7th Pay Commission: ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕರ ವೇತನ ಎಷ್ಟು ಹೆಚ್ಚಳ?
ಬೆಂಗಳೂರು, ಆಗಸ್ಟ್ 26: ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿಗೆ ನೀಡಿದೆ. ಆಗಸ್ಟ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಏರಿಕೆಯಾಗಲಿದೆ. ಈಗ ನೌಕರರು ವೇತನ ಎಷ್ಟು ಹೆಚ್ಚಳವಾಗಲಿದೆ?, ಭತ್ಯೆ ಎಷ್ಟು ಸಿಗಲಿದೆ? ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ.
ಕಳೆದ ವಾರ ಆದೇಶವೊಂದನ್ನು ಹೊರಡಿಸಿರುವ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಸರ್ಕಾರದ ವಿವಿಧ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂದು ಮಾಹಿತಿ ನೀಡಿದ್ದಾರೆ. 2018ರ ವೇತನ, 2024ರ ಪರಿಷ್ಕೃತ ವೇತನ ಎಷ್ಟು ಎಂದು ಪಟ್ಟಿಯ ಮೂಲಕ ತಿಳಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರ ವೇತನ ಎಷ್ಟು ಹೆಚ್ಚಳವಾಗಲಿದೆ? ಮಾಹಿತಿಯನ್ನು ಕೊಡಲಾಗಿದೆ.

ಪ್ರೌಢ ಶಾಲೆ ಸಹ ಶಿಕ್ಷಕರ ವೇತನ: ಸರ್ಕಾರ ತನ್ನ ಆದೇಶದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ಶ್ರೀ 'P' ಎಂಬುವವರು ಹುದ್ದೆಗೆ ಅನ್ವಯಿಸುವ 2018ರ ಪರಿಷ್ಕೃತ ವೇತನ ಶ್ರೇಣಿಯ ಪ್ರಸಕ್ತ ಹಿರಿಯ ವೇತನ ಶ್ರೇಣಿ ರೂ. 32900-70850ರಲ್ಲಿ ವೇತನವನ್ನು ಪಡೆಯುತ್ತಿರುತ್ತಾರೆ.
ಶ್ರೀ 'P' ಅವರಿಗೆ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ 30 ವರ್ಷಗಳ ಸೇವೆಗಾಗಿ 3ನೇ ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 16.08.2023ರಂದು ಮಂಜೂರು ಮಾಡಲಾಗಿರುತ್ತದೆ. ಶ್ರೀ 'P' ಅವರು ದಿನಾಂಕ 31.07.2024 ರಂದು ಸೇವೆಯಿಂದ ವಯೋನಿವೃತ್ತರಾಗಿರುತ್ತಾರೆ. ನೌಕರರ ವೇತನ ವಿವರಗಳು ಈ ಕೆಳಕಂಡಂತಿದೆ ಎಂದು ಹೇಳಿದೆ.
* 1ನೇ ಜುಲೈ 2022 ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ಸಹ ಶಿಕ್ಷಕರು (ಸರ್ಕಾರಿ ಪ್ರೌಢಶಾಲೆ).
