Get Updates
Get notified of breaking news, exclusive insights, and must-see stories!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ 'ಪಶು ಆಹಾರ ಘಟಕ' ಸ್ಥಾಪನೆ

ಹಾವೇರಿ, ಮಾರ್ಚ್ 10: ದನಕರುಗಳಿಗೆ ಉತ್ಕೃಷ್ಟವಾದ ಆಹಾರವನ್ನು ಪೂರೈಸಲು ಸರ್ಕಾರ ಮುಂದಾಗಿದ್ದು, ಹಾವೇರಿಯಲ್ಲಿ 'ಪಶು ಆಹಾರ ಘಟಕ' ಸ್ಥಾಪನೆ ನಿರ್ಧರಿಸಲಾಗಿದೆ. ಇದರಿಂದ ರೈತರಿಗೆ ಸುಲಭವಾಗಿ ಸ್ಥಳೀಯ ಮಟ್ಟದಲ್ಲಿ ಪಶುಆಹಾರ ಸಿಗುವಂತಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಜಿಲ್ಲೆಯ ಜಂಗಮನಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅವರು ಯುಎಚ್‌ಟಿ ಹಾಲು ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಟಕದ ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರ ಲಕ್ಷಾಂತರ ರೈತ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಈಗ ಹಾವೇರಿ ಜಿಲ್ಲೆಯಲ್ಲಿ 1.65 ಲಕ್ಷ ರೈತರಿಗೆ 438 ಕೋಟಿ ರೂ.ಗಳ ಬೆಳೆ ವಿಮೆ ನೀಡುವ ಮೂಲಕ ಸರ್ಕಾರ ಬರೆದಿದೆ ಎಂದು ಹೇಳಿದರು.

A Cattle Feed Unit Will Be Setup In Haveri To Provide Superior Fodder To The Cattle

ರೈತರಿಗೆ ವಿಮಾ ಯೋಜನೆಗೆ 80 ಕೋಟಿ ರೂಪಾಯಿ ಒದಗಿಸಲಾಗಿದೆ. ಹಾವೇರಿಯಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಅದರಲ್ಲಿ ತುಂಗಾ ಮೇಲ್ದಂಡೆ ಯೋಜನೆಯಿಂದ 1 ಲಕ್ಷ ಹೆಕ್ಟೇರ ಜಮೀನಿಗೆ ನೀರಾವರಿ, ಬ್ಯಾಡಗಿ, ಹಿರೇಕೆರೂರು,ಹಾನಗಲ್, ರಾಣಿಬೆನ್ನೂರುಗಳಲ್ಲಿ ಏತ ನೀರಾವರಿ ಒದಗಿಸಲಾಗಿದೆ. ಇವೆಲ್ಲವೂ ಹೈನುಗಾರಿಕೆಗೆ ಪೂರಕವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ದಿಗೆ ವಿಶೇಷ ಮಂಡಳಿ ರಚಿಸಿದ್ದು, ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಮಂಡಳಿಯನ್ನು ರಚಿಸಲಾಗಿದೆ ಎಂದರು.

ರಾಜ್ಯದ ಗೋಶಾಲೆಗಳಿಗೆ 30 ಕೋಟಿ ರೂಪಾಯಿ: ಸಿಎಂ

ಪುಣ್ಯಕೋಟಿ ದತ್ತುಯೋಜನೆಯ ಮೂಲಕ ಒಂದು ಗೋವನ್ನು ವಾರ್ಷಿಕ 11 ಸಾವಿರ ರೂ.ಗಳನ್ನು ನೀಡಿ ದತ್ತು ಪಡೆಯಬಹುದಾಗಿದ್ದು, 43 ಕೋಟಿ ರೂ. ಸೇರಿಸಲಾಗಿದ್ದು, ಇನ್ನೊಂದು ವಾರದ ಅವಧಿಯಲ್ಲಿ 30 ಕೋಟಿ ರೂ.ಗಳನ್ನು ರಾಜ್ಯದ ವಿವಿಧ ಗೋಶಾಲೆಗಳಿಗೆ ಪ್ರತಿ ಗೋವಿಗೆ 11 ಸಾವಿರದಂತೆ ಬಿಡುಗಡೆ ಮಾಡಲಾಗುವುದು ಎಂದರು.

ಗೋರಕ್ಷಣೆ ಕಾನೂನು ತಂದು ಅನಗತ್ಯ ಗೋಹತ್ಯೆ ನಿಯಂತ್ರಿಸಲಾಗಿದೆ. ಬೇರೇ ರಾಜ್ಯದ ಕಟುಕರಿಗೆ ಗೋವು ಸರಬರಾಜನ್ನು ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ವಿವರಿಸಿದರು.

