7th Pay Commission: ಸರ್ಕಾರಿ ನೌಕರರಿಗೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಮಹಾಮೋಸ?
ಸರ್ಕಾರಿ ನೌಕರರು ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕರ್ನಾಟಕದ ಸರ್ಕಾರಿ ಕೆಲಸ ಲಾಭ ಇಲ್ಲದ ಉದ್ಯೋಗ ಆಗಿದೆ ಅನ್ನೋದು ರಾಜ್ಯದ ಸರ್ಕಾರಿ ನೌಕರರ ಆಕ್ರೋಶ. ಕೇಂದ್ರ ಸರ್ಕಾರಿ ನೌಕರರಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಸರ್ಕಾರಿ ನೌಕರರಿಗೆ ಸಾಕಷ್ಟು ರೀತಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳ ನಡುವೆ, ಇದೀಗ 7ನೇ ವೇತನ ಆಯೋಗ ವಿಚಾರ ಮತ್ತೊಂದು ಸ್ಫೋಟಕ ತಿರುವು ಪಡೆಯುವುದು ಬಹುತೇಕ ಪಕ್ಕಾ ಆಗಿದೆ!
ಕರ್ನಾಟಕದ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಒದ್ದಾಡುವ ಸ್ಥಿತಿ ಇದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದಾಗ, ಆಗಿನ ಬಿಜೆಪಿ ಪಕ್ಷದ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ಕರ್ನಾಟಕದ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದರು. 7ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಜಾರಿಗೆ ಒತ್ತಾಯಿಸಿದ್ದರು.

ಕರ್ನಾಟಕದ ಸರ್ಕಾರಿ ನೌಕರರಿಗೆ ಮೋಸ?
ಹೀಗಿದ್ದಾಗ ಚುನಾವಣೆ ಗಮನದಲ್ಲಿ ಇಟ್ಟುಕೊಂಡಿದ್ದ ಆಗಿನ ಬಿಜೆಪಿ ಸರ್ಕಾರ ನೌಕರರಿಗೆಲ್ಲ ಒಂದಷ್ಟು ಭರವಸೆ ನೀಡಿ ಕೈತೊಳೆದುಕೊಂಡಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ಕೂಡ ಅದೇ ಹಾದಿ ಹಿಡಿದು ಸರ್ಕಾರಿ ನೌಕರರಿಗೆ ಅನ್ಯಾಯ ಮಾಡ್ತಿದೆ ಎಂಬ ಆರೋಪ ಕೇಳಿಬಂದಿದೆ. ಯಾಕಂದ್ರೆ ಒಂದು ಕಡೆ ಕೇಂದ್ರ ಸರ್ಕಾರಿ ನೌಕರರಿಗೆ ಒಂದಾದ ನಂತ ಒಂದು ಸೌಲಭ್ಯಗಳು ಸಿಗುತ್ತಿದ್ದರೂ, ಕರ್ನಾಟಕದ ಸರ್ಕಾರಿ ನೌಕರರಿಗೆ ಮಾತ್ರ ಮಹಾಮೋಸ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಯಾವುದೇ ಪಕ್ಷ ಬಂದರೂ ಅನ್ಯಾಯ?
7ನೇ ವೇತನ ಆಯೋಗ ಜಾರಿಗೆ ತಾರತಮ್ಯ ನೀತಿ ಮುಂದುವರಿದಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಯಾಕಂದ್ರೆ ಕೆಲವು ತಿಂಗಳ ಹಿಂದೆಯೇ ಜಾರಿ ಆಗಬೇಕಿದ್ದ ಆದೇಶಕ್ಕೆ ಆಗಿನ ಲೋಕಸಭೆ ಚುನಾವಣೆ ನೆಪ ಹೂಡಲಾಗಿತ್ತು, ಇದೀಗ ಲೋಕಸಭೆ ಚುನಾವಣೆ ಮುಕ್ತಾಯ ಆಗಿದೆ. ಆದರೂ 7ನೇ ವೇತನ ಆಯೋಗ ಜಾರಿಗೆ ಸಿದ್ದರಾಮಯ್ಯ ಅವರ ಸರ್ಕಾರ ಹಿಂದೆ & ಮುಂದೆ ಯೋಚಿಸುವ ಪರಿಸ್ಥಿತಿ ಬಂದಿದೆ. ಹೀಗೆ ನೋಡಿದರೆ, ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರ ಹಿಡಿದರೂ ಸರ್ಕಾರಿ ನೌಕರರಿಗೆ ಅನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.
7ನೇ ರಾಜ್ಯ ವೇತನ ಆಯೋಗದ ಅವಧಿ 2023ರ ನವೆಂಬರ್ ತಿಂಗಳಲ್ಲಿಯೇ ಕೊನೆ ಆಗಬೇಕಿತ್ತು. ಕೆ. ಸುಧಾಕರ್ ನೇತೃತ್ವದ ತ್ರಿ ಸದಸ್ಯರ 7ನೇ ರಾಜ್ಯ ವೇತನ ಆಯೋಗ ಅವಧಿ ಅಂದಿನ ಸರ್ಕಾರ ಮುಂದೂಡಿಕೆ ಮಾಡಿತ್ತು. ಹೀಗೆ ವೇತನ ಆಯೋಗ ಮುಂದೂಡಿಕೆ ಆದ ನಂತರ, 7ನೇ ವೇತನ ಆಯೋಗ ಅವಧಿ 15/3/2024ರ ತನಕ ವಿಸ್ತರಣೆ ಮಾಡಲಾಗಿತ್ತು. ಆದರೆ ವರದಿ ಸಲ್ಲಿಸಿದ್ದರೂ ಈ ಬಗ್ಗೆ ಸಿದ್ದರಾಮಯ್ಯ ಅವರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ಕರ್ನಾಟಕ ಸರ್ಕಾರಿ ನೌಕರರಲ್ಲಿ ಕಾಡುತ್ತಿದೆ. ಈ ಅಸಮಾಧಾನ ಮತ್ತೊಂದು ತಿರುವು ಪಡೆಯುವಂತೆ ಕಾಣುತ್ತಿದ್ದು, ನೌಕರರು ಮತ್ತೆ ಹೋರಾಟ ಆರಂಭ ಮಾಡುತ್ತಾರಾ? ಕಾದು ನೋಡಬೇಕಿದೆ.
ಸರ್ಕಾರಿ ನೌಕರರ ಡಿಮ್ಯಾಂಡ್‌ಗೆ ಜೈ?
ಒಟ್ನಲ್ಲಿ ಲೋಕಸಭೆ ಚುನಾವಣೆಗೆ ಮೊದಲು 7ನೇ ವೇತನ ಆಯೋಗದ ವರದಿ ಜಾರಿ ಆಗುವ & ಸರ್ಕಾರಿ ನೌಕರರಿಗೆ ಈ ಬಗ್ಗೆ ಸಿಹಿಸುದ್ದಿ ಸಿಗುವ ನಿರೀಕ್ಷೆ ಇತ್ತು. ಆದರೆ ಲೋಕಸಭೆ ಎಲೆಕ್ಷನ್ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ 7ನೇ ವೇತನ ಆಯೋಗದ ವರದಿ ಜಾರಿ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗುವುದು ಯಾವಾಗ? ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ, ಸರ್ಕಾರಿ ನೌಕರರ ಬೇಡಿಕೆ ಈಡೇರಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications