ಶ್ರೀರಂಗಪಟ್ಟಣದಲ್ಲಿ ತಾಯಿ,ಮಗು ಮೇಲೆ ಕಾಡು ಹಂದಿ ದಾಳಿ
ಶ್ರೀರಂಗಪಟ್ಟಣ, ನವೆಂಬರ್, 14 : ಕೆಲವು ದಿನಗಳ ಹಿಂದೆ ಕರಡಿಯೊಂದು ದಾಳಿ ಮಾಡಿ ಮಹಿಳೆಯನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಾಸುವ ಮುನ್ನವೇ, ಕಾಡುಹಂದಿಯೊಂದು ಮಹಿಳೆ ಮತ್ತು ಮಗುವಿನ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ.
ಷರೀಫ್ ಎಂಬಾತನ ಪತ್ನಿ ಅಂಜುಮ್ ಮತ್ತು ಸನಂ ಎಂಬ ತಾಯಿ ಮತ್ತು ಮಗು ನವೆಂಬರ್ 12ರ ಗುರುವಾರದಂದು ಶ್ರೀರಂಗಪಟ್ಟಣದ ಟಿ.ಎಂ.ಹೊಸೂರು ಗೇಟಿನ ಅರಣ್ಯ ವಲಯ ಬಳಿಯ ವನಸುಮ ಶಾಲಾ ಆವರಣದಲ್ಲಿ ಕಾಡು ಹಂದಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದಾರೆ.[ಎಚ್ಡಿ ಕೋಟೆ ಬಳಿ ಮಹಿಳೆ ಮೇಲೆ ಎರಗಿದ ಕರಡಿ]

ಷರೀಫ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವನಸುಮ ಶಾಲೆ ಹಾಗೂ ಅದರ ಮುಂದಿನ ಜಮೀನಿನ ಉಸ್ತುವಾರಿ ನೋಡಿಕೊಳ್ಳಲು ಎಚ್ ಡಿ ಕೋಟೆಯಿಂದ ಶ್ರೀರಂಗ ಪಟ್ಟಣಕ್ಕೆ ಆಗಮಿಸಿದ್ದರು, ಷರೀಫ್ ವನಸುಮ ಶಾಲೆಯಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದನು.
ಶಾಲೆಯ ಸಮೀಪದ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದ ಅಂಜುಮ್ ಗುರುವಾರ ಸಂಜೆ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದರು. ಮನೆಯ ಆವರಣದಲ್ಲೇ ಎರಡು ವರ್ಷದ ಮಗು ಸನಂ ಆಟವಾಡುತ್ತಿತ್ತು. ಆ ಸಮಯದಲ್ಲಿ ತಾಯಿ ಮತ್ತು ಮಗುವಿನ ಮೇಲೆ ದಾಳಿ ನಡೆಸಿದ ಕಾಡು ಹಂದಿ ಗಂಭೀರವಾಗಿ ಗಾಯಗೊಳಿಸಿದೆ.












Click it and Unblock the Notifications