7th Pay Commission: ಆಯೋಗದ ವರದಿಯಂತೆ ನಿಮ್ಮ ಮೂಲ ವೇತನ ಎಷ್ಟಕ್ಕೆ ಏರಿಕೆಯಾಗಲಿದೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಮಾರ್ಚ್ 18: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಆಗಿದ್ದ 7ನೇ ವೇತನ ಆಯೋಗದ ವರದಿ ಸರ್ಕಾರ ಕೈ ಸೇರಿದೆ. ವರದಿ ಜಾರಿ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವರದಿ ಜಾರಿಯಾದರೇ ನೌಕರರ ಮೂಲ ವೇತನ ಎಷ್ಟು ಹೆಚ್ಚಾಗಲಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ 27.5% ಹೆಚ್ಚಳ ಮಾಡುವುದರ ಜೊತೆಗೆ ಅವರ ಕನಿಷ್ಠ ವೇತನವನ್ನು ತಿಂಗಳಿಗೆ 17,000 ರೂ.ನಿಂದ 27,000 ರೂ.ಗೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ನೇತೃತ್ವದ ಆಯೋಗವು ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ವರದಿ ಸಲ್ಲಿಸಿದೆ.

ನಿಮ್ಮ ಮೂಲ ವೇತನ ಎಷ್ಟಕ್ಕೆ ಏರಿಕೆಯಾಗಲಿದೆ..?
ಸರ್ಕಾರವು ಮೂಲ ವೇತನದಲ್ಲಿ 27.5% ಹೆಚ್ಚಳ ಘೋಷಿಸಿದೆ. ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ರೂ.ನಿಂದ 27,000 ರೂಪಾಯಿಗೆ ಏರಿಕೆಯಾಗಲಿದೆ. ಹಳೇಯ ಬೇಸಿಕ್ ಸ್ಯಾಲರಿ 20900 ಆದರೆ ಹೊಸ ವರದಿ ಪ್ರಕಾರ 33300ಕ್ಕೆ ಏರಿಕೆಯಾಗಲಿದೆ. 40,900 ಇದ್ದರೆ ಅದು 65,950ಕ್ಕೆ ಏರಿಕೆಯಾಗುತ್ತದೆ. ಬೇಸಿಕ್ 50,150 ಇದ್ದರೆ ವೇತನ ಆಯೋಗದ ವರದಿ ಪ್ರಕಾರ ಅದು 79,900 ಬೇಸಿಕ್‌ಗೆ ಬರಲಿದೆ. ಇದರ ಜೊತೆಗೆ ಡಿಎ, ಐಆರ್ ಎಲ್ಲವೂ ಸೇರಿಕೊಂಡು ಸಂಬಳ ಮತ್ತಷ್ಟು ಹೆಚ್ಚಾಗಲಿದೆ.
ಇನ್ನು, ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ 1,04,600 ರೂಪಾಯಿಯಿದ್ದು, ಅದನ್ನು 1,67,200 ರೂಪಾಯಿಗೆ ಪರಿಷ್ಕರಿಸುವಂತೆ ಶಿಫಾರಸು ಮಾಡಲಾಗಿದೆ. ಸಂಪೂರ್ಣವಾಗಿ ಹಳೆಯ ಬೇಸಿಕ್ ಸ್ಯಾಲರಿ ಮತ್ತು ಹೊಸ ಬೇಸಿಕ್ ಸ್ಯಾಲರಿ, ಹೊಸ ಸ್ಯಾಲರಿ ಗ್ರೋಸ್ ಎಲ್ಲದರ ವಿವರ ಈ ಟ್ವೀಟ್‌ನಲ್ಲಿ ಇದೆ. ವಿವರಗಳನ್ನು ಚೆಕ್ ಮಾಡಿ.
7ನೇ ವೇತನ ಆಯೋಗದ ವರದಿಯು ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 18.93ಕ್ಕೆ ಹೆಚ್ಚಿಸಿದೆ. 2022ರ ಜೂನ್‌ನಿಂದ ಈ ವರದಿ ಅನುಷ್ಠಾನ ಮಾಡುವಂತೆ ಆಯೋಗ ತಿಳಿಸಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಈ ಶಿಫಾರಸು ಅನ್ವಯವಾಗಲಿದೆ.

