7th Pay Commission: ದಿನಗೂಲಿ ನೌಕರರ ವೇತನ ಶ್ರೇಣಿ, ಆರ್ಥಿಕ ಸೌಲಭ್ಯ ಹೆಚ್ಚಳ

ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕ ಸರ್ಕಾರ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರನ್ವಯ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ 2024ರನ್ವಯ ಪರಿಷ್ಕೃತ ವೇತನ ಶ್ರೇಣಿಗಳನ್ವಯ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ ಆದೇಶ ಹೊರಡಿಸಿದೆ. ವಿವಿಧ ಅಧಿಸೂಚನೆ, ಸುತ್ತೋಲೆಗಳನ್ನು ಉಲ್ಲೇಖ ಮಾಡಿ ಆದೇಶವನ್ನು ಹೊರಡಿಸಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗರತ್ನ ವಿ. ಪಾಟೀಲ್, ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2) ಆದೇಶವನ್ನು ಹೊರಡಿಸಿದ್ದಾರೆ. ವಿವಿಧ ಅಧಿಸೂಚನೆಯನ್ವಯ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ಅನ್ನು ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.

7th Pay Commission Karnataka Daily Wage Workers Salary And Financial Facilities

ದಿನಾಂಕ 19.09.2014ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಸೇವಾ ಮುಂದುವರಿಕೆಗೆ ಅರ್ಹರಾದ ದಿನಗೂಲಿ ನೌಕರರಿಗೆ ಇವರುಗಳನ್ನು ಅಧಿಸೂಚಿಸಿದ ದಿನಾಂಕದಿಂದ ಅವರನ್ನು ಮುಂದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನ, ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿಭತ್ಯೆಯ ಶೇಕಡ 75ರಷ್ಟು, ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ಅವರುಗಳು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯ ಸಾಮಾನ್ಯ ದರಗಳ ಶೇಕಡ 75ರಷ್ಟನ್ನು ಅರ್ಹ ದಿನಗೂಲಿ ನೌಕರರಿಗೆ, ಅವರನ್ನು ಮುಂದುವರೆಸುವ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನದ ಮೇಲೆ ಮನೆ ಬಾಡಿಗೆ ಭತ್ಯೆಯಾಗಿ ಮಂಜೂರು ಮಾಡುವಂತೆ ಆದೇಶಿಸಲಾಗಿದೆ ಹಾಗೂ ಇವರುಗಳು ಅರ್ಹರಿರುವ ಇತರ ಸೌಲಭ್ಯಗಳ ಕುರಿತು ಆದೇಶ ಮಾಡಲಾಗಿದೆ ಎಂದು ಹೇಳಿದೆ.

ಸರ್ಕಾರದ ಆದೇಶದಲ್ಲಿ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಅಧಿಸೂಚಿಸಲ್ಪಟ್ಟ ದಿನಗೂಲಿ ನೌಕರರಿಗೆ ದಿನಾಂಕ 1.8.2018ರಿಂದ ಜಾರಿಗೆ ಬರುವಂತೆ 2018ರ ಪರಿಷ್ಕೃತ ವೇತನ ಶ್ರೇಣಿಗಳನ್ವಯ ಅವರುಗಳನ್ನು ಮುದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನವನ್ನು ದಿನಾಂಕ 1.8.2018ರಿಂದ ಜಾರಿಗೆ ಬರುವಂತೆ ನಿಗದಿಗೊಳಿಸಿ ಆದೇಶಿಸಲಾಗಿದೆ. ಸರ್ಕಾರದ ಆದೇಶದಲ್ಲಿ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಅಧಿಸೂಚಿಸಲ್ಪಟ್ಟ, ದಿನಗೂಲಿ ನೌಕರರಿಗೆ ದಿನಾಂಕ 19.9.2014ರ ಆದೇಶದಂತೆ ನೀಡಲಾಗುತ್ತಿದ್ದ ಶೇಕಡ 75ರಷ್ಟು ತುಟ್ಟಿಭತ್ಯೆಯನ್ನು ಶೇಕಡ 90ಕ್ಕೆ ಹಾಗೂ ಶೇಕಡ 75ರಷ್ಟು ನೀಡುತ್ತಿದ್ದ ಮನೆ ಬಾಡಿಗೆ ಭತ್ಯೆಯನ್ನು ಶೇಕಡ 90ಕ್ಕೆ ನಿಗದಿಪಡಿಸಿ ಆದೇಶಿಸಲಾಗಿದೆ.

ಅಧಿಸೂಚನೆಯಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಗಳನ್ನು ಸರ್ಕಾರವು ಮಂಜೂರು ಮಾಡಿರುತ್ತದೆ. ಅಧಿನಿಯಮ ಹಾಗೂ ಸರ್ಕಾರದ ಆದೇಶಗಳಲ್ಲಿ ಕಲ್ಪಿಸಲಾಗಿರುವ ಅವಕಾಶಗಳಂತೆ ಈ ಪರಿಷ್ಕೃತ ವೇತನಗಳನ್ವಯ ಅರ್ಹ ದಿನಗೂಲಿ ನೌಕರರ ಆರ್ಥಿಕ ಸೌಲಭ್ಯಗಳನ್ನು ಕೂಡ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ತೀರ್ಮಾನಿಸಿ, ಈ ಆದೇಶವನ್ನು ಹೊರಡಿಸಿದೆ ಎಂದು ಹೇಳಿದೆ.

ಆದೇಶದ ವಿವರಗಳು: ಸರ್ಕಾರದ ಆದೇಶ ಸಂಖ್ಯೆ ದಿನಾಂಕ 20.09.2024, ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ, 2012ರನ್ವಯ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ ದಿನಾಂಕ 01.09.2024ರಿಂದ ಜಾರಿಗೆ ಬರುವಂತೆ ಈ ಕೆಳಕಂಡ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ.

* 2024ರ ಪರಿಷ್ಕೃತ ವೇತನ ಶ್ರೇಣಿಗಳನ್ವಯ ಅವರುಗಳನ್ನು ಸೇವೆಯಲ್ಲಿ ಮುಂದುವರೆಸಿದ ಹುದ್ದೆಯ ಕಾಲಿಕ ಶ್ರೇಣಿಯ ಕನಿಷ್ಠ ವೇತನವನ್ನು ನಿಗದಿಗೊಳಿಸತಕ್ಕದ್ದು.

* ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿಭತ್ಯೆಯ ಶೇಕಡ 90ರಷ್ಟು ಅರ್ಹ ದಿನಗೂಲಿ ನೌಕರರಿಗೆ ಅವರನ್ನು ಮುಂದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನದ ಮೇಲೆ ತುಟ್ಟಿ ಭತ್ಯೆಯಾಗಿ ಮಂಜೂರು ಮಾಡತಕ್ಕದ್ದು.

* ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ, ಅವರುಗಳು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆ ಸಾಮಾನ್ಯ ದರಗಳ ಶೇಕಡ 90ರಷ್ಟು, ಅರ್ಹ ದಿನಗೂಲಿ ನೌಕರರಿಗೆ ಅವರನ್ನು ಮುಂದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನದ ಮೇಲೆ ಮನೆ ಬಾಡಿಗೆ ಭತ್ಯೆಯಾಗಿ ಮಂಜೂರು ಮಾಡತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ದಿನಾಂಕ 04.09.2024ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ ಎಂದು ಆದೇಶ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+