ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಂದರವಾಗಿರುವುದೇ ಸಾಧನೆಯೇ?: ಚರ್ಚೆ ಹುಟ್ಟುಹಾಕಿದೆ ಮದುವೆ ಜಾಹೀರಾತು

By Manjunatha
|
Google Oneindia Kannada News

ಬೆಂಗಳೂರು, ಜುಲೈ 26: ಮದುವೆಯಾಗುವ ಗಂಡು ಐಎಎಸ್, ಐಪಿಎಸ್ ಆಗಿರಬೇಕು ಅಥವಾ ವಿಪರೀತ ಶ್ರೀಮಂತನಾಗಿರಬೇಕು. ಆದರೆ ಹುಡುಗಿಗೆ ಈ ನಿಯಮಗಳೆಲ್ಲಾ ಅನ್ವಯಿಸುವುದಿಲ್ಲ ಆಕೆ ಸುಂದರವಾಗಿದ್ದರೆ ಸಾಕು, ಹೀಗೊಂದು ಜಾಹೀರಾತು ನಗರದ ಪ್ರಮುಖ ಪತ್ರಿಕೆಗಳಲ್ಲಿ ಅಚ್ಚಾಗಿ ವಿವಾದ ಸೃಷ್ಟಿಸಿದೆ.

ಈ ಜಾಹೀರಾತಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. 'ಯಂಗ್ ಅಚಿವರ್ಸ್ ಮ್ಯಾಟ್ರಿಮೋನಿಯಲ್ ಮೀಟ್' ಎಂಬ ಹೆಸರಿನ ಜಾಹೀರಾತು ಕೇವಲ ಶ್ರೀಮಂತ ವರ್ಗವನ್ನೇ ದೃಷ್ಟಿಯಲ್ಲಿಟ್ಟುಕೊಂಡಿದೆ. ಅಷ್ಟೆ ಅಲ್ಲದೆ ಸುಂದರವಾಗಿರುವುದು ಸಾಧನೆ ಎಂಬಂತೆ ಜಾಹೀರಾತಿನಲ್ಲಿ ಹೇಳಲಾಗಿರುವುದು ಹಲವರ ಕಣ್ಣು ಕೆಂಪಗಾಗಿಸಿದೆ.

ಇನ್ನು ಮುಂದೆ ವಾಟ್ಸಾಪ್ ಸಂದೇಶ ಮನಬಂದಂತೆ ಫಾರ್ವರ್ಡ್ ಮಾಡುವಂತಿಲ್ಲ ಇನ್ನು ಮುಂದೆ ವಾಟ್ಸಾಪ್ ಸಂದೇಶ ಮನಬಂದಂತೆ ಫಾರ್ವರ್ಡ್ ಮಾಡುವಂತಿಲ್ಲ

ಮಿಸ್ಟರ್ ಆಂಡ್ ಮಿಸಸ್ ಶ್ರೀರಾಮ್ ಎಂಬುವರು ಈ ವಧು-ವರರ ಭೇಟಿ ಕಾರ್ಯಕ್ರಮವನ್ನು ಲೀಲಾ ಪ್ಯಾಲೆಸ್‌ನಲ್ಲಿ ಆಯೋಜಿಸಿ, ಅದರ ಜಾಹೀರಾತನ್ನು ನಗರದ ಹಲವು ಪ್ರಮುಖ ಇಂಗ್ಲಿಷ್ ಪತ್ರಿಕೆಗಳಿಗೆ ನೀಡಿದ್ದರು. ಈ ಜಾಹೀರಾತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ವಿವಾದದ ಕಿಡಿಯನ್ನು ಎಬ್ಬಿಸಿದೆ. ಇದನ್ನು ವಿರೋಧಿಸುವವರಾಗಿದ್ದರೆ ನಿಮ್ಮ ಅಭಿಪ್ರಾಯವನ್ನು ಲೇಖನದ ಕೊನೆಗೆ ಮಂಡಿಸಿ.

ಸಾಧನೆ ಅಳೆಯಲು ಸುಂದರತೆ ಮಾನದಂಡವೇ?

ಸಾಧನೆ ಅಳೆಯಲು ಸುಂದರತೆ ಮಾನದಂಡವೇ?

