ರಾಜ್ಯ ಸರ್ಕಾರದಿಂದ ಬಗರ್ ಹುಕುಂ ಸಾಗುವಳಿ ರೈತರಿಗೆ ಗುಡ್ ನ್ಯೂಸ್
ಬೆಂಗಳೂರು, ಮಾರ್ಚ್ 20: ರಾಜ್ಯ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಬಗರ್ ಹುಕುಂ ಸಾಗುವಳಿ ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕಾಲಮಿತಿಯೊಳಗೆ ಖಾತೆ ಮಾಡಿಕೊಡಲು ಕ್ರಮ ವಹಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಡಾ.ಎಸ್.ಯತೀಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್‌ಹುಕುಂ ಸಾಗುವಳಿ ಚೀಟಿ ನೈಜವಾಗಿ ಮಂಜೂರಾಗಿ ಖಾತೆಯಾಗದೆ ಅನ್ಯಾಯವಾಗಿದ್ದರೆ ಕಾಲಮಿತಿಯೊಳಗೆ ಖಾತೆ ಮಾಡಿಕೊಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಸಾಗುವಳಿ ಚೀಟಿ ನೀಡಿ ವರ್ಷಗಳು ಕಳೆದರೂ ಖಾತೆ ಮಾಡದೆ ವಿಳಂಬ ಮಾಡುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ. ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನಡವಳಿ, ಸಾಗುವಳಿ ಚೀಟಿ ವಿತರಣೆ, ಕಿಮ್ಮತ್ತು ಪಾವತಿ ಸೇರಿದಂತೆ ಮೂಲ ಮಂಜೂರಿದಾರರ ಹೆಸರು, ಜಮೀನಿನ ವರ್ಗದ ಬಗ್ಗೆ ಅರಣ್ಯ ಜಮೀನಿನ ಕುರಿತು ಪರಿಶೀಲಿಸಿ ಖಾತೆ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ನೈಜತೆಯಿಂದ ಕೂಡಿರುವ ಜಮೀನುಗಳಿಗೆ ಖಾತೆಗಳನ್ನು ನೀಡಲು ಅಗತ್ಯ ಕ್ರಮ ವಹಿಸಲಾಗುವುದು. ಅಂದಿನ ಕಾನೂನುಗಳು ಅಂದಿನ ದಿನಕ್ಕೆ ಅನ್ವಯವಾಗಲಿದೆ. ಇಂದಿನ ಕಾನೂನುಗಳು ಈ ಹಿಂದಿನ ದಿನಗಳ ಕಾನೂನುಗಳಿಗೆ ಅನ್ವಯವಾಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು. ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನಡವಳಿ, ಸಾಗುವಳಿ ಚೀಟಿ ವಿತರಣಾ ವಹಿ, ಕಿಮ್ಮತ್ತು ಪಾವತಿಸಿರುವ ವಹಿ ಇತ್ಯಾದಿಗಳಲ್ಲಿ ಮೂಲ ಮಂಜೂರಿದಾರರ ಹೆಸರು, ಜಮೀನಿನ ವರ್ಗದ ಬಗ್ಗೆ, ಅರಣ್ಯ ಜಮೀನಿನ ಬಗ್ಗೆ ಪರಿಶೀಲಿಸಿಕೊಂಡು, ನಕಲಿ ಸಾಗುವಳಿ ಚೀಟಿಗಳು ಇದ್ದಲ್ಲಿ ಮೂಲ ಮಂಜೂರಾತಿ ಕಡತಗಳನ್ನು ಪಡೆದು ನೈಜತೆಯನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ಕ್ರಮವಹಿಸಲಾಗುತ್ತಿದೆ.
ಕೆಲವು ಮಂಜೂರಾದ ಪ್ರಕರಣಗಳು ನೈಜತೆಯಿಂದ ಕೂಡಿದ್ದು, ಪ್ರಸ್ತಾಪಿತ ಮಂಜೂರಾದ ಪ್ರದೇಶದಲ್ಲಿ ಈಗಾಗಲೇ ಅಧಿಸೂಚಿತ ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇದ್ದಲ್ಲಿ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಖಾತೆ ಮಾಡಲಾಗುತ್ತಿದೆ. ಮಂಜೂರಾದ ಮೂಲ ಸರ್ವೆ ನಂಬರಿನ ಪಹಣಿಯ ಅಂಕಣ 9 ರಲ್ಲಿ ಶೂನ್ಯ ವಿಸ್ತೀರ್ಣ ನಮೂದಿದ್ದಲ್ಲಿ ಆಕಾರ್ ಬಂದ್ ವಿಸ್ತೀರ್ಣವನ್ನು ಪಹಣಿಯಲ್ಲಿ ಸರಿಪಡಿಸಿ ಖಾತೆ ಮಾಡಲಾಗುತ್ತಿದೆ. ಸಮಿತಿಯ ಸ್ಥಿರೀಕರಣಕ್ಕಾಗಿ ಇರುವ ಪಕರಣಗಳನ್ನು ಸಮಿತಿಯ ಮುಂದೆ ಮಂಡಿಸಿ ಸ್ಥಿರೀಕರಿಸಿದ ನಂತರ ಖಾತೆಯನ್ನು ಮಾಡಲು ಕ್ರಮವಹಿಸಲಾಗುತ್ತಿದೆ. ಸರ್ಕಾರದ ಸುತ್ತೋಲೆ ಸಂ. ಕಂಇ 33 ಟಿ.ಆರ್.ಎಂ. 2019 (ಇ), ದಿನಾಂಕ 17-10-2020 ರಲ್ಲಿ ಮಂಜೂರಿದಾರರು ಪೌತಿಯಾಗಿದ್ದಲ್ಲಿ ಖಾತೆಯನ್ನು ನೀಡಲಾಗಿದೆ. ಪೌತಿ ಖಾತೆಯನ್ನು ಮಾಡಲು ಮಾರ್ಗಸೂಚಿಗಳನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.
