ಕರ್ನಾಟಕದಲ್ಲಿ 24 ಗಂಟೆಗಳಲ್ಲೇ 5503 ಮಂದಿಗೆ ಕೊವಿಡ್-19

ಬೆಂಗಳೂರು, ಜುಲೈ.29: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲೇ 5503 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

Recommended Video

      DK Shivakumar ಇಂದು ಮಂಗಳಮುಖಿಯರ ಕಷ್ಟಕ್ಕೆ ಕಿವಿ ಕೊಟ್ಟರು | Oneindia Kannada

      ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆಗೆ ಸಂಬಂಧಿಸಿದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 112504ಕ್ಕೆ ಏರಿಕೆಯಾಗಿದೆ.

      ರಾಜ್ಯದಲ್ಲಿನ ಒಟ್ಟು 112504 ಸೋಂಕಿತ ಪ್ರಕರಣಗಳ ಪೈಕಿ 42901 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 67448 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲೇ ಮಹಾಮಾರಿಗೆ 92 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಕೊರೊನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆಯು 2147ಕ್ಕೆ ಏರಿಕೆಯಾಗಿದೆ.

      ಕಳೆದ 24 ಗಂಟೆಗಳಲ್ಲಿ 16995 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 15995 ಜನರಿಗೆ RT-PCR ತಪಾಸಣೆ ನಡೆಸಲಾಗಿದೆ. ಒಂದೇ ದಿನ 32990 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 12,75,761 ಜನರಿಗೆ ಕೊವಿಡ್-19 ತಪಾಸಣೆ ಮಾಡಲಾಗಿದೆ.

      5503 New Coronavirus Cases Reported in Karnataka Today, State Tally Rise to 112504


      ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಕೊರೊನಾವೈರಸ್ ಅಟ್ಟಹಾಸ:

      ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಬೆಂಗಳೂರಿನ ಜನರನ್ನು ಪ್ರತಿನಿತ್ಯ ಆತಂಕಕ್ಕೆ ದೂಡುತ್ತಿವೆ. ಒಂದೇ ದಿನ ಸಿಲಿಕಾನ್ ಸಿಟಿಯಲ್ಲಿ 2270 ಮಂದಿಗೆ ಸೋಂಕು ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 51091ಕ್ಕೆ ಏರಿಕೆಯಾಗಿದೆ. ಒಂದೇ ದಿನ ಕೊರೊನಾವೈರಸ್ ನಿಂದಾಗಿ 30 ಮಂದಿ ಪ್ರಾಣ ಬಿಟ್ಟಿದ್ದು, ಇದುವರೆಗೂ ಬೆಂಗಳೂರು ಒಂದರಲ್ಲೇ ಹೆಮ್ಮಾರಿಗೆ 987 ಜನರು ಉಸಿರು ಚೆಲ್ಲಿದ್ದಾರೆ.

      ರಾಜ್ಯದಲ್ಲಿ ಒಟ್ಟು 5503 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 2270, ಬಳ್ಳಾರಿ 338, ಬೆಳಗಾವಿ 279, ದಾವಣಗೆರೆ 225, ದಕ್ಷಿಣ 208, ಮೈಸೂರು 200, ಧಾರವಾಡ 175, ಉಡುಪಿ 173, ಕಲಬುರಗಿ 168, ಶಿವಮೊಗ್ಗ 131, ತುಮಕೂರು 128, ಯಾದಗಿರಿ 114, ಚಿಕ್ಕಬಳ್ಳಾಪುರ 96, ಹಾಸನ 95, ಬೀದರ್ 91, ವಿಜಯಪುರ 90, ಕೊಪ್ಪಳ 84, ಉತ್ತರ ಕನ್ನಡ 75, ರಾಯಚೂರು 73, ಮಂಡ್ಯ 70, ಗದಗ 61, ಬಾಗಲಕೋಟೆ 57, ರಾಮನಗರ 56, ಚಿತ್ರದುರ್ಗ 52, ಹಾವೇರಿ 50, ಬೆಂಗಳೂರು ಗ್ರಾಮಾಂತರ 49, ಕೋಲಾರ 34, ಚಿಕ್ಕಮಗಳೂರು 33, ಚಾಮರಾಜನಗರ 20, ಕೊಡಗು 8 ಮಂದಿಗೆ ಸೋಂಕು ಪತ್ತೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+