Get Updates
Get notified of breaking news, exclusive insights, and must-see stories!

7th Pay Commission; ಸಂಕಟಕ್ಕೆ ಸಿಲುಕಿದ ನಿವೃತ್ತ ಸರ್ಕಾರಿ ನೌಕರರು

ಬೆಂಗಳೂರು, ಮೇ 13: ಕರ್ನಾಟಕದ 5 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಮತ್ತು ಲಕ್ಷಾಂತರ ನಿವೃತ್ತ ನೌಕರರು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಯಾವಾಗ? ಎಂದು ಕಾದು ಕುಳಿತಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರದ ಮತದಾನ ಮುಕ್ತಾಯಗೊಂಡರೂ ಸಹ ಮಾದರಿ ಚುನಾವಣಾ ನೀತಿ ಸಂಹಿತೆ ಸಡಿಲಗೊಂಡಿಲ್ಲ.

ಜೂನ್ 6ರ ತನಕ ಲೋಕಸಭೆ ಚುನಾವಣೆ ನೀತಿ ಸಂಹಿತೆ, ಜೂನ್‌ 12ರ ತನಕ ವಿಧಾನ ಪರಿಷತ್‌ನ 6 ಸ್ಥಾನಗಳ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಸಡಿಲಗೊಳಿಸುವಂತೆ ಕೋರಿ ಪತ್ರವನ್ನು ಬರೆದಿದ್ದಾರೆ.

7th Pay Commission Report Karnataka Retired Government Employees Trouble

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯದ 7ನೇ ವೇತನ ಆಯೋಗವು ಮಾರ್ಚ್‌ 16ರಂದು ವರದಿ ಸಲ್ಲಿಸಿದೆ. 'ಸರ್ಕಾರಿ ನೌಕರರ ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ' ಎಂದು ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ.

ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳುವ ತನಕ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ವೇತನ ಆಯೋಗ ತನ್ನ ವರದಿಯಲ್ಲಿ 1/7/2022ರಿಂದ ಹೊಸ ವೇತನ ಶ್ರೇಣಿ ಅನುಷ್ಠಾನಗೊಳ್ಳಬೇಕು ಎಂದು ತಿಳಿಸಿದೆ. ಆದರೆ ಯಾವಾಗಿನಿಂದ ವೇತನ ಆಯೋಗದ ವರದಿ ಜಾರಿಯಾಗಬೇಕು ಎಂದು ಸರ್ಕಾರ ತೀರ್ಮಾನವನ್ನು ಕೈಗೊಳ್ಳಬಹುದಾಗಿದೆ.

ನಿವೃತ್ತ ನೌಕರರ ಸಂಕಟ: 2023ರ ನವೆಂಬರ್‌ನಲ್ಲಿಯೇ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ವರದಿ ನೀಡಲಿದೆ. ಫೆಬ್ರವರಿಯಲ್ಲಿ ಮಂಡಿಸುವ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಲಿದೆ ಎಂದು ಸರ್ಕಾರಿ ನೌಕರರು ಭರವಸೆಯಲ್ಲಿದ್ದರು. ಆದರೆ ಸರ್ಕಾರ ಮಾರ್ಚ್‌ 15ರ ತನಕ ವೇತನ ಆಯೋಗದ ಅವಧಿ ವಿಸ್ತರಣೆ ಮಾಡಿತು. ವರದಿ ಸ್ವೀಕಾರ ಮಾಡಿದ ದಿನವೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.

