7th Pay Commission: ಮಹಾರಾಷ್ಟ್ರ ಸರ್ಕಾರಿ ನೌಕರರ ವೇತನ ಶ್ರೇಣಿ, ಆಯೋಗದ ವಿವರ
ಬೆಂಗಳೂರು, ಆಗಸ್ಟ್ 19: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ. ಸರ್ಕಾರ ಈಗಾಗಲೇ ಆಯೋಗದ ವರದಿ ಅಂಗೀಕರಿಸಿ, ಜಾರಿಗೊಳಿಸಿದೆ. ಆಯೋಗ ತನ್ನ ವರದಿಯಲ್ಲಿ ಕೇಂದ್ರ ಸರ್ಕಾರಿ ನೌಕರರು, ವಿವಿಧ ರಾಜ್ಯಗಳ ವೇತನ ಶ್ರೇಣಿ ಹೇಗಿದೆ? ಎಂದು ವರದಿಯಲ್ಲಿ ವಿವರ ನೀಡಿದೆ ಮತ್ತು ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.
7ನೇ ರಾಜ್ಯ ವೇತನ ಆಯೋಗ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾರ್ಚ್ 16ರಂದು ವರದಿ ನೀಡಿತ್ತು. ಆಯೋಗ ತನ್ನ ವರದಿಯಲ್ಲಿ ಮಹಾರಾಷ್ಟ್ರ ರಾಜ್ಯದ ಸರ್ಕಾರಿ ನೌಕರರ ವೇತನ ರಚನೆ, ವೇತನ ಶ್ರೇಣಿಯ ಕುರಿತು ವಿವರಣೆಯನ್ನು ಕೊಟ್ಟಿದೆ. ಸರ್ಕಾರ ತನ್ನ ನೌಕರಿಗಾಗಿ ಹೇಗೆ ವೇತನ ಮಾರ್ಪಾಡು ಮಾಡಿಕೊಂಡಿದೆ ಎಂದು ಕೋಷ್ಠಕದ ಸಹಿತ ವಿವರಿಸಿದೆ.

ಮಹಾರಾಷ್ಟ್ರ ವೇತನ ಶ್ರೇಣಿ: ಮಹಾರಾಷ್ಟ್ರ ರಾಜ್ಯ ಸರ್ಕಾರವು ತನ್ನ ನೌಕರರಿಗಾಗಿ ರಾಜ್ಯಕ್ಕೆ ನಿರ್ದಿಷ್ಟವಾದ ಸ್ಥಳೀಯ ಅಗತ್ಯತೆಗಳ ಆಧಾರದ ಮೇಲೆ ಕೆಲವು ಮಾರ್ಪಾಡುಗಳೊಂದಿಗೆ ಮತ್ತು ಕೇಂದ್ರ ವೇತನ ಶ್ರೇಣಿಗಳನ್ನು ಅಳವಡಿಸಿಕೊಳ್ಳುವ ಪೂರ್ವ ಅಸ್ತಿತ್ವದಲ್ಲಿದ್ದ ಸಾಪೇಕ್ಷತೆಗಳನ್ನು ಕಾಯ್ದುಕೊಳ್ಳುವ ಅಗತ್ಯತೆಯೊಂದಿಗೆ ಕೇಂದ್ರ ವೇತನ ರಚನೆ ಮತ್ತು ವೇತನ ಶ್ರೇಣಿಗಳನ್ನು 1980ರ ದಶಕದ ಕೊನೆಯಲ್ಲಿ ತಮಿಳುನಾಡಿನ ಪ್ರಕರಣದಲ್ಲಿದ್ದಂತೆ ಅಳವಡಿಸಿಕೊಂಡಿದೆ. 1996ರಲ್ಲಿ ಕೇಂದ್ರ ಸರ್ಕಾರವು 36 ವೇತನ ಶ್ರೇಣಿಗಳನ್ನು ಹೊಂದಿದ್ದರೆ ಮಹಾರಾಷ್ಟ್ರ ರಾಜ್ಯ 24 ವೇತನ ಶ್ರೇಣಿಗಳನ್ನು ತನ್ನ ಆಡಳಿತದ ಅವಶ್ಯಕತೆಗನುಸಾರ ಹೊಂದಿತ್ತು.
