For Daily Alerts
ರಾಮನಗರ: ಶಾಲೆಯಲ್ಲಿ ಶಿಕ್ಷಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ
ರಾಮನಗರ, ಆಗಸ್ಟ್ 16: 'ಗುರು ದೇವೋ ಭವ' ಎಂಬ ಸಂಸ್ಕೃತಿ ನಮ್ಮದು. ಆದರೆ ಕ್ಷುಲ್ಲಕ ಕಾರಣವೊಂದಕ್ಕೆ ವ್ಯಕ್ತಿಯೊಬ್ಬ ಶಿಕ್ಷಕಿಗೆ ಬೆಂಕಿ ಹಚ್ಚಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶಂಬಯ್ಯನಪಾಳ್ಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಂಬಯ್ಯನಪಾಳ್ಯ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಕೆ.ಜಿ.ಸುನಂದಾ ಅವರ ಮೇಲೆ ಪೆಟ್ರೋಲ್ ಸುರಿದು ಅವರನ್ನು ಹತ್ಯೆಗೈಯಲು ಯತ್ನಿಸಿದವನನ್ನು ರೇಣುಕಾರಿಧ್ಯ ಎಂದು ಗುರುತಿಸಲಾಗಿದ್ದು, ಈತ ಸುನಂದಾ ಅವರಿಗೆ ಪರಿಚಿತನೇ ಎಂಬ ಮಾಹಿತಿ ದೊರಕಿದೆ.
ಸುಟ್ಟ ಗಾಯಗಳಿಂದ ಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.