ಗಳು. ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಅವರು 6ನೇ ಸ್ಥಾನದಲ್ಲಿದ್ದಾರೆ. 2013ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಸಿದ್ದರಾಮಯ್ಯ ಘೋಷಿಸಿದ್ದ ಆಸ್ತಿ 5.15 ಕೋಟಿ ರೂ.ಗಳು.

      ಅಪರಾಧ ಪ್ರಕರಣಗಳು

      ಅಪರಾಧ ಪ್ರಕರಣಗಳು

      31 ಮುಖ್ಯಮಂತ್ರಿಗಳ ಪೈಕಿ ಶೇ 65ರಷ್ಟು ಸಿಎಂಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಶೇ 35ರಷ್ಟು ಸಿಎಂಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಶೇ 26ರಷ್ಟು ಸಿಎಂಗಳ ವಿರುದ್ಧ ಗಂಭೀರ ಪ್ರಕರಣಗಳಿವೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

      ಮುಖ್ಯಮಂತ್ರಿಗಳ ಶಿಕ್ಷಣ

      ಮುಖ್ಯಮಂತ್ರಿಗಳ ಶಿಕ್ಷಣ

      31 ಮುಖ್ಯಮಂತ್ರಿಗಳ ಪೈಕಿ 12ನೇ ತರಗತಿ ಪಾಸಾದವರು
      3 ಜನರು. ಪದವೀಧರರು 12, ವೃತ್ತಿಪರ ಪದವಿ 10, ಸ್ನಾತಕೋತ್ತರ ಪದವಿ 5, ಡಾಕ್ಟರೇಟ್ 1.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+