Upendra: ಈ ದಡ್ ನನ್‌ಮಗಂಗೇ ಇನ್ ಮೇಲೆ ಬುದ್ದಿವಂತ ಅಂದ್ರೆ ಅಷ್ಟೇ! ಉಪೇಂದ್ರ ಹೀಗಂದಿದ್ಯಾಕೆ?
ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ಲೋಕಸಭಾ ಚುನಾವಣೆ ಜೊತೆಗೆ ಆಂಧ್ರ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು.
ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ, ಬಿಜೆಪಿ ಜೊತೆ ಕೈಜೋಡಿಸಿದ್ದ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ 21 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದಿದೆ. 2 ಲೋಕಸಭಾ ಕ್ಷೇತ್ರಗಳಲ್ಲಿ ಕೂಡ ಗೆಲುವು ಸಾಧಿಸಿದೆ. ತಮ್ಮ ಸಿನಿಮಾ ನೂರಾರು ಕೋಟಿ ಗಳಿಸುತ್ತಿದ್ದರೂ, ರಾಜಕೀಯಕ್ಕೆ ಧುಮಿಕಿ ಸತತ ಸೋಲಿನಿಂದ ಕಂಗೆಡದೆ ಮತ್ತೆ ಪ್ರಯತ್ನ ಮಾಡಿ ಪವನ್ ಕಲ್ಯಾಣ್ ಗೆದ್ದಿದ್ದಾರೆ.

ಪವನ್ ಕಲ್ಯಾಣ್ ಪಕ್ಷ ಗೆಲುವಿನ ಬಳಿಕ, ಕರ್ನಾಟಕ ಜನ ಉಪೇಂದ್ರ ಅವರಿಗೆ ಪವನ್ ಕಲ್ಯಾಣ್‌ರಂತೆ ಸಕ್ರಿಯ ರಾಜಕೀಯಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದ ಪರವಾಗಿ ಪ್ರಚಾರ ಮಾಡಿ ಎಂದು ಕೇಳಿದ್ದರು.
ತಮ್ಮ ಮೇಲಿನ ಕಾಮೆಂಟ್‌ಗಳಿಗೆ ಉಪೇಂದ್ರ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ನನಗೆ ಬುದ್ಧಿವಂತ ಅನ್ನಬೇಡಿ ಎಂದು ಕೇಳಿಕೊಂಡಿದ್ದಾರೆ.
ಉಪೇಂದ್ರ ಟ್ವೀಟ್‌ನಲ್ಲಿ ಏನಿದೆ?
ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್... ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ ! ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ.
ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್…
— Upendra (@nimmaupendra) June 6, 2024
ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ !
ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ 🙏🙏🙏
ಡೋಂಟ್ ವರೀ… ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ 👍😃
ಗೆದ್ದೇ ಗೆಲ್ತೀನಿ 💪…
ಡೋಂಟ್ ವರೀ... ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ. ನೆಕ್ಸ್ಟ್ ಎಲೆಕ್ಷನ್‌ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ ಆಗ್ಲೂ ನೀವ್ ಎಮೋಸನಲ್ ಪ್ರಚಾರ ಮಾಡ್ರೀ, ಸಭೆ ಸಮಾರಂಭ ಎಲ್ಲಾ ಮಾಡ್ರೀ, ಕಷ್ಟ ಪಡ್ರೀ, ಆಮೇಲ್ ಐದು ವರ್ಸ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ, ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲಿರಪ್ಪೋ, ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ ಮೇಲೆ ಬುದ್ದಿವಂತಾ ಅಂದ್ರೇ ಅಷ್ಟೇ ಸೆಂದಾಗಿರಕ್ಕಿಲ್ಲಾ ಎಂದು ತಮ್ಮದೇ ಶೈಲಿಯಲ್ಲಿಉತ್ತರ ನೀಡಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷದ ಉದ್ದೇಶ ರಾಜಕೀಯವಲ್ಲ ಅದು ಕರ್ತವ್ಯ ಎನ್ನುವ ವಾದ ಉಪೇಂದ್ರ ಅವರದ್ದಾಗಿದೆ. ಜನ ತಮ್ಮನ್ನು ತಾವೇ ಆಳಿಕೊಳ್ಳಬೇಕು, ಎಲ್ಲರೂ ಅವರ ಕೆಲಸ ಮಾಡಬೇಕು ಎಂದು ತಮ್ಮ ರಾಜಕೀಯ ನಿಲುವನ್ನು ಹಲವು ಕಡೆ ಹೇಳಿಕೊಂಡಿದ್ದಾರೆ.












Click it and Unblock the Notifications