ಮಹಿಳಾ ನೌಕರರು ಮತ್ತು ಪಿಂಚಣಿದಾರ ನಿಯಮದಲ್ಲಿ ಬದಲಾವಣೆಗೆ ಶಿಫಾರಸ್ಸು
ಇನ್ನು, ಮಹಿಳಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಂದ ಕುಟುಂಬ ಪಿಂಚಣಿಗಾಗಿ ತಮ್ಮ ಪತಿಯ ಬದಲು ಮಕ್ಕಳ ನಾಮ ನಿರ್ದೇಶನ ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತಾವಿತ ತಿದ್ದುಪಡಿಯು ಮಹಿಳಾ ಸರ್ಕಾರಿ ನೌಕರರು "ಸಕ್ಷಮ ನ್ಯಾಯಾಲಯದಲ್ಲಿ ವಿಚ್ಚೇದನ ಪ್ರಕ್ರಿಯೆ ಬಾಕಿಯಿರುವಾಗ ಅಥವಾ ಸರ್ಕಾರಿ ನೌಕರರು ಅಥವಾ ಮಹಿಳಾ ಪಿಂಚಣಿದಾರರು ಕೌಟುಂಬಿಕ ದೌರ್ಜನ್ಯ ತಡ ಕಾಯ್ದೆ ಅಥವಾ ವರದಕ್ಷಿಣೆ ನಿಷೇಧ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ತನ್ನ ಗಂಡನ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದಲ್ಲಿ, ಕುಟುಂಬ ಪಿಂಚಣಿಯನ್ನು ಪಡೆಯುವುದಕ್ಕಾಗಿ ಆಕೆಯು ತನ್ನ ಮಗುವನ್ನು / ಮಕ್ಕಳನ್ನು ನಾಮ ನಿರ್ದೇಶನ ಮಾಡಬಹುದಾಗಿದೆ ಎಂದು ಸೂಚಿಸಿದೆ.
7ನೇ ವೇತನ ಆಯೋಗದ ವರದಿ ಪ್ರಕಾರ ನಿಮ್ಮ ವೇತನ ಹೆಚ್ಚಳ ಚೆಕ್ ಮಾಡಿಕೊಳ್ಳಿ.. #7thCommission #Sallary #SallryHike pic.twitter.com/dfS0lmcEOU
— oneindiakannada (@OneindiaKannada) March 18, 2024
ಇನ್ನು, 70 ರಿಂದ 80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯು ಹೆಚ್ಚುವರಿ ಶೇಕಡಾ 10ರಷ್ಟು ಹೆಚ್ಚಳ ಆಗಬೇಕು ಎಂದು 7ನೇ ವೇತನ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ವರದಿ ಜಾರಿ ಮಾಡಬೇಕು ಎಂದರೆ, ಹಣಕಾಸು ಇಲಾಖೆಯ ಸಲಹೆಗಳನ್ನು ಆಧರಿಸಿ ಸರ್ಕಾರವು ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ವರದಿ ಜಾರಿಯಿಂದ ಸರ್ಕಾರಕ್ಕೆ ವರ್ಷಕ್ಕೆ 17,440.15 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.
-
ರಾಜ್ಯ ಬಜೆಟ್ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ -
Karnataka Budget 2026: 4.5 ಲಕ್ಷ ಕೋಟಿಯ ರಾಜ್ಯ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಗುವುದೇ ಭರ್ಜರಿ ಕೊಡುಗೆ? -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
ಮಾರ್ಚ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Budget 2026: ಮಾ.6 ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ, ಸಮಯ, ನೇರ ಪ್ರಸಾರ ಲಿಂಕ್, ವಿವರ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕರ್ನಾಟಕ ಬಜೆಟ್ 2026: ನಮಗೆ ಹಣ ಬೇಡ, ಗುಣಮಟ್ಟದ ಶಾಲೆ, ಆಸ್ಪತ್ರೆ ಕೊಡಿ: ಸಾರ್ವಜನಿಕರ ಆಗ್ರಹ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲಭೂತ ರಚನೆಯ ಭಾಗ: ತಮಿಳುನಾಡು ಸಿಎಂ ಸ್ಟಾಲಿನ್ ಪತ್ರಕ್ಕೆ ಸಿದ್ದರಾಮಯ್ಯ ಉತ್ತರ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು










Click it and Unblock the Notifications