ಹುಡುಗರ ಸಾಧನೆ ಅಳೆಯಲು ಐಐಟಿ, ಐಐಎಂ, ಐಎಎಸ್, ಐಪಿಎಸ್, ಯಶಸ್ವೀ ಉದ್ಯಮ, ವೈದ್ಯ, ವಿಜ್ಞಾನಿ, ಸಿಎ ಎಂಬೆಲ್ಲಾ ಮಾನದಂಡಗಳನ್ನು ಬಳಸಿ, ಯುವತಿಯ ಸಾಧನೆ ಅಳೆಯಲು ಕೇವಲ 'ಸುಂದರತೆಯನ್ನು' ಮಾನದಂಡವಾಗಿ ಬಳಸಿರುವ ಇವೆಂಟ್ ಆಯೋಜಕರ ವಿರುದ್ಧ ಭಾರಿ ಟೀಕಾಪ್ರಹಾರ ನಡೆಯುತ್ತಿದೆ.

'ಮಾಲ್' ಕನ್ನಡ ಓದಿ ನಗುವುದೋ ಅಳುವುದೋ ನೀವೇ ಹೇಳಿ 'ಮಾಲ್' ಕನ್ನಡ ಓದಿ ನಗುವುದೋ ಅಳುವುದೋ ನೀವೇ ಹೇಳಿ

ಸುಂದರವಾಗಿರುವುದು ಸಾಧನೆಯೇ?

ಸುಂದರವಾಗಿರುವುದು ಸಾಧನೆಯೇ?

ಜಾಹೀರಾತಿನಲ್ಲಿ ಯಂಗ್ ಅಚೀವರ್ಸ್‌ (ಯುವ ಸಾಧಕರು) ಕಾಲಂ ನಲ್ಲಿ, ಐಐಟಿ, ಐಐಎಂ ಪದವೀಧರರು, ಐಎಎಸ್, ಐಪಿಎಸ್, ಸಿಎ ಅಧಿಕಾರಿಗಳು, ಯುವ ಯಶಸ್ವೀ ಉದ್ಯಮಿಗಳು ಭಾಗವಹಿಸಬೇಕೆಂದು ನಿಯಮ ವಿಧಿಸಲಾಗಿದೆ. ಅದೇ ಯುವ ಸಾಧಕರ ಕಾಲಂ ನಲ್ಲಿ 'ಸುಂದರ ಹುಡುಗಿಯರು' ಎಂದು ನಮೂದಾಗಿರುವುದು ವಿವಾದ ಕೇಂದ್ರವಾಗಿದೆ. ಸುಂದರತೆ ಹೇಗೆ ಸಾಧನೆಯಾಗುತ್ತದೆ ಎಂದು ನೆಟ್ಟಿಗರು ಜಾಹೀರತು ನೀಡಿದವರನ್ನು ಜಾಡಿಸುತ್ತಿದ್ದಾರೆ.

ಸುಂದರವಲ್ಲದ ಹುಡುಗಿಯರು ಸಾಧಕರಲ್ಲವೆ?

ಸುಂದರವಲ್ಲದ ಹುಡುಗಿಯರು ಸಾಧಕರಲ್ಲವೆ?

ಸುಂದರತೆಯನ್ನು ಸಾಧನೆಯ ಪಟ್ಟಿಯಲ್ಲಿ ಸೇರಿಸಿರುವ ಆಯೋಜಕರು ಯುವತಿಯರಿಗೆ ಅವಮಾನ ಮಾಡಿದ್ದಾರೆ ಎಂದು ಹಲವರು ಧನಿ ಎತ್ತಿದ್ದಾರೆ. ಸುಂದರವಲ್ಲದ ಹುಡುಗಿಯರು ಸಾಧನೆ ಮಾಡುವುದಿಲ್ಲವೆ. ಅಥವಾ ಸುಂದರವಿಲ್ಲದ ಕಾರಣ ಅವರು ಮಾಡಿದ ಸಾಧನೆ ಲೆಕ್ಕಕ್ಕೆ ಬರುವುದಿಲ್ಲವೆ? ಅಥವಾ ಮದುವೆಯಾಗಲು ಸೌಂದರ್ಯವೇ ಅರ್ಹತೆಯೇ? ಎಂಬ ಹಲವು ಪ್ರಮುಖ ಪ್ರಶ್ನೆಗಳು ಏಳುತ್ತಿವೆ.

ಐಐಟಿ/ಐಐಎಂ ಮಾತ್ರವೇ ಸಾಧನೆಯೇ?

ಐಐಟಿ/ಐಐಎಂ ಮಾತ್ರವೇ ಸಾಧನೆಯೇ?

