ಆಟವಾಡಿಸಲು ಬಂದವಳು ಮಗು ಅಪಹರಿಸಿದಳು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜನವರಿ, 02: ಆಟವಾಡಿಸುವ ನೆಪದಲ್ಲಿ ಬಂದ ಮಹಿಳೆಯೊಬ್ಬಳು ಅಜ್ಜಿಗೆ ಮಂಕು ಬೂದಿ ಎರಚಿ ಅಜ್ಜಿ ಬಳಿಯಿದ್ದ ಮಗುವನ್ನು ನಗರದ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆ ಆಸ್ಪತ್ರೆಯಿಂದ ಶನಿವಾರ ಬೆಳಿಗ್ಗೆ ಹೊತ್ತೊಯ್ದಿದ್ದಾಳೆ.

ತಾಲೂಕಿನ ಬಿ.ಹಟ್ನಾ ಗ್ರಾಮದ ಅರುಣ್ ಕುಮಾರ್ ಮತ್ತು ಸೌಂದರ್ಯ ದಂಪತಿಯ ಮೂರು ತಿಂಗಳ ಶ್ರೀಶಾ ಎಂಬ ಗಂಡು ಮಗು ಅಪಹರಣವಾಗಿದ್ದು, ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಗು ಶ್ರೀಶಾನನ್ನು ಡಿ. 30ರಂದೇ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು.[ಸಣ್ಣಕಥೆ : ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!]

Mandya

ಮಗುವನ್ನು ಆಸ್ಪತ್ರೆಗೆ ಡಿಸೆಂಬರ್ 30ರ ಬುಧವಾರ ದಾಖಲಿಸದೆ, ಶನಿವಾರ ಬೆಳಗ್ಗೆ ತಾಯಿ ಸೌಂದರ್ಯ ತನ್ನ ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ ವೈದ್ಯರು ತಾಯಿ ಸೌಂದರ್ಯ ಅವರನ್ನು ಕರೆದಿದ್ದು, ಅವರು ಮಗುವನ್ನು ತಾಯಿ ಬಳಿ ಕೊಟ್ಟು ಹೋಗಿದ್ದರು.[ಶಾಲೆ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಬಾಲಕಿ]

ಅಜ್ಜಿಯೊಂದಿಗೆ ಮಗುವಿರುವುದನ್ನು ನೋಡಿದ ಸುಮಾರು 25 ವರ್ಷದೊಳಗಿನ ಹಸಿರು ಬಣ್ಣದ ಚೂಡಿದಾರ ಧರಿಸಿದ್ದ ಮಹಿಳೆ ಅಲ್ಲಿಗೆ ಬಂದು ಮಗುವನ್ನು ಆಟವಾಡಿಸುವ ನೆಪ ಮಾಡಿ ಅಜ್ಜಿ ಕೈಯಿಂದ ಮಗುವನ್ನು ಪಡೆದು ಅಲ್ಲಿಂದ ನಾಪತ್ತೆಯಾಗಿದ್ದಾಳೆ.[ಮಗಳನ್ನೆತ್ತಿಕೊಂಡೇ ರೈಲಿಗೆ ತಲೆಯೊಡ್ಡಿದ ತಾಯಿ]

ಮಗು ಮತ್ತು ಮಗುವನ್ನೆತ್ತಿಕೊಂಡಿದ್ದ ಮಹಿಳೆ ಕಾಣದಿದ್ದಾಗ ಭಯಗೊಂಡ ಅಜ್ಜಿ ಹುಡುಕಾಟ ಶುರು ಮಾಡಿದ್ದಾರೆ. ಆದರೆ ಎಲ್ಲೂ ಕಾಣಲಿಲ್ಲ. ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಮಗುವಿನ ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A women kidnapped 3 month male baby Srisha kidnapped in Medical Science Research institution hospital, Mandya on Saturday, January 2nd. Srisha is the son of Arun Kumar and Soundarya.
Please Wait while comments are loading...