* 1ನೇ ಜುಲೈ 2022ರಂದು ಧಾರಣೆ ಮಾಡಿದ ಹುದ್ದೆಯ ಪ್ರಸಕ್ತ ವೇತನ ಶ್ರೇಣಿ. ರೂ. 37900-950-39800-1100-46400-1250-53900-1450-62600-1650-70850
* 1ನೇ ಜುಲೈ 2022 ರಂದು ಇದ್ದಂತೆ ಪ್ರಸಕ್ತ ವೇತನ ಶ್ರೇಣಿಯಲ್ಲಿ ಮೂಲ ವೇತನ (4ನೇಸ್ಥ.ವೇ.ಬ. ಪಡೆದ ನಂತರ) ರೂ.70850 + 1650 ವೈವೇ+1650 ವೈವೇ
* ದಿನಾಂಕ 01.07.2023 ರಿಂದ ಜಾರಿಗೆ ಬರುವಂತೆ 5ನೇ ಸ್ಥ.ವೇ. ಬಡ್ತಿ ಮಂಜೂರು ಮಾಡಿ ನಿಗದಿಪಡಿಸಲಾದ ವೇತನ. ರೂ.70850 + 1650 ವೈವೇ+1650 ವೈವೇ +1650 ವೈವೇ
* 30 ವರ್ಷಗಳ ಸೇವೆಗಾಗಿ ದಿ:16.08.2023ರಿಂದ ಜಾರಿಗೆ ಬರುವಂತೆ 3ನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಿ ನಿಗದಿಪಡಿಸಲಾದ ವೇತನ. ರೂ.70850 + 1650 ವೈವೇ+1650 ವೈವೇ+1650ವೈವೇ+1650 ವೈವೇ
* ದಿನಾಂಕ 01.07.2024 ರಿಂದ ಜಾರಿಗೆ ಬರುವಂತೆ 6ನೇ ಸ್ಥ.ವೇ.ಬಡ್ತಿ ಮಂಜೂರು ಮಾಡಿ ವೇತನ ನಿಗದಿ. ರೂ.70850 +1650 ವೈವೇ +1650 ವೈವೇ+ 1650 ವೈವೇ+1650 ವೈವೇ+1650 ವೈವೇ
* ವಯೋನಿವೃತ್ತಿ ದಿನಾಂಕ. 31.12.2022 (ಪ್ರಸಕ್ತ ವೇತನ ಶ್ರೇಣಿಯ ಉಪಲಬ್ದಗಳ ಆಧಾರದ ಮೇಲೆ ಪಿಂಚಣಿ ಸೌಲಭ್ಯಗಳನ್ನು ಲೆಕ್ಕಹಾಕತಕ್ಕದ್ದು).
2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್ ನಿಗದಿಪಡಿಸಿದೆ.
* ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ವೇತನ ಶ್ರೇಣಿ. 61300-1500-64300-1650-74200-1900-85600-2300-99400-2700-112900
* 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ. ರೂ.1,12,900+5400 ವೈವೇ
* ದಿನಾಂಕ 1.7.2023 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ 5ನೇ ಸ್ಥ.ವೇ.ಬಡ್ತಿಯನ್ನು ಮಂಜೂರು ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ.1,12,900+5400 ವೈವೇ+2700 ವೈವೇ
* 30 ವರ್ಷಗಳ ಸೇವೆಗಾಗಿ ದಿನಾಂಕ 16.08.2023 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ 3ನೇ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ.1,12,900+5400ವೈವೇ+2700 ವೈವೇ+ 2700 ವೈವೇ
* ದಿನಾಂಕ 1.7.2024 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ 6ನೇ ಸ್ಥ.ವೇ.ಬಡ್ತಿಯನ್ನು ಮಂಜೂರು ಕಾಲ್ಪನಿಕವಾಗಿ ವೇತನ ನಿಗದಿ. ರೂ.1,12,900+5400 ವೈವೇ+2700 ವೈವೇ+2700 ವೈವೇ+2700ವೈವೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಲಾದ ಅಂತಿಮ ಮೂಲ ವೇತನವನ್ನು ಮೂಲ ಪಿಂಚಣಿ ನಿಗದಿಯ ಉದ್ದೇಶಕ್ಕೆ ಮಾತ್ರ ಪರಿಗಣಿಸತಕ್ಕದ್ದು. ಪರಿಷ್ಕೃತ ಪಿಂಚಣಿಯ ಆರ್ಥಿಕ ಲಾಭವು ದಿನಾಂಕ 01.08.2024 ರಿಂದ ಪ್ರಾಪ್ತವಾಗುತ್ತದೆ.
ವಯೋ ನಿವೃತ್ತಿ ದಿನಾಂಕ 31.07.2024.
-
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್












Click it and Unblock the Notifications