ಅಷ್ಟೆ ಅಲ್ಲ ಸಾಧನೆ ಎಂದರೆ ಐಐಟಿ, ಐಐಎಂ ಪಾಸಾಗುವುದಲ್ಲ, ಐಎಎಸ್, ಐಪಿಎಸ್ ಪಾಸು ಮಾಡುವುದಲ್ಲ ಎಂದೂ ಹಲವು ಯುವಕರು ಧನಿ ಎತ್ತಿದ್ದು, ರೈತ ಯುವಕನಿಗೆ, ಕಾಲ್ ಸೆಂಟರ್ ಯುವಕನಿಗೆ, ಪತ್ರಕರ್ತನಿಗೆ, ಸೈನ್ಯದಲ್ಲಿ ದೇಶಸೇವೆ ಮಾಡುತ್ತಿರುವ ಯುವಕನಿಗೆ ಈ ಜಾಹೀರಾತು ಅವಮಾನ ಮಾಡುತ್ತಿದೆ ಎಂದು ಪ್ರತಿಭಟಿಸಿದ್ದಾರೆ.

ಶ್ರೀಮಂತನಾಗಿದ್ದರೆ ಸಾಕು ಸಾಧನೆ ಬೇಕಿಲ್ಲ

ಈ ಜಾಹಿರಾತಿನ ವರಾತ ಅಲ್ಲಿಗೆ ಮುಗಿದಿಲ್ಲ. ಅತಿ ಶ್ರೀಮಂತ ಕುಟುಂಬದ ಯುವಕರು, ರಾಜಕಾರಣಿಗಳ ಕುಟುಂಬದವರು, ಅಥವಾ ಸೆಲೆಬ್ರಿಟಿ ಕುಟುಂಬದ ಯುವಕರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಶ್ರೀಮಂತ ಕುಟುಂಬದ ಯುವಕರಿಗೆ ಸಾಧಕನ ಅರ್ಹತೆಗಳಿಂದ ರಿಯಾಯಿತಿಯನ್ನೂ ನೀಡಲಾಗಿದೆ!

ಶ್ರೀಮಂತರ ಕುಟುಂಬದಲ್ಲಿ ಹುಟ್ಟುವುದು ಸಾಧನೆ!

ಹುಡುಗ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೆ ಸಾಕು ಆತ ಸಾಧನೆ ಮಾಡಲಿ ಮಾಡದೇ ಇರಲಿ, ಓದಿರಲಿ, ಓದದೇ ಇರಲಿ ಆತ ಸಾಧಕನಾಗಿಬಿಡುತ್ತಾನೆ ಎಂಬ ನಿಲವು ಆಯೋಜಕರದ್ದು. ಈ ವಿಷಯದ ಬಗ್ಗೆಯೂ ಸಾಮಾಜಿಕ ಜಾಳತಾಣದಲ್ಲಿ ಆಯೋಜಕರಿಗೆ ಮಾತಿನ ಪೆಟ್ಟು ನೀಡಲಾಗಿದೆ.

ಇವೆಂಟ್ ರದ್ದು ಮಾಡಿರುವ ಆಯೋಜರು

ಇಷ್ಟೆಲ್ಲಾ ವಿರೋಧ ವ್ಯಕ್ತ ಬಂದಮೇಲೆ ಯಂಗ್ ಅಚೀವರ್ಸ್ ಮ್ಯಾಟ್ರೊಮೋನಿಯಲ್ ಮೀಟ್ ಅನ್ನು ಆಯೋಜಕರು ರದ್ದು ಮಾಡಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

'ಸುಂದರ ಯುವತಿ' ಪದ ಸೇರಿಸಿದ್ದು ತಪ್ಪು

ಕಳೆದ ಬಾರಿ ವೈದ್ಯರ ವಧು-ವರರ ಭೇಟಿ ಕಾರ್ಯಕ್ರಮ ಆಯೋಜಿಸಿದ್ದೆವು ಅದರಲ್ಲಿ ಹಲವು ಪೋಷಕರು ತಮ್ಮ ಮಗಳು ಬೇರೆ ವೃತ್ತಿಯಲ್ಲಿರುವುದಾಗಿ ಹೇಳಿದ್ದರು. ಹಾಗಾಗಿ ಎಲ್ಲಾ ವೃತ್ತಿಯ ಹೆಸರು ಹಾಕುವ ಬದಲಿಗೆ 'ಸುಂದರ ಯುವತಿ' ಎಂದು ಹಾಕಿದೆವು ಆದರೆ ಅದೇ ಈಗ ವಿವಾದವಾಗಿಬಿಟ್ಟಿದೆ ಎಂದು ಶ್ರೀರಾಮ್ ಕೈ-ಕೈ ಹಿಸುಕಿಕೊಂಡಿದ್ದಾರೆ.

English summary
A ad from Mr and mrs Sriram in a news paper about Young achievers matrimonial meet' started debate over social media. In the as in achievement category organizers included 'beauty' so social media people taking on organizers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X