ಕರಾಳ ಭಾನುವಾರ ಕರ್ನಾಟಕದಲ್ಲಿ ಕೊರೊನಾವೈರಸ್ ಅಂಟಿದ್ದೆಷ್ಟು ಜನರಿಗೆ?

ಬೆಂಗಳೂರು, ಆಗಸ್ಟ್.02: ಕೊರೊನಾವೈರಸ್ ಮಹಾಸ್ಫೋಟಕ್ಕೆ ಕರ್ನಾಟಕಕ್ಕೆ ಕರ್ನಾಟಕವೇ ತತ್ತರಿಸಿ ಹೋಗುತ್ತಿದೆ. ಭಾನುವಾರವೂ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 5532 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 134819ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 4077 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ 5199 ಮಂದಿಗೆ ಅಂಟಿದ ಕೊರೊನಾವೈರಸ್
ರಾಜ್ಯದ ಒಟ್ಟು 134819 ಸೋಂಕಿತ ಪ್ರಕರಣಗಳ ಪೈಕಿ ಇದುವರೆಗೂ 57725 ಮಂದಿ ಸೋಂಕಿತರು ಗುಣಮುಖರಾಗಿದ್ದು, 74590 ಸಕ್ರಿಯ ಪ್ರಕರಣಗಳಿವೆ. ಇನ್ನು, ಒಂದೇ ದಿನ ಮಹಾಮಾರಿಗೆ 84 ಮಂದಿ ಪ್ರಾಣ ಬಿಟ್ಟಿದ್ದು, ಕೊರೊನಾವೈರಸ್ ನಿಂದ ಪ್ರಾಣ ಬಿಟ್ಟವರ ಸಂಖ್ಯೆ 2496ಕ್ಕೆ ಏರಿಕೆಯಾಗಿದೆ.

ರಾಜ್ಯದ ಎಷ್ಟು ಜನರಿಗೆ ಕೊರೊನಾವೈರಸ್ ತಪಾಸಣೆ?

ರಾಜ್ಯದ ಎಷ್ಟು ಜನರಿಗೆ ಕೊರೊನಾವೈರಸ್ ತಪಾಸಣೆ?

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 18517 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 14500 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 33017 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 1418569 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲೇ 2105 ಜನರಿಗೆ ಕೊವಿಡ್-19 ಸೋಂಕು

ಸಿಲಿಕಾನ್ ಸಿಟಿಯಲ್ಲೇ 2105 ಜನರಿಗೆ ಕೊವಿಡ್-19 ಸೋಂಕು

ರಾಜ್ಯ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿದೆ. ಕಳೆದ 24 ಗಂಟೆಗಳಲ್ಲೇ 2105 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 59501ಕ್ಕೆ ಏರಿಕೆಯಾಗಿದೆ. ಒಂದೇ ದಿನ 21 ಜನರು ಕೊವಿಡ್-19ಗೆ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1077ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಕೊರೊನಾವೈರಸ್ ಸೋಂಕಿತ ಪ್ರಕರಣಗಳು

ಜಿಲ್ಲಾವಾರು ಕೊರೊನಾವೈರಸ್ ಸೋಂಕಿತ ಪ್ರಕರಣಗಳು

ರಾಜ್ಯದಲ್ಲಿ ಒಟ್ಟು 5532 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 2105, ಬಳ್ಳಾರಿ 377, ಕಲಬುರಗಿ 238, ಮೈಸೂರು 238, ರಾಯಚೂರು 212, ಉಡುಪಿ 182, ಧಾರವಾಡ 181, ದಾವಣಗೆರೆ 178, ಬೆಳಗಾವಿ 172, ದಕ್ಷಿಣ ಕನ್ನಡ 163, ಹಾವೇರಿ 146, ಹಾಸನ 142, ಬೀದರ್ 135, ಬಾಗಲಕೋಟೆ 131, ವಿಜಯಪುರ 113, ಶಿವಮೊಗ್ಗ 99, ಮಂಡ್ಯ 97, ಗದಗ 88, ಕೊಪ್ಪಳ 87, ರಾಮನಗರ 71, ಚಿಕ್ಕಬಳ್ಳಾಪುರ 55, ಕೋಲಾರ 51, ಚಿತ್ರದುರ್ಗ 46, ಚಿಕ್ಕಮಗಳೂರು 40, ಯಾದಗಿರಿ 39, ಬೆಂಗಳೂರು ಗ್ರಾಮಾಂತರ 38, ತುಮಕೂರು 35, ಚಾಮರಾಜನಗರ 31, ಉತ್ತರ ಕನ್ನಡ 26, ಕೊಡಗು 16 ಮಂದಿಗೆ ಸೋಂಕು ಅಂಟಿಕೊಂಡಿದೆ.

ಕರ್ನಾಟಕದಲ್ಲಿ ಒಂದೇ ದಿನ 4077 ಮಂದಿ ಗುಣಮುಖ

ಕರ್ನಾಟಕದಲ್ಲಿ ಒಂದೇ ದಿನ 4077 ಮಂದಿ ಗುಣಮುಖ

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗುತ್ತಿದೆ. ರಾಜ್ಯದಲ್ಲಿ ಗುಣಮುಖರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 4077 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರ 2331, ರಾಯಚೂರು 153, ತುಮಕೂರು 150, ಹಾಸನ 135, ಕಲಬುರಗಿ 117, ಬಳ್ಳಾರಿ 105, ಮೈಸೂರು 101, ರಾಮನಗರ 93, ದಾವಣಗೆರೆ 89, ಉಡುಪಿ 78, ಉತ್ತರ ಕನ್ನಡ 71, ವಿಜಯಪುರ 68, ಧಾರವಾಡ 67, ಚಿಕ್ಕಬಳ್ಳಾಪುರ 65, ಬಾಗಲಕೋಟೆ 60, ಕೋಲಾರ 59, ಬೆಳಗಾಲಿ 56, ಚಾಮರಾಜನಗರ 48, ಬೀದರ್ 45, ದಕ್ಷಿಣ ಕನ್ನಡ 45, ಹಾವೇರಿ 34, ಕೊಪ್ಪಳ 29, ಮಂಡ್ಯ 26, ಶಿವಮೊಗ್ಗ 26, ಚಿಕ್ಕಮಗಳೂರು 11, ಯಾದಗಿರಿ 9, ಗದಗ 6 ಮಂದಿ ಗುಣಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+