A Cattle Feed Unit Will Be Setup In Haveri To Provide Superior Fodder To The Cattle

ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆ ಪಾತ್ರ ಮಹತ್ವದ್ದು. ವರ್ಷ 2 ಋತುವಿನಲ್ಲಿ ಹಾಲು ಉತ್ಪಾದನೆ ಆಗುತ್ತದೆ. ಪೀಕ್ ಸೀಸನ್ ನಲ್ಲಿ 2018 ರಲ್ಲಿ 84. 43 ಲಕ್ಷ ಇದ್ದ ಹಾಲು ಉತ್ಪಾದನೆ ಈ ವರ್ಷ 94.18 ಲಕ್ಷದಷ್ಟು ಏರಿಕೆ ಆಗಿದೆ. ಬೇಸಿಗೆ ಕಾಲದಲ್ಲಿ 2018 ರಲ್ಲಿ 66 ಲಕ್ಷ ಇದ್ದ ಹಾಲು ಉತ್ಪಾದನೆ 71.20 ಲಕ್ಷ ಲೀಟರ್‌ಗೆ ಹೆಚ್ಚಾಗಿದೆ. ಹಾಲಿನ ದರ ಏರಿಕೆ ಮೂಲಕ ಸರ್ಕಾರ ಹಾಲು ಉತ್ಪಾದಕರ ಪರ ಎಂದು ಸಾಬೀತಾಗಿದೆ ಎಂದು ತಿಳಿಸಿದರು.

ಘಟಕದ ಸಾಮರ್ಥಯ 3 ಲಕ್ಷ ಲೀಟರ್‌ಗೆ ಹೆಚ್ಚಿಸಬೇಕು

ಹೋರಾಟದ ಫಲವಗಿ ಜಿಲ್ಲೆಯ ಹೊಸ ಹಾಲು ಒಕ್ಕೂಟ ಸ್ಥಾಪಿಸಲಾಯಿತು. ನೂರು ಕೋಟಿ ರೂಪಾಯಿಗಳ ಮೆಗಾ ಡೈರಿಗೆ ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗಿದೆ. ಇಂದು ಜಿಲ್ಲೆಯಲ್ಲಿ 70 ಸಾವಿರದಿಂದ 1 ಲಕ್ಷ ಲೀಟರ್ ವರೆಗೂ ಟೆಟ್ರಾ ಪ್ಯಾಕ್, ಏಳು ಪದರವಿರುವ ಮತ್ತು ಆರು ತಿಂಗಳು ಬಳಸಬಹುದಾದ ಅತ್ಯುತ್ತಮ ತಂತ್ರಜ್ಞಾನ ಬಳಸಿ ಗುಡ್ ಲೈಫ್ ಹಾಲು ತಯಾರಿಸಲಾಗುತ್ತದೆ.

ಹಾಲು ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಕಟದಲ್ಲಿ 750 ಮಿ.ಲೀ ಹಾಗೂ ಒಂದು ಸಾವಿರ ಮಿ.ಲೀ ಸಾಮರ್ಥ್ಯವಿದೆ. ಬೇರೆ ಯಾವುದೇ ಭಾಗದಲ್ಲಿ 500 ಎಂ.ಎಲ್ ಗಿಂತ ಹೆಚ್ಚು ಉತ್ಪಾದಿಸುವ ಘಟಕವಿಲ್ಲ. 50 ಸಾವಿರ ಲೀಟರ್ ಸ್ಯಾಚೆಟ್, ಒಂದೂವರೆ ಲಕ್ಷ ಲೀಟರ್ ಹಾಲು ಒಂದು ದಿನಕ್ಕೆ ಸಂಸ್ಕರಣೆಯಾಗಿ ಪ್ಯಾಕೇಜ್ ಆಗುವ ಘಟಕ ಇದಾಗಿದೆ. ಇದನ್ನು ಒಂದೇ ವರ್ಷದಲ್ಲಿ 3 ಲಕ್ಷ ಲೀ.ವರೆಗೆ ಏರಿಸಬೇಕು. ರೈತರಿಗೆ ಒಳ್ಳೆ ದರವನ್ನು ಕೊಟ್ಟು, ಕ್ಷೀರ ಕ್ರಾಂತಿಯನ್ನು ಮಾಡಬೇಕು ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಪ್ರಭು ಚೌಹಾಣ್, ಶಾಸಕ ನೆಹರೂ ಒಲೇಕಾರ್, ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಮತ್ತಿತರರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+