ಕರ್ನಾಟಕದಲ್ಲಿ ದಾಖಲೆ ಬರೆದ ಕೊರೊನಾವೈರಸ್: ಅದು ಹೇಗೆ ಅಂತೀರಾ?

ಬೆಂಗಳೂರು, ಆಗಸ್ಟ್.06: ಕರ್ನಾಟಕದ ಪಾಲಿಗೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದಿನ ಬಿಟ್ಟು ದಿನಕ್ಕೆ ಶಾಕ್ ನೀಡುತ್ತಿವೆ. ರಾಜ್ಯದಲ್ಲಿ ಪತ್ತೆಯಾಗಿರುವ ಸೋಂಕಿತರ ಸಂಖ್ಯೆಯು ರಾಜ್ಯದಲ್ಲೇ ಹೊಸ ದಾಖಲೆಯನ್ನು ಬರೆದಿದ್ದು, ಜನರಲ್ಲಿನ ಆತಂಕವನ್ನು ಇಮ್ಮಡಿಗೊಳಿಸಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲೇ 6805 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 158254ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ. ರಾಜ್ಯದಲ್ಲಿ ಒಂದೇ ದಿನ ಮಹಾಮಾರಿಗೆ 93 ಮಂದಿ ಪ್ರಾಣ ಬಿಟ್ಟಿದ್ದು, ಕೊವಿಡ್-19ಗೆ ಬಲಿಯಾದವರ ಸಂಖ್ಯೆಯು 2897ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 5602 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 80281 ಮಂದಿ ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ 75068 ಸಕ್ರಿಯ ಪ್ರಕರಣಗಳಿವೆ.

ಒಂದೇ ದಿನ ರಾಜ್ಯದಲ್ಲಿ ಎಷ್ಟು ಜನರ ತಪಾಸಣೆ?

ಒಂದೇ ದಿನ ರಾಜ್ಯದಲ್ಲಿ ಎಷ್ಟು ಜನರ ತಪಾಸಣೆ?

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 27930 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 20491 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 48421 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 1581075 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ 2544 ಮಂದಿಗೆ ಕೊರೊನಾವೈರಸ್

ಸಿಲಿಕಾನ್ ಸಿಟಿಯಲ್ಲಿ 2544 ಮಂದಿಗೆ ಕೊರೊನಾವೈರಸ್

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲೇ ಸಿಲಿಕಾನ್ ಸಿಟಿಯಲ್ಲಿ 2544 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 67425 ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ 15 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1178ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೊವಿಡ್-19 ಪ್ರಕರಣ

ಯಾವ ಜಿಲ್ಲೆಯಲ್ಲಿ ಎಷ್ಟು ಕೊವಿಡ್-19 ಪ್ರಕರಣ

ರಾಜ್ಯದಲ್ಲಿ ಒಟ್ಟು 6805 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 19 ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 2544, ಬಳ್ಳಾರಿ 431, ಮೈಸೂರು 361, ಶಿವಮೊಗ್ಗ 292, ಬೆಳಗಾವಿ 229, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರಗಿ 196, ರಾಯಚೂರು 181, ದಕ್ಷಿಣ ಕನ್ನಡ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಕೊಪ್ಪಳ 132, ಗದಗ 124, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ್ 98, ಚಾಮರಾಜನಗರ 95, ಉತ್ತರ ಕನ್ನಡ 77, ಹಾವೇರಿ 64, ಚಿಕ್ಕಮಗಳೂರು 59, ವಿಜಯಪುರ 58, ಚಿತ್ರದುರ್ಗ 58, ಕೊಡಗು 51, ರಾಮನಗರ 41, ಯಾದಗಿರಿ 37, ಬೆಂಗಳೂರು ಗ್ರಾಮಾಂತರ 34 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ 24 ಗಂಟೆಗಳಲ್ಲಿ 5602 ಸೋಂಕಿತರು ಗುಣಮುಖ

ರಾಜ್ಯದಲ್ಲಿ 24 ಗಂಟೆಗಳಲ್ಲಿ 5602 ಸೋಂಕಿತರು ಗುಣಮುಖ

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗುತ್ತಿದೆ. ರಾಜ್ಯದಲ್ಲಿ ಗುಣಮುಖರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 5602 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರ 2972, ಬಳ್ಳಾರಿ 423, ಧಾರವಾಡ 341, ಕಲಬುರಗಿ 230, ಮೈಸೂರು 152, ಗದಗ 152, ಹಾವೇರಿ 11, ದಕ್ಷಿಣ ಕನ್ನಡ 107, ಶಿವಮೊಗ್ಗ 99, ಬೀದರ್ 97, ದಾವಣಗೆರೆ 97, ಉಡುಪಿ 80, ಕೋಲಾರ 74, ಕೊಪ್ಪಳ 73, ಉತ್ತರ ಕನ್ನಡ 72, ಚಿತ್ರದುರ್ಗ 72, ಮಂಡ್ಯ 63, ವಿಜಯಪುರ 62, ರಾಯಚೂರು 62, ಬೆಳಗಾವಿ 44, ಬಾಗಲಕೋಟೆ 33, ಬೆಂಗಳೂರು ಗ್ರಾಮಾಂತರ 32, ಚಿಕ್ಕಮಗಳೂರು 30, ಯಾದಗಿರಿ 25, ಕೊಡಗು 24, ಚಾಮರಾಜನಗರ 21, ಹಾಸನ 15, ಚಿಕ್ಕಬಳ್ಳಾಪುರ 14, ತುಮಕೂರು 13, ರಾಮನಗರ 12 ಮಂದಿ ಗುಣಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+