ಮಾಹಿತಿಗಳ ಪ್ರಕಾರ ಏಪ್ರಿಲ್‌ ಅಂತ್ಯಕ್ಕೆ ಸುಮಾರು 3,900 ಸರ್ಕಾರಿ ನೌಕರರು ನಿವೃತ್ತರಾಗಿದ್ದಾರೆ. ಅಲ್ಲದೇ ಕಳೆದ ಎರಡು ತಿಂಗಳಿನಲ್ಲಿ ಸುಮಾರು 5 ಸಾವಿರ ಅಧಿಕಾರಿ/ ಸಿಬ್ಬಂದಿಗಳು ನಿವೃತ್ತರಾಗಿದ್ದಾರೆ. ಇವರೆಲ್ಲರೂ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿಯಾಗಲಿದೆ. ಹೊಸ ವೇತನ ಶ್ರೇಣಿಯಂತೆ ವೇತನ ಪಡೆದು ನಿವೃತ್ತರಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಅದು ಸಾಧ್ಯವಾಗಿಲ್ಲ.

ವರದಿ ಸ್ವೀಕಾರ, ಅದರ ಅನುಷ್ಠಾನದ ವಿಚಾರದಲ್ಲಿಯೂ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ವರದಿ ಅನುಷ್ಠಾನಕ್ಕೆ ಸುಮಾರು 17 ಸಾವಿರ ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಈಗಾಗಲೇ ಗ್ಯಾರಂಟಿಗಳಿಗೆ ಹಣ ಹೊಂದಿಸುತ್ತಿರುವ ಸರ್ಕಾರ ವರದಿ ಅನುಷ್ಠಾನದ ವಿಚಾರದಲ್ಲಿ ಕೊಂಚ ನಿಧಾನಗತಿಯ ಹೆಜ್ಜೆಯನ್ನು ಇಡುತ್ತಿದೆ ಎಂದು ಸರ್ಕಾರಿ ನೌಕರರೇ ಹೇಳುತ್ತಿದ್ದಾರೆ.

ಈಗಾಗಲೇ ನಿವೃತ್ತರಾಗಲಿರುವ ನೌಕರರಿಗೆ ವರದಿಯ ಶಿಫಾರಸಿನಂತೆ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಪಿಂಚಣಿ ಸಿಗಲಿದೆ. ಆದರೆ ಹೊಸ ವೇತನ ಶ್ರೇಣಿ ಸಿಗಲಿಲ್ಲ ಎಂಬುದು ನೌಕರರ ಕೊರಗು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ಸರ್ಕಾರ ನೌಕರರ ಪ್ರಮುಖ ಬೇಡಿಕೆಯಾದ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೆ ಮುಂದಾಗಲಿದೆಯೇ? ಎಂದು ಕಾದು ನೋಡಬೇಕಿದೆ.

ವೇತನ ಆಯೋಗ ತನ್ನ ವರದಿಯಲ್ಲಿ ಮಾಸಿಕ ಪಿಂಚಣಿ ಪ್ರಮಾಣವು ಅಂತಿಮವಾಗಿ ಪಡೆದ ಮೂಲ ವೇತನದ ಶೇ 50ರಷ್ಟರಲ್ಲಿಯೇ ಮುಂದುವರೆಯಲಿದೆ ಎಂದು ಹೇಳಿದೆ. ಅಲ್ಲದೇ ಕನಿಷ್ಠ ಪಿಂಚಣಿಯನ್ನು 13,500 (ಕನಿಷ್ಠ ವೇತನ ರೂ. 27,000 ರ ಶೇ 50ರಷ್ಟು) ಮತ್ತು ಗರಿಷ್ಠ ಪಿಂಚಣಿಯನ್ನು ರೂ. 1,20,600 (ಗರಿಷ್ಠ ರೂ. 2,41,200 ವೇತನದ ಶೇ 50ರಷ್ಟು) ಪರಿಷ್ಕರಿಸುವುದು ಎಂದು ಶಿಫಾರಸು ಮಾಡಿದೆ.

70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ 10ರಷ್ಟನ್ನು ಆಯೋಗವು ಶಿಫಾರಸು ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ರಾಜ್ಯ ಸರ್ಕಾರ ಯಾವಾಗ ವೇತನ ಆಯೋಗದ ವರದಿ ಅನುಷ್ಠಾನ ಮಾಡಲಿದೆ? ಎಂದು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+