ಮಳೆಯಿಂದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಸಾವು
ಹಾವೇರಿ, ಅಕ್ಟೋಬರ್ 17: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರದ ಮಳೆಯಾಗುತ್ತಿದ್ದು, ರಾಜ್ಯದ ಜನತೆ ಮಳೆಗೆ ರೋಸಿ ಹೋಗಿದ್ದಾರೆ. ಹಾವೇರಿಯಲ್ಲಿ ಎಡೆಬಿಡದೆ ಸುರಿದ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಧಾರಕಾರ ಮಳೆಯಿಂದಾಗಿ ರಸ್ತೆ ಕಾಣದೇ 12 ವರ್ಷದ ಬಾಲಕ ನಿವೇದ್ ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿತ್ತು. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗವೇ ಈ ಘಟನೆ ನಡೆದಿತ್ತು. 12 ವರ್ಷದ ನಿವೇದನ್ ಬಸವರಾಜ್ ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವೈದ್ಯರು ಎಷ್ಟೇ ಹರಸಾಹಸ ಪಟ್ಟರೂ ಬಾಲಕನನ್ನು ಉಳಿಸಲು ಸಾಧ್ಯವಾಗಲಿಲ್ಲ.

ನಿರ್ಮಲ ಮತ್ತು ಬಸವರಾಜ್ ಎಂಬ ದಂಪತಿಗೆ ಎರಡು ಮಕ್ಕಳು ಇದ್ದರು. ಆರತಿಗೆ 1 ಮಗು ಕೀರ್ತಿಗೆ 1 ಮಗು ಅಂತಾ ನಗು ನಗುತ್ತ ಬಾಳ್ತಾ ಇದ್ದ ಕುಟುಂಬ ಈಗ ಕಣ್ಣೀರು ಹಾಕ್ತಿದೆ. ಇಬ್ಬರ ಮಕ್ಕಳು ಪೈಕಿ 1 ಹೆಣ್ಣು ಮಗು ಆಧ್ಯಾ, ಇನ್ನೊಂದು ಮಗು ಗಂಡು ನಿವೇದನ್ ಎಂದು ಚಿಕ್ಕ ಮಕ್ಕಳು ಜೊತೆ ಕುಟುಂಬಸ್ಥರು ಸಂತೋಷವಾಗಿ ಬಾಳ್ತಿದ್ರು. ಆದ್ರೆ, ಮಗ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬಿಸ್ಕೇಟ್ ತರ್ತೆನಿ ಅಂತ ಹೋದ ಬಾಲಕ ನಿವೇದನ್ ಹಾವೇರಿ ನಗರದ ಶಿವಾಜಿ ನಗರದ ಬಳಿ ಇರುವ ಮಳೆ ನೀರು ನೋಡಲು ಹೋಗಿ, ಚರಂಡಿಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ.
ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದ ಬಾಲಕ ಪತ್ತೆಯಾಗಿದ್ದಾನೆ. ಒಡ್ಡಮ್ಮ ದೇವಸ್ಥಾನ ದ ಬಳಿ ಚರಂಡಿಯಲ್ಲಿ ಸಿಲುಕಿ ಕೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಅಂಬುಲನ್ಸ್ ನಲ್ಲಿ ಜಿಲ್ಲಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಗಿದೆ. ಬೆಳಿಗ್ಗೆಯಿಂದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ, ಪೌರಕಾರ್ಮಿಕರ ಕಾರ್ಯಾಚರಣೆ ನಡೆಸುವ ಮೂಲಕ ಚರಂಡಿಯಲ್ಲಿ ಸಿಲುಕಿದ್ದ ಬಾಲಕನನ್ನು ಚರಂಡಿಯ ಮೇಲೆನ ಕಲ್ಲುಗಳನ್ನು ತಗೆದು ಹೊರತಂದರು. ಆದರೆ, ಚಿಕಿತ್ಸೆ ಫಲಿಸಲದೆ ಬಾಲಕ ಮೃತ ಪಟ್ಟಿದ್ದಾನೆ.
ವೈದ್ಯರ ಘೋಷಣೆ ಬಳಿಕ ಡಿಸಿ ವಿಜಯಮಹಾಂತೇಶ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಮೂರು ಬಾರಿ ಪರೀಕ್ಷೆ ಮಾಡಿದ್ದಾರೆ,ಆಗಲಿಲ್ಲ. ಸ್ಥಳದಲ್ಲಿ ಬಾಡಿ ಸಿಕ್ಕಾಗ ಬದುಕಿದ್ದಾನೆಂದು ತಿಳಿದಿತ್ತು. ಆದರೆ ಬಾಲಕ ಬದುಕಿಲ್ಲ ಮರಣ ಹೊಂದಿದಾನೆಂದು ವೈದ್ಯರು ಹೇಳಿದ್ದಾರೆ. ನಮಗೆ ಬಹಳ ದುಃಖ ಆಗುತ್ತಿದೆ. ಈ ದುಃಖ ತಡೆದುಕೊಳ್ಳುವಂತ ಶಕ್ತಿ ಭಗವಂತ ನೀಡಲಿ, ನಾವು ಸರ್ಕಾರದಿಂದ ಬರುವ ಎಲ್ಲಾ ಪರಿಹಾರ ಹಾಗೂ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಹೇಳಿದರು.
ಮಗು ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದೆ: ಬೊಮ್ಮಾಯಿ
ಹಾವೇರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಒಂದು ಮಗು ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದೆ. ಎಲ್ಲ ತಾಲೂಕುಗಳಲ್ಲಿ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.












Click it and Unblock the Notifications