2006ರ ವೇತನ ಶ್ರೇಣಿಗಳ ಪರಿಷ್ಕರಣೆಯಲ್ಲಿ, ಕೇಂದ್ರ ಸರ್ಕಾರದ ವೇತನ ರಚನೆಯ ವೇತನ ಬ್ಯಾಂಡ್ ಮತ್ತು ಹಂತ ವೇತನಗಳ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವಾಗ ರಾಜ್ಯವು ಚಾಲ್ತಿಯಲ್ಲಿದ್ದ 24 ವೇತನ ಶ್ರೇಣಿಗಳನ್ನು 37 ಹಂತ ವೇತನಗಳನ್ನಾಗಿ ಮತ್ತು ಅತ್ಯುನ್ನತ ಹಂತದಲ್ಲಿ ಒಂದು ಹೆಚ್ಚುವರಿ ವೇತನ ಶ್ರೇಣಿಯೊಂದಿಗೆ ರೂಪಿಸಿತು. ರಾಜ್ಯವು ಕೇಂದ್ರ ಸರ್ಕಾರದ 4 ವೇತನ ಬ್ಯಾಂಡ್‌ಗಳ ಸಂವಾದಿಯಾಗಿ 4 ವೇತನ ಬ್ಯಾಂಡ್‌ಗಳನ್ನು ಸಹ ಪರಿಚಯಿಸಿತು ಮತ್ತು ಕೇಂದ್ರ ಸರ್ಕಾರ ಗ್ರೂಪ್ 'ಡಿ' ಹುದ್ದೆಗಳನ್ನು ರದ್ದುಗೊಳಿಸಿದ್ದರ ಹಿನ್ನೆಲೆಯಲ್ಲಿ ಗ್ರೂಪ್ 'ಡಿ' ಹುದ್ದೆಗಳಿಗಾಗಿ 5 ವೇತನ ಹಂತಗಳನ್ನು ಒಳಗೊಂಡ ಒಂದು ಹೆಚ್ಚುವರಿ ವೇತನ ಬ್ಯಾಂಡ್‌ನ್ನು ಸೇರಿಸಿತು.
ಕೇಂದ್ರದಲ್ಲಿರುವ ಕನಿಷ್ಠ ಹಂತ ವೇತನ ರೂ.1,800 ಗಳಿಗೆ ಪ್ರತಿಯಾಗಿ ರಾಜ್ಯದಲ್ಲಿ ರೂ.1,300 ಗಳನ್ನು ಮತ್ತು ಕೇಂದ್ರ ಸರ್ಕಾರದ ಸಮನಾಗಿ ಗರಿಷ್ಟ ಹಂತ ವೇತನ ರೂ.10,000ಗೆ ನಿಗದಿಪಡಿಸಿತು. ಭಾರತ ಸರ್ಕಾರದ 2016ರ ವೇತನ ಶ್ರೇಣಿಗಳ ಪರಿಷ್ಕರಣೆಯ ನಂತರದಲ್ಲಿ ರಾಜ್ಯವು, 2019ರಲ್ಲಿ ಕೇಂದ್ರ ವೇತನ ರಚನೆ ಮತ್ತು ವೇತನ ಮ್ಯಾಟ್ರಿಕ್ಸ್ ಪದ್ಧತಿಯನ್ನು ಅಳವಡಿಸಿಕೊಳ್ಳುವಾಗ, ಕೇಂದ್ರದ ಕನಿಷ್ಠ ಮತ್ತು ಗರಿಷ್ಠ ವೇತನವಾದ ರೂ.18,000 ಮತ್ತು ರೂ.2,50,000 ಗಳಿಗೆ ಪ್ರತಿಯಾಗಿ ಕನಿಷ್ಠ ವೇತನ ರೂ.15,000 ಮತ್ತು ಗರಿಷ್ಠ ವೇತನ ರೂ.2,20,000 ಗಳೊಂದಿಗೆ 31 ವೇತನ ಹಂತಗಳ ಮ್ಯಾಟ್ರಿಕ್ಸ್ ರೂಪಿಸಿದೆ. ಕೇವಲ 13 ವೇತನ ಹಂತಗಳ ಪ್ರಾರಂಭಿಕ ವೇತನ ಮಹಾರಾಷ್ಟ್ರ ಮತ್ತು ಕೇಂದ್ರಗಳಲ್ಲಿ ಸಮನಾಗಿ ಇದ್ದುದ್ದನ್ನು ಇಲ್ಲಿ ಗಮನಿಸಬಹುದಾಗಿದೆ ಎಂದು ಹೇಳಿದೆ.
ಮಹಾರಾಷ್ಟ್ರ ರಾಜ್ಯವು 1996 ಮತ್ತು 2006 ರಲ್ಲಿ ಸರಿಹೊಂದಿಸಿದ ವೇತನ ಶ್ರೇಣಿಗಳು, ವೇತನ ಬ್ಯಾಂಡ್ ಗಳು ಮತ್ತು ಹಂತ ವೇತನಗಳ ವಿವರಗಳು ಮತ್ತು 2016 ರ ಕೇಂದ್ರ ವೇತನ ಪರಿಷ್ಕರಣೆಯ ಪರಿಣಾಮದಿಂದ ರಚಿಸಲಾದ ವೇತನ ಹಂತಗಳು ಮತ್ತು ವೇತನ ಕೋಶಗಳುಳ್ಳ ವೇತನ ಮ್ಯಾಟ್ರಿಕ್ಸ್ ವಿವರಗಳನ್ನು ಕೋಷ್ಠಕದಲ್ಲಿ ನೀಡಲಾಗಿದೆ.












Click it and Unblock the Notifications