ಲಾಕ್ ಡೌನ್; ನಷ್ಟದ ಲೆಕ್ಕ ಕೊಟ್ಟ ಕೆಎಸ್ಆರ್‌ಟಿಸಿ
ಬೆಂಗಳೂರು, ಏಪ್ರಿಲ್ 22 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಯಿತು. ಮೊದಲ ಹಂತದ 21 ದಿನಗಳ ಲಾಕ್ ಡೌನ್ ಪೂರ್ಣಗೊಂಡಿದೆ. 2ನೇ ಹಂತದಲ್ಲಿ 19 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಇದರಿಂದಾಗಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
Recommended Video
ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಣೆಗೂ ಮುನ್ನವೇ ಐಷಾರಾಮಿ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಘೋಷಣೆಯಾದ ಬಳಿಕ ಎಲ್ಲಾ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಯಿತು. ಇದರಿಂದ ಮೊದಲೇ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗಳಿಗೆ ಮತ್ತಷ್ಟು ನಷ್ಟವಾಯಿತು.
ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಎಷ್ಟು ನಷ್ಟವಾಗಿದೆ? ಎಂಬ ಹಲವು ಲೆಕ್ಕಾಚಾರಗಳು ಕೇಳಿ ಬರುತ್ತಿವೆ. ಬುಧವಾರ ಕೆಎಸ್ಆರ್‌ಟಿಸಿ ಅಧಿಕೃತವಾಗಿ ಎಷ್ಟು ನಷ್ಟವಾಗಿದೆ? ಎಂಬ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಒಟ್ಟು ನಾಲ್ಕು ಸಾರಿಗೆ ಸಂಸ್ಥೆಗಳಿಂದ ಏಪ್ರಿಲ್ 20ರ ತನಕ 816.23 ಕೋಟಿ ರೂ. ನಷ್ಟವಾಗಿದೆ. ಇದರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 149 ಕೋಟಿ ರೂ. ನಷ್ಟವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಎಸ್ಆರ್‌ಟಿಸಿಗೆ ಎಷ್ಟು ನಷ್ಟ?
ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಕೆಎಸ್ಆರ್‌ಟಿಸಿಗೆ ಅಧಿಕ ನಷ್ಟ ಉಂಟಾಗಿದೆ. ಐಷಾರಾಮಿ, ಸಾಮಾನ್ಯ ಬಸ್‌ಗಳ ಸಂಚಾರ ನಿಂತಿದ್ದರಿಂದ ಏಪ್ರಿಲ್ 20ರ ತನಕ ನಿಗಮಕ್ಕೆ 314. 89 ಕೋಟಿ ರೂ. ನಷ್ಟ ಉಂಟಾಗಿದೆ. ಹೊರ ರಾಜ್ಯಗಳಿಗೆ ಸಂಚಾರ ನಡೆಸುವ ಬಸ್‌ಗಳು ಸಹ ಸ್ಥಗಿತಗೊಂಡಿವೆ.

ಬಿಎಂಟಿಸಿಗೆ ಆದ ನಷ್ಟದ ವಿವರ?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರಿನ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನರು ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುತ್ತಾರೆ. ಈಗ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ಬಿಎಂಟಿಸಿಗೆ 149.34 ಕೋಟಿ ರೂ. ನಷ್ಟವಾಗಿದೆ.

ವಾಯುವ್ಯ ಕರ್ನಾಟಕ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಏಪ್ರಿಲ್ 20ರ ತನಕ 172 ಕೋಟಿ ನಷ್ಟವಾಗಿದೆ. ಟಿಕೆಟ್ ಹೊರತುಪಡಿಸಿ ಸಂಸ್ಥೆಗಳಿಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ. ಮೊದಲೇ ನಷ್ಟದಲ್ಲಿದ್ದ ಸಂಸ್ಥೆಗಳು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿವೆ.

ಈಶಾನ್ಯ ಕರ್ನಾಟಕ
ಏಪ್ರಿಲ್ 20ರ ತನಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 180 ಕೋಟಿ ರೂ. ನಷ್ಟವಾಗಿದೆ. ನಷ್ಟದಿಂದ ಹೊರ ಬರುವುದು ಹೇಗೆ? ಎಂಬುದು ಸಾರಿಗೆ ಸಂಸ್ಥೆಗಳ ಚಿಂತೆಯಾಗಿದೆ.












Click it and Unblock the Notifications