ಸೋಮೇಶ್ವರಖಾನ್ ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

Recommended Video

      ಸಾಮಾಜಿಕ ಜಾಲತಾಣದಲ್ಲಿ ಎಚ್ ಡಿ ಕೆ ಜಿಲ್ಲೆಗೆ‌ ಬರುವಂತೆ ಮನವಿ ಮಾಡಿದ ಮೂಡಿಗೆರೆ ಶಾಸಕ

      ಚಿಕ್ಕಮಗಳೂರು, ಆಗಸ್ಟ್.24: ಕಾಫಿನಾಡಲ್ಲಿ ಮನೆಗಳ ಬಿರುಕು ಹೆಚ್ಚುತ್ತಲೇ ಇದ್ದು, ಭೂ ಕುಸಿತವೂ ಕಡಿಮೆಯಾಗಿಲ್ಲ. ಕೊಪ್ಪ‌ ತಾಲೂಕಿನ ಸೋಮೇಶ್ವರಖಾನ್ ಗ್ರಾಮದಲ್ಲಿ ಇದಕ್ಕಿದ್ದಂತೆ 8 ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

      ಈ ಹಿನ್ನೆಲೆಯಲ್ಲಿ ಮನೆಯೊಳಗಿನ ವಸ್ತುಗಳನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ತೋಟಗಳಲ್ಲಿ ಭೂಕುಸಿತ, ಕುಸಿದು ಬೀಳುತ್ತಿರುವ ರಸ್ತೆಗಳಿಂದ ಜನ ಆತಂಕಗೊಂಡಿದ್ದಾರೆ.

      ಬಸ್ರೀಕಟ್ಟೆ ,ಮೇಗುಂದ, ಸೋಮೇಶ್ವರಖಾನ್ ಗ್ರಾಮಗಳಲ್ಲಿ ಭೂಕುಸಿತ, ಮನೆಗಳ ಬಿರುಕು ಹೆಚ್ಚಾಗಿದೆ. ಮಳೆ ಕಮ್ಮಿಯಾದ್ರು ನಿಲ್ಲದ ಭೂ ಕುಸಿತ, ಮನೆಗಳ ಬಿರುಕಿಗೆ ಜನ ಹೈರಾಣಾಗಿದ್ದಾರೆ.

      8 houses cracked in Chikkamagaluru district

      ಮನವಿ ಮಾಡಿದ ಶಾಸಕ

      ಸಿಎಂ ಕುಮಾರಸ್ವಾಮಿ ಚಿಕ್ಕಮಗಳೂರು ಜಿಲ್ಲೆಗೆ‌ ಬರುವಂತೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ.

      ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೈಮುಗಿದು ಜಿಲ್ಲೆಗೆ ಬರುವಂತೆ ಮನವಿ ಮಾಡಿರುವ ಅವರು ಅತಿವೃಷ್ಡಿ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮೂಡಿಗೆರೆ ತಾಲೂಕಿನಲ್ಲಿ ಗ್ರಾಮ ವಾಸ್ತವ ಮಾಡುವಂತೆ ಮನವಿ ಮಾಡಿದ್ದಾರೆ.

      8 houses cracked in Chikkamagaluru district

      ಜಿಲ್ಲೆಯ ಅತಿವೃಷ್ಟಿ ಪರಿಶೀಲನೆ ನಡೆಸಲು ಶಾಸಕರು ಸಾಮಾಜಿಕ ಜಾಲದ ಮೊರೆ ಹೋಗಿದ್ದು, ಅವರು ಕೈ ಮುಗಿದು ಬೇಡಿಕೊಳ್ಳುತ್ತಿರುವ ವೀಡಿಯೊ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+