ಶಿರಾದಲ್ಲಿ ಆಧುನಿಕ ಸಂಸ್ಕರಣಾ ಕೇಂದ್ರ ಸ್ಥಾಪನೆ
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚೀಲನಹಳ್ಳಿ ಗ್ರಾಮದ ಸರ್ವೆ ನಂ. 14 ರಲ್ಲಿ 20 ಎಕರೆ ಭೂಮಿಯನ್ನು ತುಮಕೂರಿನ ಜಿಲ್ಲಾಧಿಕಾರಿ ಅವರಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಮಂಜೂರು ಮಾಡಲಾಗಿದೆ. ಇಲ್ಲಿ ಆಧುನಿಕ ಸಂಸ್ಕರಣಾ ಕೇಂದ್ರವನ್ನು (ವಧಾಗಾರ) ಸ್ಥಾಪನೆ ಮಾಡಲಾಗಿದೆ. ಕಾಮಗಾರಿಯು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೆ. ವೆಂಕಟೇಶ್ ಅವರ ಚುಕ್ಕೆ ಗುರುತಿನ ಪ್ರಶ್ನಗೆ ಸಂಬಂಧಿಸಿದಂತೆ ಪಶು ಸಂಗೋಪನೆ ಮತ್ತು ರೇಷ್ಮೇ ಸಚಿವರ ಪರವಾಗಿ ಉತ್ತರಿಸಿದ ಕಂದಾಯ ಸಚಿವರು, ಈ ಆಧುನಿಕ ಸಂಸ್ಕರಣ ಘಟಕವು ಪ್ರತಿದಿನ-1500 ಕುರಿ/ಮೇಕೆಗಳನ್ನು ವಧೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಪ್ರಪ್ರಥಮ ಆಧುನಿಕ ಸಂಸ್ಕರಣ ಘಟಕವಾಗಿದೆ. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ವಧಾಗಾರಗಳು ನಿರ್ಮಾಣವಾಗಿರುವುದಿಲ್ಲ. ಸದರಿ ವಧಾಗಾರದಿಂದ ಸರಿ ಸುಮಾರು 150 ರಿಂದ 200 ಯುವಕ/ಯುವತಿಯರಿಗೆ ಉದ್ಯೋಗ ದೊರೆಯಲಿದೆ. ವಾರ್ಷಿಕವಾಗಿ ಸರಿಸುಮಾರು ರೂ.125.00 ಕೋಟಿಗಳಷ್ಟು ವಹಿವಾಟು ನಿರೀಕ್ಷೆ ಇದೆ
ಆಧುನಿಕ ವಧಾಗಾರ ನಿರ್ಮಾಣಕ್ಕಾಗಿ ಒಟ್ಟು ಅಂದಾಜು ಮೊತ್ತ ರೂ.44.63 ಕೋಟಿಯಲ್ಲಿ ರೂ.26.56 ಕೋಟೆಗಳನ್ನು ಸಿವಿಲ್ ಕಾಮಗಾರಿಗಳಿಗಾಗಿ ಸರ್ಕಾರಿ ಸಂಸ್ಥೆಯಾದ KHBಗೆ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. M/s Pratha Meat works Pvt. Ltd., ಸಂಸ್ಥೆಯವರಿಂದ PPP ಮಾದರಿಯಲ್ಲಿ ರೂ.16.00 ಕೋಟಿಗಳ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಘಟಕದ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಕುರಿ/ಮೇಕೆಗಳ ಮಾಂಸವನ್ನು ರಫ್ತು, ಮಾಡುವುದರಿಂದ ವಿದೇಶಗಳಿಂದ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇರುವುದರಿಂದ ಸ್ಥಳೀಯ ಕುರಿ/ಮೇಕೆಗಳ ಬೆಲೆ ಹೆಚ್ಚಾಗುವ ನಿರೀಕ್ಷೆ ಇದ್ದು ಸ್ಥಳೀಯ ಕುರಿಗಾರರಿಗೆ ಆರ್ಥಿಕವಾಗಿ ಹೆಚ್ಚು ಲಾಭವಾಗಲಿದೆ. ಕುರಿ/ಮೇಕೆಗಳಿಗೆ ಮಾರುಕಟ್ಟೆಯ ಸೌಲಭ್ಯವನ್ನು 24/7 ಸಮಯದಲ್ಲಿ ಕಲ್ಪಿಸಲಾಗುತ್ತಿದೆ. ಕುರಿ/ಮೇಕೆ ಸಾಕಾಣಿಕೆದಾರರಿಗೆ ಸಾಗಾಣಿಕೆ ವೆಚ್ಚ ಕಡಿಮೆಯಾಗಲಿದೆ. ಚರ್ಮ ಸಂಸ್ಕರಣಾ ಘಟಕ ಸ್ಥಾಪನೆಗೊಂಡು ಚರ್ಮೋದ್ಯಮ ಮತ್ತು ಇತರೆ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ದೊರೆತು ಸ್ಥಳೀಯರಿಗೆ ಉದ್ಯೋಗಾವಕಾಶ ಲಭ್ಯವಾಗುವುದು.
