ಅಶ್ಲೀಲ ವೀಡಿಯೋದಲ್ಲಿರುವುದು ನಾನಲ್ಲ: ನಟಿ ಸಂಚಿತಾ ಶೆಟ್ಟಿ
ಶುಕ್ರವಾರದಿಂದಲೇ, ಗಾಯಕಿ ಸುಚಿತ್ರಾ ಎಂಬುವರ ಟ್ವಿಟರ್ ಖಾತೆಯಿಂದ ಪ್ರಕಟಣೆಗೊಂಡಿರುವ ವೀಡಿಯೋ ಹಾಗೂ ಫೋಟೋಗಳು.
ಬೆಂಗಳೂರು, ಮಾರ್ಚ್ 4: ಬಹುಭಾಷಾ ನಟಿ ಸಂಚಿತಾ ಶೆಟ್ಟಿಯವರದ್ದೆಂದು ಹೇಳಲಾದ ಅಶ್ಲೀಲ ವೀಡಿಯೊದಲ್ಲಿರುವುದು ತಾವಲ್ಲ ಎಂದು ಖುದ್ದು ಸಂಚಿತಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ, ಗಾಯಕಿ ಸುಚಿತ್ರಾ ಎಂಬುವರ ಟ್ವಿಟರ್ ಖಾತೆಯಿಂದ ಸಂಚಿತಾ ಶೆಟ್ಟಿಯದ್ದು ಎಂದು ಹೇಳಲಾದ ಅಶ್ಲೀಲ ವೀಡಿಯೊವೊಂದು ಪ್ರಕಟಣೆಗೊಂಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿತ್ತು. ಆದರೆ, ಗಾಯಕಿ ಸುಚಿತ್ರಾ ಅವರ ಅವರ ಟ್ವೀಟರ್ ಖಾತೆ ಹ್ಯಾಕ್ ಆಗಿದೆಯೆಂದು ಹೇಳಲಾಗಿದೆ.

ಈ ವೀಡಿಯೊ ಮಾತ್ರವಲ್ಲದೆ, ನಟ ದಗ್ಗುಬಾಟಿ ರಾಣಾ, ಧನುಷ್ ಮುಂತಾದವರ ಕೆಲವಾರು ಖಾಸಗಿ ಫೋಟೋ ಹಾಗೂ ವೀಡಿಯೊಗಳೂ ಸುಚಿತ್ರಾ ಅವರ ಟ್ವಿಟರ್ ಖಾತೆಯಿಂದ ಪ್ರಕಟಗೊಂಡಿವೆ.
ಇತ್ತ, ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಸಂಚಿತಾ, ಆ ವೀಡಿಯೋದಲ್ಲಿ ಇರುವುದು ನಾನಲ್ಲ. ಹಾಗಿದ್ದ ಮೇಲೆ ನಾನು ಯಾವುದೇ ಗಾಸಿಪ್ ಅಥವಾ ವಿವಾದಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಅಲ್ಲದೆ, ಸುಚಿತ್ರಾ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದೂ ಅವರು ತಿಳಿಸಿದ್ದಾರೆ. ಸಂಜಿತಾ ಅವರು ಮಂಗಾರು ಮಳೆ -2, ತೆಲುಗಿನ ಆರೇಂಜ್ ಚಿತ್ರ ಸೇರಿದಂತೆ ಕೆಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.












Click it and Unblock the Notifications