ಕರ್ನಾಟಕ ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಅತಿ ಹೆಚ್ಹು 478500 ಕುರಿಗಳನ್ನು ಹೊಂದಿರುತ್ತದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಅತೀ ಹೆಚ್ಚು ಮೇಕೆಗಳನ್ನು 161129 ಹೊಂದಿರುತ್ತದೆ. ಪಶುಪಾಲನಾ ಇಲಾಖೆಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕಾಗಿ ಶಿರಾ ತಾಲ್ಲೂಕಿನ ರೈತರಿಗೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳಿಗೆ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ ಶೇ.50ರಷ್ಟು ರೂ.87,500/- ಎನ್.ಸಿ.ಡಿ.ಸಿ ಸಾಲ ಮತ್ತು ಶೇ.25ರಷ್ಟು ರೂ.43,750/- ರಾಜ್ಯ ಸರ್ಕಾರ ಸಹಾಯಧನದೊಂದಿಗೆ 20+1 ಕುರಿ/ಮೇಕೆ ಘಟಕಗಳನ್ನು ನೀಡಲಾಗುತ್ತಿದೆ.
ಶಿರಾ ತಾಲ್ಲೂಕಿನಲ್ಲಿ 132 ಫಲಾನುಭವಿಗಳಿಗೆ ಕುರಿ ಘಟಕಗಳನ್ನು ನೀಡಲಾಗಿದೆ. ನಿಗಮದ ಅನುದಾನದಲ್ಲಿ ಗಿರಿಜನ ಉಪಯೋಜನೆಯಲ್ಲಿ ಟಿ.ಎಸ್.ಪಿ. ಯೋಜನೆಯಡಿ ಕುರಿ/ ಮೇಕೆ ಘಟಕ (6+1) ಶೇ.90% ರಷ್ಟು ಸಹಾಯಧನದಲ್ಲಿ ತಾಲ್ಲೂಕಿನಲ್ಲಿ 02 ಘಟಕಗಳನ್ನು ನೀಡಲಾಗಿದೆ ಕುರಿ/ಮೇಕೆಗಳಿಗೆ ಸಾಂಕ್ರಾಮಿಕ ರೋಗಗಳ ವಿರುದ್ಧ ಕಾಲ ಕಾಲಕ್ಕೆ ಲಸಿಕೆ ಹಾಕಲಾಗಿರುತ್ತದೆ ಹಾಗೂ ಜಂತುನಾಶಕ ಔಷಧಿಯನ್ನು ನೀಡಿ ರೋಗವನ್ನು ನಿಯಂತ್ರಣದಲ್ಲಿಡಲಾಗಿದೆ.
ತುಮಕೂರಿನ ಪಶುಪಾಲನಾ ಮತ್ತು ಪಶುವೈದ್ಯ ತರಬೇತಿ ಕೇಂದ್ರದಲ್ಲಿ 898 ಆಸಕ್ತ ರೈತರಿಗೆ ಕುರಿ/ಮೇಕೆ ಸಾಕಾಣಿಕೆ ಕುರಿತಾಗಿ ತರಬೇತಿಯನ್ನು ನಿಯಮಿತವಾಗಿ ನೀಡಲಾಗಿದೆ ಶಿರಾ ತಾಲ್ಲೂಕಿನಲ್ಲಿ ವಲಸೆ ಕುರಿಗಾರರಿಗೆ ಮಳೆ, ಬಿಸಿಲು ಮತ್ತು ಗಾಳಿಯಿಂದ ರಕ್ಷಣೆ ನೀಡಲು ಟೆಂಟ್ ಮತ್ತು ಇತರೆ ಪರಿಕರಗಳನ್ನು 14 ಕುರಿಗಾಹಿಗಳಿಗೆ ವಿತರಿಸಲಾಗಿದೆ ಶಿರಾ ತಾಲ್ಲೂಕಿನಲ್ಲಿ ಸತ್ತ ಕುರಿ/ಮೇಕೆಗಳಿಗೆ ಅನುಗ್ರಹ ಕೊಡುಗೆ ಯೋಜನೆಯಡಿಯಲ್ಲಿ 1346 ರೈತರಿಗೆ ಪರಿಹಾರ ಧನ ವಿತರಿಸಲಾಗಿದೆ ಎಂದು ತಿಳಿಸಿದರು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications